November 1, 2026
Sunday, November 1, 2026
spot_img

ಬಿಸಿಲಿಗೆ ತಂಪು, ಬಾಯಿಗೆ ರುಚಿ.. ಜಸ್ಟ್ ಐದೇ ನಿಮಿಷದಲ್ಲಿ ಟ್ರೈ ಮಾಡಿ ಬಾದಾಮ್ ಲಸ್ಸಿ

ಬೇಕಾಗುವ ಸಾಮಗ್ರಿಗಳು:

ಮೊಸರು

ಬಾದಾಮಿ

ಸಕ್ಕರೆ

ಏಲಕ್ಕಿ ಪುಡಿ

ಹಾಲು

ಕೇಸರಿ ದಳ

ಮಾಡುವ ವಿಧಾನ

ಮೊದಲಿಗೆ ನೆನೆಸಿಟ್ಟ ಬಾದಾಮಿಯನ್ನು ಸ್ವಲ್ಪ ಹಾಲು ಅಥವಾ ನೀರಿನೊಂದಿಗೆ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಮಿಕ್ಸಿ ಜಾರಿಗೆ ಗಟ್ಟಿ ಮೊಸರು, ಸಕ್ಕರೆ, ಬಾದಾಮಿ ಪೇಸ್ಟ್, ಏಲಕ್ಕಿ ಪುಡಿ ಮತ್ತು ಹಾಲು ಹಾಕಿ ಚೆನ್ನಾಗಿ ನೊರೆ ಬರುವವರೆಗೆ ಬ್ಲೆಂಡ್ ಮಾಡಿ. ಈಗ ಗ್ಲಾಸ್‌ಗೆ ಸುರಿಯಿರಿ. ಮೇಲೆ ಸ್ವಲ್ಪ ಕೇಸರಿ ದಳ ಮತ್ತು ಸಣ್ಣಗೆ ಹೆಚ್ಚಿದ ಬಾದಾಮಿ-ಪಿಸ್ತಾ ತುಂಡುಗಳಿಂದ ಅಲಂಕರಿಸಿ. ಫ್ರಿಡ್ಜ್‌ನಲ್ಲಿಟ್ಟು ತಣ್ಣಗೆ ಸವಿದರೆ ಈ ಬಾದಾಮ್ ಲಸ್ಸಿ ನಿಮ್ಮ ಮನಸ್ಸಿಗೆ ಮತ್ತು ದೇಹಕ್ಕೆ ತಂಪಾದ ಅನುಭವ ನೀಡುತ್ತದೆ.

Must Read