November 5, 2026
Thursday, November 5, 2026
spot_img

ʼಅರೇಬಿಕ್‌ ಕಾಲೇಜು ಮೆಟ್ರೋ ನಿಲ್ದಾಣʼ ಎಂದು ಹೆಸರಿಡಿ : ಸಿಎಂಗೆ ಮನವಿ ಪತ್ರ ನೀಡಿದ ಜಮೀರ್‌ ಅಹ್ಮದ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಮ್ಮ ಮೆಟ್ರೋದ ಪಿಂಕ್‌ಲೈನ್‌ನಲ್ಲಿ ಬರುವ ಕಾಡುಗೊಂಡನಹಳ್ಳಿ(ಕೆ.ಜಿ.ಹಳ್ಳಿ) ಮೆಟ್ರೋ ನಿಲ್ದಾಣದ ಹೆಸರನ್ನು ಅರೇಬಿಕ್‌ ಕಾಲೇಜು ಮೆಟ್ರೋ ನಿಲ್ದಾಣ ಎಂದು ಬದಲಾಯಿಸಬೇಕೆಂದು ಸಚಿವ ಜಮೀರ್‌ ಅಹ್ಮದ್‌ ಸಿಎಂ ಡಿ.ಕೆ. ಶಿವಕುಮಾರ್‌ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಭೌಗೋಳಿಕ ಗುರುತನ್ನು ಪ್ರತಿಬಿಂಬಿಸಲು ಅರೇಬಿಕ್‌ ಕಾಲೇಜು ಮೆಟ್ರೋ ನಿಲ್ದಾಣ ಎಂದು ಹೆಸರಿಡುವುದು ಸೂಕ್ತವಾಗುತ್ತದೆ. ಅರೇಬಿಕ್‌ ಕಾಲೇಜಿಗೆ ಬಹುದೊಡ್ಡ ಇತಿಹಾಸವಿದೆ. ಹೀಗಾಗಿ ಜನರಿಗೆ ಅರೇಬಿಕ್‌ ಕಾಲೇಜು ಸ್ಟಾಪ್‌ ಎಂದರೆ ಸುಲಭವಾಗಿ ಅರ್ಥವಾಗುತ್ತದೆ. ಈ ಭಾಗದಲ್ಲಿ ಪ್ರಯಾಣಿಕರು ಅರೇಬಿಕ್‌ ಕಾಲೇಜು ಎಂದೇ ಗುರುತಿಸುತ್ತಾರೆ. ಹೀಗಾಗಿ ಮೆಟ್ರೋ ನಿಲ್ದಾಣಕ್ಕೆ ಸ್ಥಳೀಯವಾದ ಹೆಸರನ್ನು ಇಟ್ಟರೆ ಅನುಕೂಲ ಎಂದು ಮನವಿ ಮಾಡಿದ್ದಾರೆ.

ಆದರೆ ಈ ವಿಚಾರ ಸಾರ್ವಜನಿಕವಾಗಿ ಮತ್ತು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈಗಾಗಲೇ ಆಲೋಚನೆ, ರಿಸರ್ಚ್‌ ಮಾಡಿಯೇ ಮೆಟ್ರೋ ನಿಲ್ದಾಣಗಳಿಗೆ ಹೆಸರು ನೀಡಲಾಗಿದೆ. ಇದನ್ನು ಬದಲಾಯಿಸಬೇಡಿ. ಇದೇ ರೀತಿ ಮಾಡುತ್ತಾ ಹೋದರೆ ಎಲ್ಲ ಮೆಟ್ರೋ ನಿಲ್ದಾಣಗಳಿಗೂ ಬೇರೆ ಬೇರೆ ಹೆಸರಿಡುವಂತೆ ಮನವಿಗಳು ಬರುತ್ತವೆ ಎಂದೂ ಹೇಳಲಾಗಿದೆ.

Must Read