ಮೇಷ.
ಮನೆ ವಿಷಯದಲ್ಲಿ ಏನೋ ಚಿಂತೆ ಕಾಡುತ್ತದೆ. ಕೆಲ ವಿಚಾರಗಳಲ್ಲಿ ನಿಮ್ಮಲ್ಲೇ ಗೊಂದಲವಿದೆ. ಶಾಂತ, ಸ್ಪಷ್ಟ ಮನಸ್ಸು ರೂಪಿಸಿಕೊಳ್ಳಿ.
ವೃಷಭ
ಮನಸ್ಸಿನಲ್ಲಿ ತಾಕಲಾಟ. ಕೆಲಸದ ಮೇಲೆ ಏಕಾಗ್ರತೆ ನಿಲ್ಲದು. ತಪ್ಪು ಸಂಭವಿಸಬಹುದು. ಕೆಲವು ದಿನ ಪ್ರಮುಖ ನಿರ್ಧಾರ ತಾಳಬೇಡಿ.
ಮಿಥುನ
ಹಣಕಾಸು ಸ್ಥಿತಿ ಅಷ್ಟೇನೂ ಗಟ್ಟಿಯಾಗಿಲ್ಲ. ವೆಚ್ಚ ನಿಯಂತ್ರಿಸಿ. ಕೇಳಿದ್ದೆಲ್ಲ ನಂಬಬೇಡಿ. ಕ್ಲಿಷ್ಟ ಪರಿಸ್ಥಿತಿಯಲ್ಲಿ ಅತಿವಿಶ್ವಾಸ, ದುಡುಕು ತೋರಬೇಡಿ.
ಕಟಕ
ಮುಂದಿನ ಕೆಲ ದಿನ ಪ್ರತಿಯೊಂದನ್ನೂ ಸ್ಪಷ್ಟವಾಗಿ ನಿಭಾಯಿಸಿ. ಯಾವುದೇ ಗೊಂದಲಕ್ಕೆ ಅವಕಾಶ ಕೊಡಬೇಡಿ. ಚಂಚಲತೆ ಒಳಿತಲ್ಲ.
ಸಿಂಹ
ಇಂದು ಕೆಲಸದಲ್ಲಿ ಉದಾಸೀನತೆ. ಆಪ್ತರು ಮತ್ತು ಮನೆಯ ಸುತ್ತಲೇ ಮನಸ್ಸು ತಿರುಗುತ್ತಿರುತ್ತದೆ. ಕಾನೂನು ತೊಡಕಿದ್ದರೆ ಪ್ರತಿಕೂಲ ಬೆಳವಣಿಗೆ.
ಕನ್ಯಾ
ಆಪ್ತರ ಜತೆ ವ್ಯವಹರಿಸುವಲ್ಲಿ ನಿಮ್ಮ ಅಹಂ ಸಮಸ್ಯೆ ತರುತ್ತದೆ. ಅವರ ಬಗ್ಗೆ ಸೂಕ್ತ ಸ್ಪಂದನೆ ಇರಲಿ. ಸಣ್ಣ ಮಾತಿಗೂ ಜಗಳಕ್ಕೆ ಇಳಿಯಬೇಡಿ.
ತುಲಾ
ನಿಮ್ಮ ಸುತ್ತಲೂ ಕೋಲಾಹಲ ಪರಿಸ್ಥಿತಿ ಉಂಟಾದೀತು. ನೀವಂತೂ ಸಹನೆಯಿಂದ ಇರಿ. ದುಡುಕಿನಿಂದ ಪ್ರತಿಕ್ರಿಯೆ ತೋರಬೇಡಿ.
ವೃಶ್ಚಿಕ
ಕಾಡುವ ಸಮಸ್ಯೆಗೆ ಪರಿಹಾರದ ದಾರಿ ತೋರಲಿದೆ. ಆದರೆ ನಿಮ್ಮ ನಿಲುವಿನಲ್ಲಿ ಸ್ಪಷ್ಟತೆ ಇರಲಿ.ಇತರರ ಸಲಹೆಗೆ ಮನಸ್ಸು ತೆರೆದಿರಲಿ. ಧನವ್ಯಯ.
ಧನು
ಅಸಂತೃಪ್ತಿ. ಇನ್ನೂ ಗಳಿಸಬೇಕೆಂಬ ಹಪಾಹಪಿ. ಆದರೆ ಆ ನಿಟ್ಟಿನಲ್ಲಿ ಪ್ರಯತ್ನ ಶೂನ್ಯ. ಇದು ಇಂದಿನ ನಿಮ್ಮ ಧೋರಣೆ. ಕೌಟುಂಬಿಕ ಅಸಹಕಾರ.
ಮಕರ
ಅದೃಷ್ಟ ಇಂದು ನಿಮ್ಮ ಜತೆಗಿಲ್ಲ. ಯಾವುದಾದರೂ ಯೋಜನೆ ಇದ್ದಲ್ಲಿ ಮುಂದೂಡಿ. ಜೇಬಿಗೆ ದೊಡ್ಡ ಕತ್ತರಿ ಬೀಳುವ ಖರ್ಚು ಒದಗೀತು.
ಕುಂಭ
ಏರುಪೇರಿನ ದಿನ. ಆಪ್ತರ ಜತೆ ಜಗಳ. ಸಂವಹನದ ಕೊರತೆ. ಕೆಲಸದಲ್ಲಿ ವಿಳಂಬ. ಕಾಲು,ಬೆನ್ನು ನೋವಿನ ಸಮಸ್ಯೆ ಸಂಭವ.
ಮೀನ
ಹೃದಯದ ಭಾವನೆ ಮುಚ್ಚಿಡಬೇಡಿ. ಸಂಬಂಽಸಿದವರ ಮುಂದೆ ತೆರೆದಿಡಿ. ಆರ್ಥಿಕ ಪರಿಸ್ಥಿತಿ ಉತ್ತಮ. ಬಂಧುವೊಬ್ಬರ ಆರೋಗ್ಯ ಕೆಡಬಹುದು.



