ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಸಿಗೆ ಬಂತೆಂದರೆ ಸಾಕು, ಬೆವರಿನಿಂದಾಗಿ ಮುಖದ ಮೇಲಿರುವ ಮೇಕಪ್ ಕೆಲವೇ ಗಂಟೆಗಳಲ್ಲಿ ಕರಗಿ ಹಾಳಾಗಿಹೋಗುತ್ತದೆ. ವಿಶೇಷ ಕಾರ್ಯಕ್ರಮಗಳಿಗೆ ಅಥವಾ ಆಫೀಸ್‌ಗೆ ಹೋಗುವಾಗ ಮೇಕಪ್ ಹಾಳಾದರೆ ಮನಸ್ಸಿಗೆ ತುಂಬಾ ಕಿರಿಕಿರಿಯಾಗುತ್ತದೆ. ಆದರೆ, ಕೆಲವು ಸರಳ ಮತ್ತು ಉಪಾಯಗಳನ್ನು ಅನುಸರಿಸಿದರೆ ಬೇಸಿಗೆಯಲ್ಲೂ ನಿಮ್ಮ ಮೇಕಪ್ ದಿನವಿಡೀ ತಾಜಾವಾಗಿರುವಂತೆ ನೋಡಿಕೊಳ್ಳಬಹುದು.
ಐಸ್ ಕ್ಯೂಬ್ ಮ್ಯಾಜಿಕ್
ಮೇಕಪ್ ಹಚ್ಚುವ ಮೊದಲು ಮುಖವನ್ನು ಸ್ವಚ್ಛವಾಗಿ ತೊಳೆದು, ಒಂದು ಐಸ್ ಕ್ಯೂಬ್‌ನಿಂದ ಮೃದುವಾಗಿ ಮಸಾಜ್ ಮಾಡಿ. ಇದು ಚರ್ಮದ ರಂಧ್ರಗಳನ್ನು ಸಣ್ಣದಾಗಿಸಿ, ಬೆವರು ಮತ್ತು ಎಣ್ಣೆಯಂಶ ಹೊರಬರುವುದನ್ನು ತಡೆಯುತ್ತದೆ.
ಪ್ರೈಮರ್ ಹಚ್ಚಲು ಮರೆಯಬೇಡಿ
ಮೇಕಪ್ ದೀರ್ಘಕಾಲ ಉಳಿಯಲು ‘ಪ್ರೈಮರ್’ ಅತ್ಯಂತ ಮುಖ್ಯ. ಬೇಸಿಗೆಯಲ್ಲಿ ‘ಮ್ಯಾಟಿಫೈಯಿಂಗ್ ಪ್ರೈಮರ್’ ಬಳಸಿ. ಇದು ಮುಖದ ಮೇಲಿನ ಎಣ್ಣೆಯಂಶವನ್ನು ಹೀರಿಕೊಂಡು, ಮೇಕಪ್‌ಗೆ ಸೂಕ್ತವಾದ ಬೇಸ್ ನೀಡುತ್ತದೆ.
ಲೈಟ್ ವೇಟ್ ಮೇಕಪ್
ಬೇಸಿಗೆಯಲ್ಲಿ ದಪ್ಪಗಿನ ಫೌಂಡೇಶನ್ ಹಚ್ಚಬೇಡಿ. ಬದಲಾಗಿ, ‘BB’, ‘CC ಕ್ರೀಮ್’ ಅಥವಾ ಹಗುರವಾದ ‘ವಾಟರ್-ಬೇಸ್ಡ್ ಫೌಂಡೇಶನ್’ ಬಳಸಿ. ಇದು ಚರ್ಮಕ್ಕೆ ಹಗುರವಾದ ಅನುಭವ ನೀಡುವುದಲ್ಲದೆ, ಮುಖ ಬೆವರಿದರೂ ಕರಗುವುದಿಲ್ಲ.
ಸೆಟ್ಟಿಂಗ್ ಸ್ಪ್ರೇ
ಮೇಕಪ್ ಮುಗಿದ ತಕ್ಷಣ ‘ಮೇಕಪ್ ಸೆಟ್ಟಿಂಗ್ ಸ್ಪ್ರೇ’ ಅನ್ನು ಮುಖದ ಮೇಲೆ ಸ್ಪ್ರೇ ಮಾಡಿ. ಹೊರಗೆ ಹೋಗುವಾಗ ಜತೆಯಲ್ಲಿ ‘ಬ್ಲಾಟಿಂಗ್ ಪೇಪರ್’ ಇಟ್ಟುಕೊಳ್ಳಿ. ಮುಖ ಎಣ್ಣೆಯಂತಾದಾಗ ಪೇಪರ್‌ನಿಂದ ಮೆಲ್ಲಗೆ ಒತ್ತಿಕೊಂಡರೆ ಮೇಕಪ್ ಹಾಳಾಗದೆ ಹೆಚ್ಚುವರಿ ಎಣ್ಣೆಯಂಶ ಕಡಿಮೆಯಾಗುತ್ತದೆ. ಇದು ನಿಮ್ಮ ಇಡೀ ಮೇಕಪ್ ಅನ್ನು ಒಂದೇ ಜಾಗದಲ್ಲಿ ಲಾಕ್ ಮಾಡಿ, ಇಡೀ ದಿನ ಕರಗದಂತೆ ರಕ್ಷಿಸುತ್ತದೆ.
ಬೇಸಿಗೆಯಲ್ಲಿ ವಾಟರ್‌ಪ್ರೂಫ್ ಮಸ್ಕಾರಾ ಮತ್ತು ಐಲೈನರ್ ಮಾತ್ರ ಬಳಸಿ. ಮುಖದಲ್ಲಿ ಬೆವರು ಕಂಡುಬಂದರೆ ಒರೆಸುವ ಬದಲು ಬ್ಲಾಟಿಂಗ್ ಪೇಪರ್ ಬಳಸಿ ಲಘುವಾಗಿ ಒತ್ತಿ ತೆಗೆಯಿರಿ. ಈ ಸರಳ ಸೂತ್ರಗಳನ್ನು ಅನುಸರಿಸಿ, ಬೇಸಿಗೆಯಲ್ಲೂ ಸದಾ ಗ್ಲೋ ಆಗಿರಿ.



