November 7, 2026
Saturday, November 7, 2026
spot_img

ದೀಪಾವಳಿ ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್‌ನ್ಯೂಸ್‌; ಬೆಂಗಳೂರಿನಿಂದ 908 ವಿಶೇಷ ಬಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯಾದ್ಯಂತ ದೀಪಾವಳಿ ಸಡಗರ ಆರಂಭವಾಗಿದ್ದು, ಹಬ್ಬದ ಸಂದರ್ಭದಲ್ಲಿ ಎಲ್ಲರೂ ತಮ್ಮ ಕುಟುಂಬಗಳ ಜೊತೆ ಸಮಯ ಕಳೆಯೋದಕ್ಕೆ ಇಷ್ಟಪಡುತ್ತಾರೆ. ಬೆಂಗಳೂರಿನಲ್ಲಿ ಹೆಚ್ಚಿನ ಜನ ಬೇರೆ ಊರುಗಳವರೇ ಆಗಿದ್ದು, ಎಲ್ಲರೂ ಸಿಲಿಕಾನ್‌ ಸಿಟಿ ತೊರೆದು ತಮ್ಮೂರಿನತ್ತ ಹೆಜ್ಜೆ ಹಾಕುತ್ತಿದ್ದಾರೆ.

ಈಗಾಗಲೇ ಬಸ್‌ ಟಿಕೆಟ್‌ ಬುಕ್‌ ಮಾಡಿಕೊಂಡವರು ಹಾಯಾಗಿ ಹೊರಟಿದ್ರೆ ಟಿಕೆಟ್‌ ಸಿಗದವರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿಯೂ ಸೀಟ್‌ ಸಿಗದೇ ಒದ್ದಾಡುತ್ತಿದ್ದಾರೆ. ಈ ಸಮಸ್ಯೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಉತ್ತರ ನೀಡಿದ್ದು, ನಿನ್ನೆ ಮತ್ತು ಇಂದು ಶನಿವಾರ ಬೆಂಗಳೂರಿನಿಂದ ದಕ್ಷಿಣ ಭಾರತದ ವಿವಿಧ ರಾಜ್ಯಗಳ ಸಣ್ಣ ಪಟ್ಟಣಗಳು ಸೇರಿದಂತೆ ಒಟ್ಟು 123 ಸ್ಥಳಗಳಿಗೆ 908 ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿದೆ.

ಬೆಂಗಳೂರು ವಿಸ್ತಾರವಾಗಿದ್ದು, ತಮ್ಮ ಏರಿಯಾಗಳಿಂದ ಮೆಜೆಸ್ಟಿಕ್‌ನಲ್ಲಿರುವ ಕೆಂಪೇಗೌಡ ಬಸ್‌ ನಿಲ್ದಾಣಕ್ಕೆ ಬರುವುದು ದೊಡ್ಡ ಸಮಸ್ಯೆಯಾಗಿದೆ. ಟ್ರಾಫಿಕ್‌ ನಿಯಂತ್ರಣ ಮಾಡಲು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್) ಹೊರತುಪಡಿಸಿ ನಗರದ 11 ಸ್ಥಳಗಳಲ್ಲಿ ಬಸ್‌ಗಳ ಪಿಕಪ್ ಪಾಯಿಂಟ್‌ಗಳು ಮತ್ತು ಟಿಕೆಟ್ ಕಾಯ್ದಿರಿಸುವ ಕೌಂಟರ್‌ಗಳನ್ನು ತೆರೆಯಲಾಗಿದೆ.

ಒಟ್ಟು 908 ಬಸ್‌ಗಳ ಪೈಕಿ ನಿನ್ನೆ ಶುಕ್ರವಾರ 549 ಬಸ್‌ಗಳು ಹಾಗೂ ಇಂದು ಶನಿವಾರ ಉಳಿದ 359 ಬಸ್‌ಗಳು ಸಂಚರಿಸಲಿವೆ ಎಂದು ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯದ ಎಲ್ಲೆಲ್ಲಿಗೆ ವಿಶೇಷ ಬಸ್‌ ವ್ಯವಸ್ಥೆ?


ಮಂಗಳೂರಿಗೆ 49
ದಾವಣಗೆರೆಗೆ 42
ಹುಬ್ಬಳ್ಳಿ ಮತ್ತು ಕುಂದಾಪುರಕ್ಕೆ ತಲಾ 35
ಬೆಳಗಾವಿಗೆ 29
ಶಿವಮೊಗ್ಗ ಮತ್ತು ತಿರುಪತಿಗೆ ತಲಾ 24
ಹೊಸಪೇಟೆಗೆ 23
ವಿಜಯಪುರ ಮತ್ತು ತಿರುಚಿರಾಪಳ್ಳಿಗೆ ತಲಾ 22
ಗೋಕರ್ಣ, ಸಾಗರ ಮತ್ತು ಮಧುರೈಗೆ ತಲಾ 21
ಶಿರಸಿಗೆ 17
ಉಡುಪಿ ಮತ್ತು ಬಳ್ಳಾರಿಗೆ ತಲಾ 16
ಕಲಬುರಗಿಗೆ 15
ಕುಂಭಕೋಣಂಗೆ 14
ಪುತ್ತೂರು ಮತ್ತು ತಿರುಕ್ಕೋಯಿಲೂರಿಗೆ ತಲಾ 13
ಚಿಕ್ಕಮಗಳೂರಿಗೆ 12
ಸೇಲಂಗೆ 11
ಹರಿಹರ, ಶೃಂಗೇರಿ ಮತ್ತು ತಿರುವಣ್ಣಾಮಲೈಗೆ ತಲಾ 10
ಮಡಿಕೇರಿ, ಯಲ್ಲಾಪುರ ಮತ್ತು ಚಿಕ್ಕೋಡಿಗೆ ತಲಾ 9
ಹಗರಿಬೊಮ್ಮನಹಳ್ಳಿ, ಹೊರನಾಡು, ಹೂವಿನಹಡಗಲಿ ಮತ್ತು ಕಲ್ಲಕುರಿಚಿಗೆ ತಲಾ 8
ಭಟ್ಕಳ, ಬೀದರ್, ಕಾರವಾರ, ಸಂಕೇಶ್ವರ, ಸುಳ್ಯ, ಜಮಖಂಡಿ, ಪುದುಚೇರಿ ಮತ್ತು ವಿಲ್ಲುಪುರಂಗೆ ತಲಾ 7
ನಿಪ್ಪಾಣಿ, ರಾಯಬಾಗ, ಅಥಣಿ ಮತ್ತು ಹುಮನಾಬಾದ್‌ಗೆ ತಲಾ 6
ಪುಣೆ, ಗದಗ, ಬಾಗಲಕೋಟೆ, ಬಿಳಗಿ, ಇಂಡಿ, ರಾಯಚೂರು, ರಾಯದುರ್ಗ, ಸೋಮವಾರಪೇಟೆ ಹಾಗೂ ಆಂಧ್ರಪ್ರದೇಶದ ಪುತ್ತೂರಿಗೆ ತಲಾ 5 ಬಸ್‌ಗಳು
ಚೆನ್ನೈ, ಪಣಜಿ, ಧಾರವಾಡ, ಕಡಲೂರು, ಕೊಪ್ಪಳ, ಮಂತ್ರಾಲಯ, ಆನವಟ್ಟಿ, ಬಿ.ಸಿ.ರೋಡ್, ಬೆಟಗೇರಿ, ಗೋಕಾಕ, ಹೊಸದುರ್ಗ, ಶಿವಮೊಗ್ಗ ಜಿಲ್ಲೆಯ ಹುಂಚ, ಮೂಡುಬಿದಿರೆ, ಮುದ್ದೇಬಿಹಾಳ, ಮುಂಡರಗಿ, ರಾಮದುರ್ಗ, ಸವದತ್ತಿ, ಸಿಂದಗಿ, ತಾಳಿಕೋಟೆ, ತೀರ್ಥಹಳ್ಳಿ, ವಿರಾಜಪೇಟೆ, ಯಾದಗಿರಿ, ಆಂಧ್ರಪ್ರದೇಶದ ಬಾಲಿಜಕಂಡ್ರಿಗ ಮತ್ತು ತಮಿಳುನಾಡಿನ ತಿರುಟ್ಟಣಿಗೆ ತಲಾ 4 ಬಸ್‌ಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ.

ಎಲ್ಲಿಂದ ಬಸ್‌ ಹತ್ತಬಹುದು?

ಕೆಂಪೇಗೌಡ ಬಸ್ ನಿಲ್ದಾಣದ ನಾಲ್ಕು ಟರ್ಮಿನಲ್‌ಗಳು
ವಿಜಯನಗರ ಟಿಟಿಎಂಸಿ
ಯಶವಂತಪುರ ಟಿಟಿಎಂಸಿ
ಮಲ್ಲೇಶ್ವರಂ 18ನೇ ಕ್ರಾಸ್
ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣ
ಯಲಹಂಕ ಸ್ಯಾಟಲೈಟ್ ಟೌನ್
ಬಸವೇಶ್ವರನಗರ ಟಿಟಿಎಂಸಿ
ಜಯನಗರ 4ನೇ ಬ್ಲಾಕ್
ಶಾಂತಿನಗರ ಬಸ್ ನಿಲ್ದಾಣ
ಐಟಿಐ ಮುಖ್ಯ ಗೇಟ್
ಚಿಕ್ಕಲಸಂದ್ರ
ನಾಯ್ಡು ಲೇಔಟ್‌

Must Read