November 4, 2026
Wednesday, November 4, 2026
spot_img

ರಜನಿ ಚಿತ್ರಕ್ಕೆ ಕನ್ನಡಿಗತಿಯ ಎಂಟ್ರಿ: ಕಮಲ್ ಹಾಸನ್ ನಿರ್ಮಾಣದ ‘ಧರ್ಮನ್’ ಬಳಗ ಸೇರಿದ ನಟಿ ಶ್ರೀಲೀಲಾ‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸ್ಯಾಂಡಲ್‌ವುಡ್ ಬೆಡಗಿ ಶ್ರೀಲೀಲಾ ಅವರ ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ, ಕಮಲ್ ಹಾಸನ್ ಅವರು ಬಂಡವಾಳ ಹೂಡುತ್ತಿರುವ ಬಹುನಿರೀಕ್ಷಿತ ‘ಧರ್ಮನ್’ ಚಿತ್ರದ ತಾರಾಬಳಗಕ್ಕೆ   ಪ್ರಮುಖ ಪಾತ್ರವೊಂದಕ್ಕೆ ಆಯ್ಕೆಯಾಗಿದ್ದಾರೆ.

ಚಿತ್ರತಂಡದಿಂದ ಅಧಿಕೃತ ಸ್ವಾಗತ

ಈ ಬಿಗ್ ಬಜೆಟ್ ಸಿನಿಮಾವನ್ನು ಕಮಲ್ ಹಾಸನ್ ಅವರ ‘ರಾಜ್‌ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್’ ಮತ್ತು ‘ಟರ್ಮರಿಕ್ ಮೀಡಿಯಾ’ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸುತ್ತಿದ್ದು, ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳ ಮೂಲಕ ನಟಿ ಶ್ರೀಲೀಲಾ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿವೆ. ‘ಓ ಮೈ ಕಡವುಳೆ’ ಸಿನಿಮಾ ಖ್ಯಾತಿಯ ತಂತ್ರಜ್ಞ ಅಶ್ವತ್ಥ್ ಮಾರಿಮುತ್ತು ಈ ಚಿತ್ರಕ್ಕೆ ಕಥೆ ಬರೆದು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ನಯನತಾರಾ ಜತೆ ತಾರಾ ಮೆರುಗು

ಕೆಲ ದಿನಗಳ ಹಿಂದಷ್ಟೇ ಈ ಚಿತ್ರಕ್ಕೆ ಲೇಡಿ ಸೂಪರ್‌ಸ್ಟಾರ್ ನಯನತಾರಾ ಅವರ ಸೇರ್ಪಡೆಯಾಗಿತ್ತು. ಈಗ ಶ್ರೀಲೀಲಾ ಕೂಡ ಚಿತ್ರತಂಡಕ್ಕೆ ಬಂದಿರುವುದರಿಂದ ಸಿನಿಮಾದ ತೂಕ ಮತ್ತಷ್ಟು ಹೆಚ್ಚಿದೆ. ಇನ್ನುಳಿದಂತೆ ತಾಂತ್ರಿಕ ವಿಭಾಗಕ್ಕೆ ಬಲ ತುಂಬಲು ತಮಿಳು ಸಿನಿರಂಗದ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ರವಿಚಂದರ್ ಸಂಗೀತ ನೀಡುತ್ತಿದ್ದು, ಸಾಹಸ ದೃಶ್ಯಗಳನ್ನು ಖ್ಯಾತ ಫೈಟ್ ಮಾಸ್ಟರ್ಸ್ ಅನ್ಬರಿವ್ ಜೋಡಿ ಸಂಯೋಜಿಸುತ್ತಿದೆ.

ಇದನ್ನೂ ಓದಿ:

ತಮಿಳು ಚಿತ್ರರಂಗದಲ್ಲಿ ಹೆಚ್ಚಿದ ಡಿಮ್ಯಾಂಡ್

ಈ ವರ್ಷದ ಆರಂಭದಲ್ಲಷ್ಟೇ ತೆರೆಕಂಡ ‘ಪರಾಶಕ್ತಿ’ ಚಿತ್ರದ ಮೂಲಕ ಶ್ರೀಲೀಲಾ ಕಾಲಿವುಡ್‌ಗೆ ಕಾಲಿಟ್ಟಿದ್ದರು. ಆ ಚಿತ್ರದಲ್ಲಿ ಶಿವಕಾರ್ತಿಕೇಯನ್ ಅವರಂತಹ ನಟರೊಂದಿಗೆ ತೆರೆ ಹಂಚಿಕೊಂಡಿದ್ದ ಈ ಚೆಲುವೆಗೆ, ಈಗ ನೇರವಾಗಿ ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾ ಒಲಿದಿರುವುದು ಅವರ ಬೇಡಿಕೆಯನ್ನು ತಮಿಳು ಚಿತ್ರರಂಗದಲ್ಲಿ ದುಪ್ಪಟ್ಟು ಮಾಡಿದೆ. ಸದ್ಯ 3 ಹಂತದ ಶೂಟಿಂಗ್ ಪೂರ್ಣಗೊಳಿಸಿರುವ ಚಿತ್ರತಂಡ, ಶ್ರೀಲೀಲಾ ಅವರ ಭಾಗದ ಅಂತಿಮ ಹಂತದ ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

Must Read

Skip to toolbar