ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚಿನ ಜನರು ಓಡಾಟಕ್ಕಾಗಿ ಬಿಎಂಟಿಸಿ ಬಸ್‌ಗಳ ಮೇಲೆ ಅವಲಂಬಿತರಾಗಿದ್ದಾರೆ. ನಿನ್ನೆಯಷ್ಟೇ ಬೆಂಗಳೂರಿನ ಬೃಹತ್ ಸಾರಿಗೆಯಾಗಿರುವ ಬಿಎಂಟಿಸಿ ಬಸ್ ಟಿಕೆಟ್ ದರಗಳನ್ನು ಪರಿಷ್ಕರಣೆ ಮಾಡಲಾಗಿದೆ.
ಹೊಸ ದರಗಳು ಬುಧವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿವೆ. ಅಂತೆಯೇ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವಿವಿಧ ವರ್ಗದ ದೈನಿಕ, ಸಾಪ್ತಾಹಿಕ ಮತ್ತು ಮಾಸಿಕ ಪಾಸುಗಳ ದರವೂ ಪರಿಷ್ಕರಣೆಯಾಗಿದೆ. ಬಸ್ ಟಿಕೆಟ್ ದರ ಪರಿಷ್ಕರಣೆಯಾದ ಹಿನ್ನೆಲೆಯಲ್ಲಿ ಸಂಸ್ಥೆಯ ಆರ್ಥಿಕ ದೃಷ್ಟಿಯಿಂದ ಪಾಸ್‌ಗಳ ದರವನ್ನು ಹೆಚ್ಚಿಸಲಾಗಿದೆ.
ಯಾವ ಪಾಸ್‌ಗೆ ಎಷ್ಟು ಹಣ? ಇಲ್ಲಿದೆ ಸಂಪೂರ್ಣ ಮಾಹಿತಿ..
ಸಾಮಾನ್ಯ ಸೇವೆಯ ದೈನಿಕ ಪಾಸ್‌ಗಳು ಹಳೆಯ ದರ ಪರಿಷ್ಕೃತ ದರ
| ಸಾಮಾನ್ಯ ದೈನಿಕ ಪಾಸ್ | 80 | 100 |
| ಸಾಮಾನ್ಯ ವಿಸ್ತಾರ ದೈನಿಕ ಪಾಸ್ | 120 | 150 |
| ವೇಗದೂತ ವಿಸ್ತಾರ ದೈನಿಕ ಪಾಸ್ | 160 | 200 |
ಸಾಮಾನ್ಯ ಸೇವೆಗಳು ಸಾಪ್ತಾಹಿಕ ಪಾಸ್ ಹಳೆಯ ದರ ಪರಿಷ್ಕೃತ ದರ
| ಸಾಮಾನ್ಯ ವಾರದ ಪಾಸ್ | 350 | 420 |
| ಸಾಮಾನ್ಯ ವಿಸ್ತಾರ ವಾರದ ಪಾಸ್ | 550 | 680 |
| ವೇಗದೂತ ವಿಸ್ತಾರ ವಾರದ ಪಾಸ್ | 700 | 875 |
ಸಾಮಾನ್ಯ ಸೇವೆಗಳ ಮಾಸಿಕ ಪಾಸ್ ಹಳೆಯ ದರ ಪರಿಷ್ಕೃತ ದರ
| ಸಾಮಾನ್ಯ ತಿಂಗಳ ಪಾಸ್ | 1200 | 1500 |
| ಹಿರಿಯ ನಾಗರಿಕ ಸಾಮಾನ್ಯ ಸೇವೆಯ ತಿಂಗಳ ಪಾಸ್ | 1080 | 1350 |
| ಸಾಮಾನ್ಯ ವೇಗದೂತ/ಸಾಮಾನ್ಯ ವಿಸ್ತಾರ ತಿಂಗಳ ಪಾಸ್ | 1500 | 1800 |
| ವೇಗದೂತ ವಿಸ್ತಾರ ತಿಂಗಳ ಪಾಸ್ | 2000 | 2500 |
| ನೈಸ್ ರಸ್ತೆಯ ಸಾಮಾನ್ಯ ಸೇವೆಯ ತಿಂಗಳ ಪಾಸ್ | 2500 | 2800 |
ವಜ್ರ, ವಜ್ರ ವಿಸ್ತಾರ, ವಾಯುವಜ್ರ ಬಸ್‌ಗಳ ಪಾಸ್ ಹಳೆಯ ದರ ಪರಿಷ್ಕೃತ ದರ
| ವಜ್ರ ದಿನದ ಪಾಸ್ | 140 | 175 |
| ವಜ್ರ ವಿಸ್ತಾರ ದಿನದ ಪಾಸ್ | 180 | 225 |
| ವಜ್ರ ವಾರದ ಪಾಸ್ | 700 | 875 |
| ವಜ್ರ ವಿಸ್ತಾರ ವಾರದ ಪಾಸ್ | 1000 | 1250 |
| ವಜ್ರ ತಿಂಗಳ ಪಾಸ್ | 2000 | 2500 |
| ವಜ್ರ ವಿಸ್ತಾರ ತಿಂಗಳ ಪಾಸ್ | 2700 | 3400 |
| ವಾಯುವಜ್ರ ತಿಂಗಳ ಪಾಸ್ | 4100 | 5000 |
| ವಿದ್ಯಾರ್ಥಿ ವಜ್ರ ತಿಂಗಳ ಪಾಸ್ | 1400 | 1750 |



