November 7, 2026
Saturday, November 7, 2026
spot_img

ಹಾಸನಾಂಬೆ ದೇಗುಲಕ್ಕೆ ಈವರೆಗೂ 18 ಲಕ್ಷ ಮಂದಿ ಭೇಟಿ : 17 ಕೋಟಿ ರೂ. ವಹಿವಾಟು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವರ್ಷಕ್ಕೊಮ್ಮೆ ಮಾತ್ರ ದರುಶನ ನೀಡುವ ಹಾಸನದ ಅಧಿದೇವತೆ ಹಾಸನಾಂಬೆ ದೇವಿಯ ದರುಶನಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಇಂದು ಕೂಡ ಭಕ್ತರು ಬೆಳಗಿನ ಜಾವದಿಂದಲೇ ಆಗಮಿಸಿ ದೇವಿಯ ದರುಶನ ಪಡೆದಿದ್ದಾರೆ.

ನಿನ್ನೆಯವರೆಗೂ ಒಟ್ಟಾರೆ 18 ಲಕ್ಷ ಜನರು ಹಾಸನಾಂಬೆ ಸನ್ನಿಧಿಗೆ ಭೇಟಿ ನೀಡಿದ್ದು, 17 ಕೋಟಿ ರೂ. ಅಧಿಕ ಆದಾಯ ಸಂಗ್ರಹವಾಗಿದೆ. ಸಾವಿರ ರೂಪಾಯಿಯ ಟಿಕೆಟ್‌, ಮುನ್ನೂರು ರೂಪಾಯಿಯ ವಿಶೇಷ ದರುಶನದ ಟಿಕೆಟ್‌ ಮಾರಾಟ, ಲಾಡು ಹಾಗೂ ದೊನ್ನೆ ಪ್ರಸಾದ ಮಾರಾಟದಿಂದಾಗಿ ಒಟ್ಟಾರೆ 17 ಕೋಟಿ ರೂಪಾಯಿ ಸಂಗ್ರಹ ಮಾಡಲಾಗಿದೆ.

ಇಂದು ಪ್ರೋಟೋಕಾಲ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಕ್ಷೇತ್ರದ ಗಣ್ಯರು ಹಾಸನಾಂಬ ದೇವಿ ದರುಶನಕ್ಕೆ ಆಗಮಿಸಲಿದ್ದಾರೆ. ಧರ್ಮ ದರುಶನದ ಲೈನಿನಲ್ಲಿ ಭಾರೀ ಕ್ಯೂ ಇದ್ದು, ವಿಶೇಷ ದರುಶನದ ಲೈನ್‌ನಲ್ಲಿ ಜನ ಕಡಿಮೆ ಇದ್ದಾರೆ.

Must Read