April 26, 2026
Sunday, April 26, 2026
spot_img

ಆಳಂದ ಮತಗಳ್ಳತನ ಆರೋಪ: ರಾಹುಲ್ ಗಾಂಧಿ ಜೊತೆ ನಾನು ನಿಲ್ಲುತ್ತೇನೆ ಎಂದ ಡಿಕೆ ಶಿವಕುಮಾರ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಹುಲ್ ಗಾಂಧಿ ಅವರ ‘ಆಳಂದ’ ಮತಗಳ್ಳತನ ಆರೋಪಕ್ಕೆ ನಾನು ದೃಢವಾಗಿ ನಿಲ್ಲುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಆಳಂದ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂಬ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಆರೋಪದ ಕುರಿತು ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡ ಅವರು, ನಾನು ರಾಹುಲ್ ಗಾಂಧಿ ಅವರ ಜೊತೆ ದೃಢವಾಗಿ ನಿಲ್ಲುತ್ತೇನೆ. ಭಾರತದ ಜನ ಪಾರದರ್ಶಕತೆ, ನ್ಯಾಯಸಮ್ಮತತೆಗೆ ಅರ್ಹರು. ಆದರೆ ಮತದಾರರನ್ನು ಗುರಿಯಾಗಿಸಿಕೊಂಡು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಗುಪ್ತ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದಿದ್ದಾರೆ.

ಕಾಂಗ್ರೆಸ್‌ನ ಬಲಿಷ್ಠ ಬೂತ್‌ಗಳಲ್ಲಿ ಕಾನೂನುಬದ್ಧ ಮತಗಳನ್ನು ಅಳಿಸಲು ಸಾಫ್ಟ್‌ವೇರ್‌, ಹೊರಗಿನವರ ಹಸ್ತಕ್ಷೇಪ ಬಳಕೆ ಆಳಂದ ಕ್ಷೇತ್ರದ ಸಾಕ್ಷಿಗಳಿಂದ ಗೊತ್ತಾಗುತ್ತದೆ. ಇದು ಆಘಾತಕಾರಿ. ಜನರ ಧ್ವನಿಯನ್ನು ಅಡಗಿಸಲು ಉದ್ದೇಶಪೂರ್ವಕ ಮತ್ತು ಯೋಜಿತ ಪ್ರಯತ್ನವಾಗಿದೆ. ನಾವು ನಮ್ಮ ಧ್ವನಿ ಎತ್ತುವುದನ್ನ, ದಾಖಲೆಗಳನ್ನ ಬಹಿರಂಗಪಡಿಸುವುದನ್ನ ಮುಂದುವರಿಸುತ್ತೇವೆ, ವೋಟ್ ಚೋರಿ ಫ್ಯಾಕ್ಟರಿ ಎಂದು ಬರೆದುಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !