October 26, 2026
Monday, October 26, 2026
spot_img

ಅಂಕೋಲಾದಲ್ಲಿ ಸೈಬರ್ ವಂಚಕರ ಕೈಚಳಕ: ಮಹಿಳೆಯ ಬ್ಯಾಂಕ್ ಖಾತೆಯಿಂದ 3 ಲಕ್ಷ ರೂ. ದೋಚಿದ ಖದೀಮರು

ಹೊಸದಿಗಂತ ವರದಿ ಅಂಕೋಲಾ:

ಅಂಕೋಲಾ ತಾಲೂಕಿನ ಗಣಪತಿ ಗಲ್ಲಿಯ ಮಹಿಳೆಯೋರ್ವರ ಮೊಬೈಲ್ ಪೋನ್ ಹ್ಯಾಕ್ ಮಾಡಿರುವ ವಂಚಕರು ಅವರ ಬ್ಯಾಂಕ್ ಖಾತೆಯಿಂದ 3 ಲಕ್ಷ ರೂಪಾಯಿಗಳನ್ನು ತಮ್ಮ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದು ಈ ಕುರಿತಂತೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಲೂಕಿನ ಗಣಪತಿ ಗಲ್ಲಿಯ ನಿವಾಸಿ ಮಹಿಳೆಯ ಮಗಳು ಅಕ್ಟೋಬರ 21 ರಂದು ಸಾಯಂಕಾಲ ರೈಲ್ವೆ ಆಪ್ ನಲ್ಲಿ ಮಂಗಳೂರಿಗೆ ಹೋಗುವ ರೈಲಿನ ಕುರಿತು ಪರಿಶೀಲನೆ ನಡೆಸುತ್ತಿರುವ ಸಂದರ್ಭದಲ್ಲಿ ತನ್ನ ತಾಯಿಯ ಕೆನರಾ ಬ್ಯಾಂಕ್ ಖಾತೆಯಿಂದ 49999 ರಂತೆ ಎರಡು ಬಾರಿಯಂತೆ 99999 ರೂಪಾಯಿ ಹಣ ಖಡಿತ ಆಗಿರುವುದು ಗಮನಕ್ಕೆ ಬಂದಿದ್ದು ಅವರು ಕೂಡಲೇ ಸೈಬರ್ ಅಪರಾಧ ಹೆಲ್ಫ್ ಲೈನ್ 1930 ಗೆ ಕರೆ ಮಾಡಿ ದೂರು ದಾಖಲಿಸಿದ್ದಾರೆ.

ನಂತರ ತಾಯಿಯ ಖಾತೆಯಲ್ಲಿ ಇರುವ ಹಣವನ್ನು ಬೇರೆ ಖಾತೆಗೆ ವರ್ಗಾಯಿಸಲು ನೋಡಿದಾಗ ಅದು ಸಾಧ್ಯವಾಗದ ಕಾರಣ ಕೂಡಲೇ ಖಾತೆಯನ್ನು ಪರಿಶೀಲಿಸಿದಾಗ ಎರಡು ಬಾರಿ ತಲಾ 1 ಲಕ್ಷ ರೂಪಾಯಿಯಂತೆ ಹಣ ಕಡಿತವಾಗಿರುವುದು ಕಂಡು ಬಂದಿದ್ದು ಒಟ್ಟು 3 ಲಕ್ಷ ರೂಪಾಯಿ ಹಣವನ್ನು ಬ್ಯಾಂಕ್ ಖಾತೆಯಿಂದ ವರ್ಗಾವಣೆ ಮಾಡಿ ಮೋಸ ಮಾಡಿರುವುದು ಗಮನಕ್ಕೆ ಬಂದಿದೆ.

ಈ ಕುರಿತು ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದುವರಿದಿದೆ.

Must Read