October 26, 2026
Monday, October 26, 2026
spot_img

ಭಾರತದ ಇಂಧನ ಕ್ಷೇತ್ರದಲ್ಲಿ ಹೊಸ ಬದಲಾವಣೆ: E100 ಬಳಕೆಗೆ ಕೇಂದ್ರದ ಗ್ರೀನ್ ಸಿಗ್ನಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕಚ್ಚಾ ತೈಲ ಆಮದಿನ ಮೇಲಿನ ಅವಲಂಬನೆ ಕಡಿಮೆ ಮಾಡುವ ಉದ್ದೇಶದಿಂದ ಭಾರತದಲ್ಲಿ ಎಥನಾಲ್ ಆಧಾರಿತ ಇಂಧನ ಬಳಕೆಗೆ ಮತ್ತೊಂದು ಹೆಜ್ಜೆ ಇಡಲಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಕೇಂದ್ರ ಮೋಟಾರು ವಾಹನ ನಿಯಮಗಳಿಗೆ ತಿದ್ದುಪಡಿ ತಂದಿದ್ದು, ಫ್ಲೆಕ್ಸ್‌-ಫ್ಯೂಯೆಲ್ ವಾಹನಗಳಲ್ಲಿ E85 ಜೊತೆಗೆ E100 ಇಂಧನ ಬಳಕೆಗೂ ಅಧಿಕೃತ ಅನುಮೋದನೆ ನೀಡಿದೆ.

ಅಕ್ಟೋಬರ್ 23ರಂದು ಹೊರಡಿಸಲಾದ ಅಧಿಸೂಚನೆ ಅಕ್ಟೋಬರ್ 26ರಂದು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಗೊಂಡಿದ್ದು, ತಕ್ಷಣದಿಂದಲೇ ಜಾರಿಗೆ ಬಂದಿದೆ.

ಏನಿದು E100 ಇಂಧನ?

E100 ಎಂದರೆ ಶೇಕಡಾ 100ರಷ್ಟು ಎಥನಾಲ್ ಹೊಂದಿರುವ ಅಥವಾ ಅದಕ್ಕೆ ಸಮೀಪದ ಪ್ರಮಾಣದ ಎಥನಾಲ್ ಇಂಧನ. E85ನಲ್ಲಿ ಶೇಕಡಾ 85ರಷ್ಟು ಎಥನಾಲ್ ಮತ್ತು ಶೇಕಡಾ 15ರಷ್ಟು ಪೆಟ್ರೋಲ್ ಇರುತ್ತದೆ. ಇಂತಹ ಇಂಧನಗಳ ಬಳಕೆಗೆ ಅನುಗುಣವಾಗಿ ರೂಪಿಸಲಾದ ಫ್ಲೆಕ್ಸ್‌-ಫ್ಯೂಯೆಲ್ ವಾಹನಗಳು ಪೆಟ್ರೋಲ್‌ನಿಂದ ಹಿಡಿದು ಹೆಚ್ಚಿನ ಎಥನಾಲ್ ಮಿಶ್ರಣದವರೆಗೆ ವಿವಿಧ ಇಂಧನಗಳನ್ನು ಬಳಸಬಲ್ಲವು. ಇಂಧನದ ಮಿಶ್ರಣಕ್ಕೆ ಅನುಗುಣವಾಗಿ ಎಂಜಿನ್ ಕಾರ್ಯವೈಖರಿಯನ್ನು ಹೊಂದಿಸಿಕೊಳ್ಳಲು ಇವುಗಳಲ್ಲಿ ವಿಶೇಷ ತಂತ್ರಜ್ಞಾನವಿರುತ್ತದೆ.

ಇದನ್ನೂ ಓದಿ:

ಸಾಮಾನ್ಯ ವಾಹನಗಳಿಗೆ ಬಳಸಬಹುದೇ?

E100 ಅನುಮೋದನೆ ದೊರೆತಿದ್ದರೂ, ಈಗಾಗಲೇ ಬಳಕೆಯಲ್ಲಿರುವ ಎಲ್ಲ ಪೆಟ್ರೋಲ್ ವಾಹನಗಳಿಗೆ ಈ ಇಂಧನವನ್ನು ಬಳಸಲು ಸಾಧ್ಯವಿಲ್ಲ. E85 ಅಥವಾ E100 ಬಳಕೆಗೆ ವಾಹನವು ಸೂಕ್ತವಾಗಿ ವಿನ್ಯಾಸಗೊಂಡು ಪ್ರಮಾಣೀಕೃತವಾಗಿರಬೇಕು. ಎಥನಾಲ್‌ನ ಗುಣಲಕ್ಷಣಗಳಿಗೆ ಹೊಂದಿಕೊಳ್ಳುವಂತೆ ಇಂಧನ ಪೈಪ್‌ಗಳು, ಸೀಲ್‌ಗಳು, ಇಂಜೆಕ್ಟರ್‌ಗಳು ಮತ್ತು ಎಂಜಿನ್ ನಿಯಂತ್ರಣ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯವಾಗಬಹುದು.

ಇಂಧನ ಉಳಿತಾಯಕ್ಕೆ ಸವಾಲುಗಳೂ ಇವೆ

ಎಥನಾಲ್ ಪ್ರತಿ ಲೀಟರ್‌ಗೆ ಪೆಟ್ರೋಲ್‌ಗಿಂತ ಕಡಿಮೆ ಶಕ್ತಿಯನ್ನು ನೀಡುತ್ತದೆ. ಹೀಗಾಗಿ ವಾಹನದ ಮೈಲೇಜ್ ಮತ್ತು ಇಂಧನ ತುಂಬಿಸುವ ಅವಧಿಯ ಮೇಲೆ ಪರಿಣಾಮ ಉಂಟಾಗಬಹುದು.

Must Read

Skip to toolbar