ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮಾಯಣ ಸಿನಿಮಾ ಇಂದು ವಿಶ್ವದಾದ್ಯಂತ ರಿಲೀಸ್ ಆಗಿದ್ದು, ಸಿನಿಮಾ ನೋಡಿ ಬಂದ ಪ್ರೇಕ್ಷಕರು ಯಶ್‌ಗೆ ಜೈಕಾರ ಹಾಕಿದ್ದಾರೆ. ಪ್ರತಿಯೊಬ್ಬರೂ ತಮ್ಮ ಪಾತ್ರಕ್ಕೆ ಅದ್ಭುತವಾಗಿ ಜೀವ ತುಂಬಿದ್ದಾರೆ. ಆದರೆ ಇದು ಯಶ್ ಅವರ ರಾಮಾಯಣ ಎಂದು ಹಾಡಿ ಹೊಗಳಿದ್ದಾರೆ.
ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವರಿಗೆ ಸಿನಿಮಾ ಇಷ್ಟವಾದರೆ ಕೆಲವರಿಗೆ ಕೆಲವು ಅಂಶಗಳು ಇಷ್ಟವಾಗಿಲ್ಲ. ಆದರೆ ಎಲ್ಲರಿಗೂ ಯಶ್ ನಟನೆ ಮಾತ್ರ ಬೆಸ್ಟ್ ಎನಿಸಿದೆ. ಹೌದು, ರಾಮನ ಪಾತ್ರದಲ್ಲಿ ರಣ್‌ಬೀರ್ ನೂರಕ್ಕೆ ನೂರರಷ್ಟು ನೀಡಿ ಅಭಿನಯ ಮಾಡಿದ್ದಾರೆ. ಆದರೆ ಯಶ್ ಔರಾ ಮುಂದೆ ರಣ್‌ಬೀರ್ ಸಪ್ಪೆ ಎಂದು ಹೇಳಿದ್ದಾರೆ.
https://www.instagram.com/reel/DfU5bSfSEgj/?vrfl=d3Fyb2p3YmJ4OTZv
ಅದ್ಭುತ ಸಿನಿಮಾಟೋಗ್ರಫಿ, ವಿಶ್ಯುಯಲ್ಸ್ ಎಲ್ಲವೂ ಅಂದವಾಗಿ ಬಂದಿದೆ. ಆದರೆ ರೆಹಮಾನ್ ಮ್ಯೂಸಿಕ್ ಸ್ವಲ್ಪ ಔಟ್‌ಡೇಟೆಡ್ ಆಗಿದೆ. ಸೀತೆಯ ಪಾತ್ರಕ್ಕೆ ಸಾಯಿ ಪಲ್ಲವಿ ಸರಿಯಾಗಿ ಹೊಂದಿಲ್ಲ. ಅವರ ಮುಖದಲ್ಲಿ ದೈವಿಕಳೆ ಇಲ್ಲ ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ನಟ ಯಶ್ ಜೊತೆ ಲಕ್ಷ್ಮಣನ ಪಾತ್ರ ನಿರ್ವಹಿಸಿರುವ ರವಿ ದುಬೆ ಕೂಡ ಅದ್ಭುತ ನಟ ಎಂದು ಜನ ಕೊಂಡಾಡಿದ್ದಾರೆ.
https://www.instagram.com/reel/DfVW_3LzjVc/?mdxt=cHJwb2R3ZzRocG5l
ಯಶ್ ಮೇಲೆ ಸಂಪೂರ್ಣ ಗಮನ
ಸಿನಿಮಾ ನೋಡಿಬಂದ ಪ್ರತಿಯೊಬ್ಬರಿಗೂ ರಾವಣನ ಪಾತ್ರ ಬಿಟ್ಟು ಇನ್ನೇನು ಮನಸ್ಸಿನಲ್ಲಿ ಉಳಿಯೋದಿಲ್ಲ. ರಣ್‌ಬೀರ್ ಅವರನ್ನು ಯಶ್ ಔಟ್‌ಶೈನ್ ಮಾಡಿಬಿಟ್ಟಿದ್ದಾರೆ. ನಮಿತ್ ಮಲ್ಹೋತ್ರ ರಾವಣನಾಗಿ ಯಶ್ ಅವರನ್ನು ಆಯ್ಕೆ ಮಾಡಿದಾಗ ರಾಮನಾಗಿ ಇನ್ನಷ್ಟು ಪವರ್‌ಫುಲ್ ನಟನನ್ನು ಆಯ್ಕೆ ಮಾಡಬಹುದಿತ್ತು ಎಂದು ಜನ ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ರಾಮಾಯಣವನ್ನು ಹಲವರು ಸಿನಿಮಾ ಮಾಡಿದ್ದಾರೆ, ಸೀರಿಯಲ್ ಮಾಡಿದ್ದಾರೆ. ಆದರೆ ಈ ರೀತಿ ರಾವಣನನ್ನು ಎಲ್ಲಿಯೂ ನೋಡಿಲ್ಲ. ಇದು ನಮ್ಮ ಪರಂಪರೆಯ ಕಥೆ ಇದನ್ನೂ ಎಲ್ಲರೂ ನೋಡಿ ಪ್ರೋತ್ಸಾಹ ನೀಡಬೇಕು ಎಂದು ಅಭಿಮಾನಿಗಳು ಹೇಳಿದ್ದಾರೆ.



