October 27, 2026
Tuesday, October 27, 2026
spot_img

ಕಬ್ಬು ದರ ಬಿಕ್ಕಟ್ಟಿಗೆ ಸಿಕ್ಕಿತು ಮುಕ್ತಿ: ಸಿಎಂ ಡಿ.ಕೆ. ಶಿವಕುಮಾರ್ ಮಧ್ಯಸ್ಥಿಕೆಯ ಸಂಧಾನ ಸಭೆ ಯಶಸ್ವಿ

ಹೊಸದಿಗಂತ ವರದಿ ಬೆಳಗಾವಿ: 

ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ನಡುವಿನ ದರದ ಬಿಕ್ಕಟ್ಟು ಶಮನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಧ್ಯಸ್ಥಿಕೆಯಲ್ಲಿ ನಡೆದ ಸಂಧಾನ ಮಾತುಕತೆ ಸೋಮವಾರಮಧ್ಯರಾತ್ರಿವರೆಗೂ ಮುಂದುವರಿದು ಯಶಸ್ವಿಯಾಗಿದೆ. 

ಕೇಂದ್ರ ಸರ್ಕಾರ ಕಬ್ಬಿನ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿಪಡಿಸಿದ ಬಳಿಕ ಕಾರ್ಖಾನೆಗಳು ರೈತರಿಗೆ ನೀಡಬೇಕಾದ ದರದ ಕುರಿತು ನಿರ್ಧಾರ ಕೈಗೊಳ್ಳಲು ಒಪ್ಪಿಗೆ  ವ್ಯಕ್ತವಾಗಿದೆ. ಈ ಕುರಿತು ರೈತರು ಹಾಗೂ ಕಾರ್ಖಾನೆ ಮಾಲೀಕರು ಎರಡು ದಿನಗಳಲ್ಲಿ ಅಂತಿಮ ತೀರ್ಮಾನ ಪ್ರಕಟಿಸಲಿದ್ದಾರೆ.

ಬೆಳಗಾವಿಯ ಸುವರ್ಣ ವಿಧಾನಸೌಧ ಹಾಗೂನಗರದ ಸರ್ಕಿಟ್ ಹೌಸ್‌ನಲ್ಲಿ ಸೋಮವಾರ ಬೆಳಗ್ಗೆಯಿಂದ ಮಧ್ಯರಾತ್ರಿವರೆಗೆ ಸುಮಾರು 10 ಗಂಟೆಗಳ ಕಾಲ ಐದು ಸುತ್ತಿನ ಸಬೆ ನಡೆಸಲಾಯಿತು. ಒಂಬತ್ತು ಸಚಿವರು, 70 ಶಾಸಕರು, 80ಕಾರ್ಖಾನೆಗಲ ಪೈಕಿ 79 ಕಾರ್ಖಾನೆಗಳ ಪ್ರತಿನಿಧಿಗಳು ಹಾಗೂ ರೈತ ಮುಖಂಡರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಸಭೆಯ ಬಳಿಕ ಮಾತನಾಡಿದ ಡಿ.ಕೆ. ಶಿವಕುಮಾರ್, ರೈತರು ಮತ್ತು ಕಾರ್ಖಾನೆಗಳು ಉಳಿಯುವುದು ಸರ್ಕಾರದ ಉದ್ದೇಶವಾಗಿದೆ. ಕೇಂದ್ರ ಸಚಿವರು ನೀಡಿದ ಭರವಸೆಯಂತೆ ಎಂಎಸ್‌ಪಿ ನಿಗದಿಯಾದ ಬಳಿಕ ರೈತರಿಗೆ ನೀಡಬೇಕಾದ ದರದ ಬಗ್ಗೆ ನಿರ್ಧಾರ ಕೈಗೊಳ್ಳಲು ಕಾರ್ಖಾನೆ ಮಾಲೀಕರು ಒಪ್ಪಿದ್ದಾರೆ. ರೈತರು ಎರಡು ದಿನಗಳ ಕಾಲಾವಕಾಶ  ಕೇಳಿದ್ದು, ಪರಸ್ಪರ ಚರ್ಚಿಸಿ ಅಂತಿಮ ತೀರ್ಮಾನ ಪ್ರಕಟಿಸಲಿದ್ದಾರೆ ಎಂದರು.

ಇದನ್ನೂ ಓದಿ:

ರೈತರ ಹಿತ ಕಾಯಲು ಸರ್ಕಾರ ಬದ್ಧವಾಗಿದ್ದು, ಕೇಂದ್ರ ಸರ್ಕಾರದೊಂದಿಗೆ ಮಾತುಕತೆಗೂ ಸಿದ್ಧವಿದೆ ಎಂದು ತಿಳಿಸಿದರು. 

ಈ ವೇಳೆ ಸಚಿವ ಸತೀಶ್ ಜರಕಿಹೊಳಿ,ಲಕ್ಷ್ಮಣ ಸವದಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್‌ ಸೇರಿದಂತೆ ಜನಪ್ರತಿನಿಧಿಗಳು, ರೈತ ಮುಖಂಡರು, ಕಾರ್ಖಾನೆ ಮಾಲೀಕರು ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Must Read

Skip to toolbar