October 27, 2026
Tuesday, October 27, 2026
spot_img

ಸಿನಿಮಾ ಹಾಲ್‌ ಎಂಟ್ರಿ ಅದ್ಭುತವಾಗಿದ್ದು, ಎಕ್ಸಿಟ್‌ ಮಾತ್ರ ಯಾಕಷ್ಟು ಕೆಟ್ಟದಾಗಿರುತ್ತದೆ? ಇದರ ಹಿಂದಿನ ಸೈಕಾಲಜಿ ಇದು!

ಸಿನಿಮಾ ನೋಡೋದಕ್ಕೆ ಎಂಟ್ರಿಯಾಗುವ ವೇಳೆ ನೀವು ಪ್ರೀಮಿಯಂ ಫೀಲಿಂಗ್‌ ಪಡೆಯುತ್ತೀರಿ. ನಾನು ಒಂದು ರಿಚ್‌ ಆಗಿರುವ ಜಾಗಕ್ಕೆ ಆಗಮಿಸಿದ್ದೀನಿ ಎನ್ನುವ ಭಾವನೆ ನಿಮ್ಮಲ್ಲಿ ಹುಟ್ಟುತ್ತದೆ. ಅಲ್ಲಿರುವ ವಾರ್ಮ್‌ ಲೈಟ್ಸ್‌, ಪ್ರೀಮಿಯಂ ಫ್ಲೋರ್ಸ್‌, ಪಾಪ್‌ಕಾರ್ನ್‌ನ ಘಮ ನಿಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡಿ ನೀವು ಶ್ರೀಮಂತರು ಎನ್ನುವ ಫೀಲಿಂಗ್‌ ನೀಡುತ್ತದೆ. ಆದರೆ ಸಿನಿಮಾ ಮುಗಿಸಿ ಹೊರಗೆ ಹೋಗುವ ಎಕ್ಸಿಟ್‌ ತುಂಬಾ ಸಾಧಾರಣವಾಗಿರುತ್ತದೆ. ಪ್ಲೇನ್‌ ಗೋಡೆ, ಹಾರ್ಷ್‌ ಆಗಿರುವ ಬಿಳಿ ಲೈಟ್‌ ನಿಮ್ಮನ್ನು ತಕ್ಷಣವೇ ರಿಯಾಲಿಟಿಗೆ ಕರೆತರುತ್ತದೆ. ಇದರ ಹಿಂದಿರುವ ಸೈಕಾಲಜಿ ಏನು? ತಿಳಿಯೋಣ ಬನ್ನಿ..

ಸಿನಿಮಾ ಥಿಯೇಟರ್‌ಗೆ ಎಂಟ್ರಿ ಕೊಡುವವರು ಹಣ ಕೊಟ್ಟು ಬರುತ್ತಾರೆ. ಹಣಕ್ಕೆ ತಕ್ಕಂತಹ ಎಕ್ಸ್‌ಪೀರಿಯನ್ಸ್‌ ನಿಮಗೆ ಸಿಗುತ್ತದೆ. ಬಂದ ತಕ್ಷಣವೇ ನೆಲ, ಲೈಟಿಂಗ್‌, ನಮಸ್ಕರಿಸುತ್ತಾ ನಿಲ್ಲುವ ಎಂಪ್ಲಾಯಿಗಳು ನಿಮ್ಮನ್ನು ರಾಜನಂತೆ ಕಾಣುತ್ತಾರೆ. ಇದನ್ನು ನೀವು ಎಂಜಾಯ್‌ ಮಾಡುತ್ತೀರಿ. ನಿಮ್ಮ ಮೆದುಳು, ಈ ಥಿಯೇಟರ್‌ ಅದ್ಭುತವಾಗಿದೆ, ಇಲ್ಲಿ ಪ್ರೀಮಿಯಂ ವ್ಯವಸ್ಥೆ ಇದೆ. ಕಷ್ಟವಾದರೂ ಪರವಾಗಿಲ್ಲ ನಾನು ಇಲ್ಲಿಗೆ ತಕ್ಕ ಹಾಗೆ ಇರುತ್ತೇನೆ. ಖರೀದಿ ಮಾಡುತ್ತೇನೆ ಎಂದು ನಿರ್ಧರಿಸುತ್ತದೆ. ಒಂದು ಎಕ್ಸ್‌ಪೀರಿಯನ್ಸ್‌ ಪ್ರೀಮಿಯಂ ಆದ ನಂತರ ಇನ್ನೆಲ್ಲವೂ ಪ್ರೀಮಿಯಂ ಎನಿಸೋದಕ್ಕೆ ಆರಂಭವಾಗುತ್ತದೆ.

ಇದೇ ಕಾರಣಕ್ಕೆ ಏಳುನೂರು ರೂಪಾಯಿ ಕೊಟ್ಟು ಪಾಪ್‌ಕಾರ್ನ್‌, ಐನೂರು ರೂಪಾಯಿ ಕೊಟ್ಟು ಕೋಕ್‌ ಅಥವಾ ಕಾಫಿ ಕುಡಿಯೋದಕ್ಕೆ ಮನಸ್ಸು ಮಾಡುತ್ತೀರಿ. ಸಿನಿಮಾ ಮುಗಿದ ನಂತರ ಎಕ್ಸಿಟ್‌ ಕಡೆಗೆ ಹೊರಟಾಗ ರಿಯಾಲಿಟಿ ನಿಮ್ಮನ್ನು ಅಣಕಿಸುತ್ತದೆ. ಕೆಟ್ಟ ಟೈಲ್ಸ್‌, ಬೇಸಿಕ್‌ ಲೈಟ್ಸ್‌ ಕಣ್ಣಿಗೆ ಚುಚ್ಚುವಂತಾಗುತ್ತದೆ. ಇದರ ಹಿಂದೆಯೂ ಸೈಕಾಲಜಿ ಇದೆ! ಚಂದದ ವಾತಾವರಣದಿಂದ ಮಂದ ಬೆಳಕಿನಿಂದ ಹಾರ್ಷ್‌ ಆದ ಬೆಳಕಿಗೆ ಹೋದಾಗ ಜನರಿಗೆ ಇಷ್ಟವಾಗೋದಿಲ್ಲ. ಕಣ್ಣು ಉರಿದಂತೆ ಭಾಸವಾಗುತ್ತದೆ. ಈ ಕಾರಣದಿಂದ ಎಲ್ಲರೂ ಬೇಗ ಬೇಗ ಹೆಜ್ಜೆ ಹಾಕುತ್ತಾರೆ.

ಈ ರೀತಿ ಜನ ಬೇಗ ಹೋದರೆ ಥಿಯೇಟರ್‌ ಬೇಗ ಖಾಲಿ ಆಗುತ್ತದೆ. ಆಗ ಎಂಪ್ಲಾಯಿಗಳು ಥಿಯೇಟರ್‌ ಕ್ಲೀನ್‌ ಮಾಡಿ ಮುಂದಿನ ಬ್ಯಾಚ್‌ ಆಗಮನಕ್ಕೆ ತಯಾರಿ ಮಾಡಿಕೊಳ್ಳುತ್ತಾರೆ. ಸಿಂಪಲ್‌ ಆಗಿ ಹೇಳಬೇಕೆಂದರೆ ದುಡ್ಡು ಕೊಟ್ಟ ಬಂದ ನಿಮ್ಮನ್ನು ಕೆಲವು ಗಂಟೆಗಳವರೆಗೆ ಎಂಟರ್‌ಟೈನ್‌ ಮಾಡಲಾಗುತ್ತದೆ. ತದನಂತರ ನೀವು ಯಾವುದೇ ಲಾಭ ನೀಡುವುದಿಲ್ಲ. ಹೀಗಾಗಿ ನಿಮ್ಮನ್ನು ರಾಜರ ರೀತಿಯೇ ಕಳಿಸುವ ಗೋಜಿಗೆ ಥಿಯೇಟರ್‌ಗಳು ಹೋಗೋದಿಲ್ಲ!

Must Read