October 31, 2026
Saturday, October 31, 2026
spot_img

SNACKS | ಸಂಜೆ ಸ್ನಾಕ್ಸ್ ಗೆ ಟ್ರೈ ಮಾಡಿ ರೆಸ್ಟೋರೆಂಟ್ ಶೈಲಿಯ ಕ್ರಿಸ್ಪಿ ಪನೀರ್ ಕಬಾಬ್

ಬೇಕಾಗುವ ಸಾಮಗ್ರಿಗಳು:

ಪನೀರ್

ಮೊಸರು

ಶುಂಠಿ-ಬೆಳ್ಳುಳ್ಳಿ ಪೇಸ್ಟ್

ಖಾರದ ಪುಡಿ

ಚಾಟ್ ಮಸಾಲಾ

ಕಾನ್ಫ್ಲೋರ್ಮಚ

ನಿಂಬೆ ರಸ

ಉಪ್ಪು

ಎಣ್ಣೆ

ಮಾಡುವ ವಿಧಾನ:

ಒಂದು ಪಾತ್ರೆಯಲ್ಲಿ ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಮಸಾಲಾ ಪುಡಿ, ನಿಂಬೆ ರಸ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಸಾಲೆಗೆ ಪನೀರ್ ತುಂಡುಗಳನ್ನು ಹಾಕಿ ನಿಧಾನವಾಗಿ ಬೆರೆಸಿ. ನಂತರ ಕಾನ್ಫ್ಲೋರ್ ಸೇರಿಸಿ ಪನೀರ್‌ಗೆ ಮಸಾಲೆ ಚೆನ್ನಾಗಿ ಅಂಟಿಕೊಳ್ಳುವಂತೆ ಮಾಡಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ. ಮಸಾಲೆ ಹಚ್ಚಿದ ಪನೀರ್ ತುಂಡುಗಳನ್ನು ಒಂದೊಂದಾಗಿ ಎಣ್ಣೆಗೆ ಬಿಡಿ. ಮಧ್ಯಮ ಉರಿಯಲ್ಲಿ ಗೋಲ್ಡನ್ ಬ್ರೌನ್ ಬರುವವರೆಗೆ ಗರಿಗರಿಯಾಗಿ ಕರಿದು ಎಣ್ಣೆಯಿಂದ ಹೊರತೆಗೆಯಿರಿ. ಮೇಲಿಂದ ಸ್ವಲ್ಪ ಚಾಟ್ ಮಸಾಲಾ ಮತ್ತು ಈರುಳ್ಳಿ ಹೋಳುಗಳನ್ನು ಇಟ್ಟು, ಚಟ್ನಿ ಜೊತೆ ಬಿಸಿಬಿಸಿಯಾಗಿ ಸವಿಯಿರಿ!

Must Read