ಹೊಸದಿಗಂತ ವರದಿ ಬಾಗಲಕೋಟೆ:
ಚಿನ್ನಾಭರಣ ಅಂಗಡಿಯಲ್ಲಿ ಕಳ್ಳತನ ಮಾಡಿ, ಸುಮಾರು ಎರಡು ಕೋಟಿಗೂ ಅಧಿಕ ಚಿನ್ನಾಭರಣ ದೋಚಿಕೊಂಡ ಕಳ್ಳರು ಪರಾರಿ ಆಗಿರುವ ಘಟನೆ, ಬಾಗಲಕೋಟೆ ನವನಗರದ ಸೆಕ್ಟರ್ ನಂಬರ್ 26 ರಲ್ಲಿರುವ ಓಂ ಜ್ಯುವೆಲರ್ಸ್ ಅಂಗಡಿಯಲ್ಲಿ ನಡೆದಿದೆ.
ಬೆಳ್ಳಗಿನ ಜಾವ 2 ರಿಂದ 4 ಗಂಟೆ ಗ್ಯಾಸ್ ಕಟರ್ ಬಳಸಿ ಕೀಲಿ ಕಟ್ ಮಾಡಿ,ಮೂವರು ಕಳ್ಳರು ಒಳಗೆ ನುಸಳಿದ್ದಾರೆ. ದಿಗಂಬರ ಕುರಡೇಕರ ಎಂಬುವರೆಗೆ ಸೇರಿದ ಆಭರಣ ಅಂಗಡಿಯಲ್ಲಿ ಮೂರು ಜನ ಮುಸುಕಿದಾರಿಗಳು, ನುಗ್ಗಿದ್ದು, 100 ಕೆಜಿ ಬೆಳ್ಳಿ ಆಭರಣ ಕಳ್ಳತನ ಮಾಡಿರುವ ಶಂಕೆ ಇದೆ. ಅಂದಾಜು ಎರಡು ಕೋಟಿ ರೂಪಾಯಿ ಮೌಲ್ಯದ ಬೆಳ್ಳಿ ಆಭರಣ ಕಳ್ಳತನ ಮಾಡಲಾಗಿದೆ.
ಕಳ್ಳತನ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೆಂಪು ಕಲರ್ ಕಾರು ತೆಗೆದುಕೊಂಡು ಬಂದಿದ ಖದೀಮರು, ಒಳಗೆ ನುಗ್ಗಿ ಬೆಳ್ಳಿಯ ಆಭರಣಗಳು ಚೀಲದಲ್ಲಿ ತುಂಬಿಕೊಂಡು ಹೋಗುವ ದೃಶ್ಯ ಸೆರೆಯಾಗಿದೆ.
ಸ್ಥಳಕ್ಕೆ ನವನಗರದ ಪೊಲೀಸರ್ ಭೇಟಿ ಪರೀಶಿಲನೆ ನಡೆಸಿದ್ದು, ಬೆರಳಚ್ಚುಗಾರರು ಹಾಗೂ ಶ್ವಾನ ದಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ASP ಜಗದೀಶ DYSP ಗಜಾನನ ಸುತಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ಯಲ್ಲಿ ಕಳ್ಳರು ಮುಖ ಕಂಡ ಬಂದಿದ್ದು,ಸೂಕ್ತ ತನಿಖೆ ನಂತರ ಅಧಿಕೃತವಾಗಿ ಎಷ್ಟು ಮೌಲ್ಯದ ಚಿನ್ನಾಭರಣ ದೋಚಿಕೊಂಡು ಹೋಗಿರುವ ಬಗ್ಗೆ ಲೆಕ್ಕಸಿಗಲಿದೆ.



