November 7, 2026
Saturday, November 7, 2026
spot_img

ಬೆಂಗಳೂರು ಮರ್ಡರ್‌ ಕೇಸ್‌ | ಸೇಲಂ ಘಾಟ್‌ನ ಕಾಡಿನಲ್ಲಿ ಹಂತಕ ಇಂದುಶೇಖರ್‌ ಪತ್ನಿ, ಅತ್ತೆ ಮೃತದೇಹ ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಒಂದೇ ಕುಟುಂಬದ ಏಳು ಮಂದಿಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಸೇಲಂ ಘಾಟ್‌ ಕಾಡಿನಲ್ಲಿ ಎರಡು ಮೃತದೇಹಗಳು ಪತ್ತೆಯಾಗಿವೆ. ಮೃತದೇಹಗಳ ಗುರುತು ಪತ್ತೆಯಾಗಿದ್ದು, ಹಂತಕ ಇಂದುಶೇಖರನ ಪತ್ನಿ ಸುನೀತಾ ಹಾಗೂ ಅತ್ತೆ ರೂಪವತಿ ಎಂದು ಖುದ್ದು ಆತನೇ ಹೇಳಿದ್ದಾನೆ.

ನಿನ್ನೆ ರಾತ್ರಿ ಸೇಲಂ ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಎರಡು ಮೃತದೇಹಗಳನ್ನು ಗುರುತಿಸಲಾಗಿತ್ತು. ಆರೋಪಿಯನ್ನು ಮೃತದೇಹಗಳ ಗುರುತು ಪತ್ತೆಗೆ ಕರೆದುಕೊಂಡು ಹೋಗಿದ್ದಾಗ ಇದು ತನ್ನ ಪತ್ನಿ ಹಾಗೂ ಅತ್ತೆಯ ಮೃತದೇಹ ಎಂದು ಹೇಳಿದ್ದಾರೆ. ಈ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಿರುವ ಪೊಲೀಸರು ಇಂದು ಸೇಲಂಗೆ ಕರೆದೊಯ್ಯುತ್ತಿದ್ದಾರೆ. ಕುಟುಂಬಸ್ಥರ ಸಮ್ಮುಖದಲ್ಲೇ ಪೋಸ್ಟ್‌ ಮಾರ್ಟಂ ಪ್ರಕ್ರಿಯೆ ನಡೆಯಲಿದ್ದು, ಬಳಿಕ ಮೃತದೇಹಗಳನ್ನು ಪೊಲೀಸರು ಹಸ್ತಾಂತರ ಮಾಡಲಿದ್ದಾರೆ.

ಆರೋಪಿ ಇಂದುಶೇಖರ್‌ ಏಳು ಮಂದಿಯಲ್ಲಿ ಕೊಲೆ ಮಾಡಿದ್ದು, ಈಗ ಮೂವರ ಮೃತದೇಹಗಳು ಪತ್ತೆಯಾಗಿವೆ. ಇನ್ನು ನಾಲ್ವರ ಮೃತದೇಹಗಳು ಎಲ್ಲೆಲ್ಲಿವೆ ಎಂಬುದು ಆತನಿಗೆ ಮಾತ್ರ ಸಿಕ್ಕಿದೆ. ಏಳು ವರ್ಷದ ಬಾಲಕ ಶಂಕರ್‌ ಪುತ್ರ ಪುನೀತ್‌ ಶವ ಚಿಕ್ಕಬಳ್ಳಾಪುರದ ನಂದಿಬೆಟ್ಟದ ಬಳಿ ನಿನ್ನೆಯೇ ಸಿಕ್ಕಿದ್ದು, ಮರಣೋತ್ತರ ಪರೀಕ್ಷೆ ನಂತರ ಅಂತ್ಯಸಂಸ್ಕಾರ ಮಾಡಲಾಗಿದೆ. ಇದೀಗ ತಮಿಳುನಾಡಿದ ಎರ್ಕಾಡ್‌ ಪ್ರದೇಶದಲ್ಲಿ ಎರಡು ಮೃತದೇಹಗಳು ಸಿಕ್ಕಿವೆ.

Must Read