October 31, 2026
Saturday, October 31, 2026
spot_img

ಫಿಟ್ & ಫುಡ್ 31| ಚಪಾತಿ-ದೋಸೆ ತಿಂದು ಬೇಜಾರಾಗಿದೆಯೇ? ಹಾಗಿದ್ದರೆ ಈ ಗೋಧಿ ಹಿಟ್ಟಿನ ಪಡು ಟ್ರೈ ಮಾಡಿ

ದಿನಾ ಬೆಳಗ್ಗೆ ಚಪಾತಿ ಅಥವಾ ದೋಸೆ ತಿಂದು ಬೇಜಾರಾಗಿದ್ದರೆ, ಗೋಧಿ ಹಿಟ್ಟಿನಿಂದಲೇ ಒಂದು ಡಿಫರೆಂಟ್ ತಿಂಡಿ ಟ್ರೈ ಮಾಡಿ. ತುಂಬಾ ಕಡಿಮೆ ಎಣ್ಣೆ ಬಳಸಿ ಮಾಡುವ ಈ ಇನ್‌ಸ್ಟಂಟ್ ಗೋಧಿ ಪಡು ಮಕ್ಕಳಿಗಂತೂ ಸಖತ್ ಇಷ್ಟವಾಗುತ್ತೆ. ಗಡಿಬಿಡಿಯ ಬೆಳಗ್ಗಿನ ಸಮಯಕ್ಕೆ ಪರ್ಫೆಕ್ಟ್ ಎನಿಸುವ ಈ ಹೆಲ್ತಿ ರೆಸಿಪಿಯನ್ನು ಒಮ್ಮೆ ನೀವು ಮಾಡಿ ನೋಡಿ.

ಬೇಕಾಗುವ ಸಾಮಗ್ರಿಗಳು

ಗೋಧಿ ಹಿಟ್ಟು

ಬೊಂಬಾಯಿ ರವೆ

ಗಟ್ಟಿ ಮೊಸರು

ಈರುಳ್ಳಿ

ಹಸಿಮೆಣಸಿನಕಾಯಿ

ಕೊತ್ತಂಬರಿ ಸೊಪ್ಪು

ಸಾಸಿವೆ ಮತ್ತು ಜೀರಿಗೆ

ಕರಿಬೇವು

ಅಡುಗೆ ಸೋಡಾ ಮತ್ತು ಉಪ್ಪು

ಎಣ್ಣೆ ಅಥವಾ ತುಪ್ಪ

ಮಾಡುವ ವಿಧಾನ

ಮೊದಲು ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು, ರವೆ, ಮೊಸರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ದೋಸೆ ಹಿಟ್ಟಿಗಿಂತ ಸ್ವಲ್ಪ ದಪ್ಪನೆಯ ಹದಕ್ಕೆ ಕಲಸಿಕೊಂಡು 10 ನಿಮಿಷ ನೆನೆಯಲು ಬಿಡಬೇಕು.

ನಂತರಒಂದು ಸಣ್ಣ ಬಾಣಲೆಯಲ್ಲಿ 1 ಚಮಚ ಎಣ್ಣೆ ಕಾಯಿಸಿ ಸಾಸಿವೆ, ಜೀರಿಗೆ, ಕರಿಬೇವು ಮತ್ತು ಹಸಿಮೆಣಸಿನಕಾಯಿ ಹಾಕಿ ಹುರಿದು, ನಂತರ ಹೆಚ್ಚಿದ ಈರುಳ್ಳಿ ಹಾಕಿ ತಿಳಿ ಗುಲಾಬಿ ಬಣ್ಣ ಬರುವವರೆಗೆ ಬಾಡಿಸಿ. ಹುರಿದ ಈರುಳ್ಳಿ ಒಗ್ಗರಣೆ ಮತ್ತು ಕೊತ್ತಂಬರಿ ಸೊಪ್ಪನ್ನು ಕಲಸಿಟ್ಟ ಗೋಧಿ ಹಿಟ್ಟಿಗೆ ಸೇರಿಸಿ ಚೆನ್ನಾಗಿ ಕೈಯಾಡಿಸಿ. ಪಡು ಮಾಡುವಗ ಅಡುಗೆ ಸೋಡಾ  ಸೇರಿಸಿ ಲಘುವಾಗಿ ಮಿಕ್ಸ್ ಮಾಡಬೇಕು.

ಪಡು ಹಂಚನ್ನು ಒಲೆಯ ಮೇಲಿಟ್ಟು ಕಾಯಿಸಿ, ಎಲ್ಲಾ ಗುಳಿಗಳಿಗೆ ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಾಕಿ. ಹಂಚು ಕಾದ ನಂತರ ಹಿಟ್ಟನ್ನು ಗುಳಿಗಳಿಗೆ ಮುಕ್ಕಾಲು ಭಾಗದಷ್ಟು ತುಂಬಿಸಿ. ಉರಿಯನ್ನು ಮಧ್ಯಮವಾಗಿಟ್ಟು ಮುಚ್ಚಳ ಮುಚ್ಚಿ 2-3 ನಿಮಿಷ ಬೇಯಿಸಿ. ಕೆಳಭಾಗ ಹೊಂಬಣ್ಣಕ್ಕೆ ತಿರುಗಿದ ನಂತರ, ಪಡನ್ನು ಜಾಗರೂಕತೆಯಿಂದ ಮಗುಚಿ ಹಾಕಿ ಇನ್ನೊಂದು ಬದಿಯೂ ಚೆನ್ನಾಗಿ ಬೆಂದರೆ ಈಗ ಬಿಸಿಬಿಸಿಯಾದ, ಮೇಲ್ಗಡೆ ಕ್ರಿಸ್ಪಿ ಮತ್ತು ಒಳಗಡೆ ಸಾಫ್ಟ್ ಆಗಿರುವ ಗೋಧಿ ಹಿಟ್ಟಿನ ಪಡು ಸಿದ್ಧ.

Must Read

Skip to toolbar