ಸಾಮಾಗ್ರಿಗಳು
ಮೈದಾ
ಸಕ್ಕರೆ
ತುಪ್ಪ
ಹಾಲು
ಏಲಕ್ಕಿ ಪುಡಿ
ಉಪ್ಪು
ಎಣ್ಣೆ
ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ಮೈದಾ, ತುಪ್ಪ, ಏಲಕ್ಕಿ ಪುಡಿ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ಸಕ್ಕರೆಯನ್ನು ಹಾಲಿನಲ್ಲಿ ಕರಗಿಸಿ. ಈ ಹಾಲನ್ನು ಸ್ವಲ್ಪ ಸ್ವಲ್ಪವಾಗಿ ಮೈದಾಗೆ ಸೇರಿಸಿ ಗಟ್ಟಿಯಾದ ಹಿಟ್ಟನ್ನು ತಯಾರಿಸಿ.
ಹಿಟ್ಟನ್ನು ಮುಚ್ಚಿ 15–20 ನಿಮಿಷ ನೆನೆಯಲು ಬಿಡಿ. ಹಿಟ್ಟು ತುಂಬಾ ಗಟ್ಟಿ ಇರಬಾರದು ಹಾಗೆ ತುಂಬಾ ಮೆತ್ತಗೂ ಇರಬಾರದು
ನಂತರ ಈ ಹಿಟ್ಟನ್ನು ಚಪಾತಿಯಂತೆ ಲಟ್ಟಿಸಿಕೊಳ್ಳಿ
ಆನಂತರ ಚಾಕುವಿನಲ್ಲಿ ವಜ್ರದ ಆಕಾರದಲ್ಲಿ ಶಂಕರಪೊಳಿಗಳನ್ನು ಕತ್ತರಿಸಿ
ನಂತರ ಕಾದ ಎಣ್ಣೆಗೆ ಹಾಕಿ, ಎರಡೂ ಕಡೆ ಕಂದು ಬಣ್ಣ ಬರುವವರೆಗೂ ಕರಿದರೆ ಶಂಕರಪೊಳಿ ರೆಡಿ



