November 1, 2026
Sunday, November 1, 2026
spot_img

400 ಸಿಕ್ಸರ್‌ಗಳ ಮೈಲಿಗಲ್ಲು: T20 ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾದ ಹೊಸ ವಿಶ್ವ ದಾಖಲೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ.

ಒಂದೇ ಕ್ಯಾಲೆಂಡರ್ ವರ್ಷದಲ್ಲಿ 400 ಸಿಕ್ಸರ್‌ಗಳನ್ನು ಬಾರಿಸಿದ ವಿಶ್ವದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ನ್ಯೂಜಿಲೆಂಡ್ ವಿರುದ್ಧ ಭಾನುವಾರ ನಡೆದ ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಈ ಮಹತ್ವದ ಮೈಲಿಗಲ್ಲು ತಲುಪಿದೆ.

40 ಪಂದ್ಯಗಳಲ್ಲಿ 400 ಸಿಕ್ಸರ್‌ಗಳ ದಾಖಲೆ

2026ರಲ್ಲಿ ಆಡಿದ 40 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ಒಟ್ಟು 400 ಸಿಕ್ಸರ್‌ಗಳನ್ನು ಸಿಡಿಸಿದೆ. ಈ ಪಟ್ಟಿಯಲ್ಲಿ ಆಸ್ಟ್ರಿಯಾ ಮತ್ತು ವೆಸ್ಟ್ ಇಂಡೀಸ್ ತಲಾ 224 ಸಿಕ್ಸರ್‌ಗಳೊಂದಿಗೆ ದೂರದ ಪ್ರತಿಸ್ಪರ್ಧಿಗಳಾಗಿವೆ. ಆಸ್ಟ್ರಿಯಾ 24 ಪಂದ್ಯಗಳಲ್ಲಿ, ವೆಸ್ಟ್ ಇಂಡೀಸ್ 21 ಪಂದ್ಯಗಳಲ್ಲಿ ಈ ಸಾಧನೆ ಮಾಡಿವೆ.

ಇದನ್ನೂ ಓದಿ:

ನ್ಯೂಜಿಲೆಂಡ್ ವಿರುದ್ಧದ ಸರಣಿಯೊಂದರಲ್ಲೇ ಭಾರತ 142 ಸಿಕ್ಸರ್‌ಗಳನ್ನು ಬಾರಿಸಿದ್ದು, ಒಂದೇ ವರ್ಷದಲ್ಲಿ ಒಂದು ಎದುರಾಳಿ ತಂಡದ ವಿರುದ್ಧ ದಾಖಲಾದ ಅತಿ ಹೆಚ್ಚು ಸಿಕ್ಸರ್‌ಗಳ ಸಂಖ್ಯೆಯಾಗಿದೆ.

ಅಭಿಷೇಕ್, ಇಶಾನ್, ಸಂಜು ಸಿಕ್ಸರ್‌ಗಳ ಸರದಾರರು

ಭಾರತದ ಸಿಕ್ಸರ್‌ಗಳ ದಾಖಲೆಗೆ ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಪ್ರಮುಖ ಕೊಡುಗೆ ನೀಡಿದ್ದಾರೆ. ಅಭಿಷೇಕ್ 86, ಇಶಾನ್ 60 ಹಾಗೂ ಸಂಜು 50 ಸಿಕ್ಸರ್‌ಗಳನ್ನು ಬಾರಿಸಿ ತಂಡದ ಆಕ್ರಮಣಕಾರಿ ಆಟಕ್ಕೆ ಬಲ ತುಂಬಿದ್ದಾರೆ.

Must Read