November 6, 2026
Friday, November 6, 2026
spot_img

ನಾನು ಪ್ರಧಾನಿ ಮೋದಿಗಿಂತ ಚೆನ್ನಾಗಿ ಇಂಗ್ಲಿಷ್‌ ಮಾತಾಡ್ತೀನಿ, ಚೆನ್ನಾಗಿ ಓದಿದಿನಿ : ಪ್ರಿಯಾಂಕ್ ಖರ್ಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರಧಾನಿ ಮೋದಿ ಅವರಿಗಿಂತ ಹೆಚ್ಚು ವಿದ್ಯಾರ್ಹತೆ ಹೊಂದಿದ್ದೇನೆ. ಅವರಿಗಿಂತ ಚೆನ್ನಾಗಿ ಇಂಗ್ಲಿಷ್‌ ಕೂಡ ಮಾತನಾಡ್ತೀನಿ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ತಮ್ಮ ಶೈಕ್ಷಣಿಕ ಅರ್ಹತೆ ವಿಚಾರವಾಗಿ ಬಿಜೆಪಿ ನಾಯಲಕ ಛಲವಾದಿ ನಾರಾಯಣಸ್ವಾಮಿ ಅವರ ಹೇಳಿಕೆಗೆ ಖರ್ಗೆ ತಿರುಗೇಟು ನೀಡಿದ್ದು, ನಾನು ಅಫಿಡವಿಟ್‌ ಹಾಕಿದ್ದೇನೆ. ಪ್ರಧಾನಿ ಮೋದಿಯವರ ಡಿಗ್ರಿ, ನನ್ನ ವಿದ್ಯಾರ್ಹತೆ ಬಗ್ಗೆ ಸಾರ್ವಜನಿಕವಾಗಿ ಮಾತನಾಡೋಣ ಎಂದಿದ್ದಾರೆ.

ಪ್ರಧಾನಿ ಮೋದಿ ಅವರ ಪದವಿ ಪ್ರಮಾಣಪತ್ರದ ಬಗ್ಗೆ ಆರ್‌ಟಿಐ ಮೂಲಕವೂ ಮಾಹಿತಿ ಲಭ್ಯವಿಲ್ಲ. ನಾನು ಮೋದಿ ಅವರಿಗಿಂತ ಹೆಚ್ಚುಓದಿರೋದು ಸತ್ಯ ಎಂದಿದ್ದಾರೆ. ಕಾನ್ವೆಂಟ್‌ ದಲಿತ ಎಂದು ಚಲವಾದಿ ನಾರಾಯಣಸ್ವಾಮಿ ಅವರು ಹೇಳಿದ್ದು, ತಾವು ಗ್ರಾಫಿಕ್‌ ಡಿಸೈನರ್‌ ಎನ್ನುವುದು ಇಡೀ ಜಗತ್ತಿಗೇ ಗೊತ್ತಿದೆ ಎಂದಿದ್ದಾರೆ.

ಆರೋಪಿಸಿದವರ ನಾಯಕರ ಮಕ್ಕಳೇ ಕಾನ್ವೆಂಟ್ ಶಾಲೆಗೆ ಹೋಗಿ ಕಲಿತವರು, ನಾನು ಅದಮಾರು ಮಠ ಶಾಲೆಯಲ್ಲಿ ಓದಿದವನು, ಮೋದಿಯವರಿಗಿಂತ ಉತ್ತಮ ಶೈಕ್ಷಣಿಕ ಅರ್ಹತೆ ಹೊಂದಿದವನು ನಾನು, ಅವರಿಗೆ ಕನ್ನಡ ಬರುವುದಿಲ್ಲ ಬಿಡಿ, ನನಗೂ ಹಿಂದಿ ಬರುತ್ತದೆ, ಸಂಸ್ಕೃತ ಕೂಡ ಓದಲು ಬರುತ್ತದೆ ಎಂದರು. ನಾರಾಯಣಸ್ವಾಮಿ ಅವರು ಯಾವುದೇ ಭಾಷೆ, ಯಾವುದೇ ವಿಷಯದ ಕುರಿತು ಯಾವುದೇ ಸಮಯದಲ್ಲಿ ಚರ್ಚೆಗೆ ಬರಬಹುದು ಎಂದು ಸವಾಲು ಹಾಕಿದ್ದಾರೆ.

Must Read