ಏನೇನ್ ಬೇಕು?
ಬ್ರೆಡ್
ರವೆ
ಮೊಸರು
ಈರುಳ್ಳಿ
ಹಸಿಮೆಣಸಿನಕಾಯಿ
ಕೊತ್ತಂಬರಿ ಸೊಪ್ಪು
ಅರಿಶಿಣ
ಉಪ್ಪು
ಎಣ್ಣೆ
ಮಾಡೋದು ಹೇಗೆ ನೋಡಿಕೊಳ್ಳಿ
ಒಂದು ಬೌಲ್ನಲ್ಲಿ ರವೆ, ಮೊಸರು, ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಅರಿಶಿಣ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ 2-3 ಚಮಚ ನೀರು ಸೇರಿಸಿ, 5 ರಿಂದ 10 ನಿಮಿಷ ಹಾಗೇ ಬಿಡಿ. ಈಗ ಬ್ರೆಡ್ ಸ್ಲೈಸ್ ತೆಗೆದುಕೊಂಡು, ಅದರ ಮೇಲೆ ತಯಾರಿಸಿರುವ ರವಾ ಮಿಶ್ರಣವನ್ನು ಸಮವಾಗಿ ತೆಳುವಾಗಿ ಹಚ್ಚಿ. ತವಾವನ್ನು ಬಿಸಿ ಮಾಡಿ, ಸ್ವಲ್ಪ ಎಣ್ಣೆ ಸವರಿ. ರವಾ ಹಚ್ಚಿದ ಭಾಗವನ್ನು ಕೆಳಗೆ ಬರುವಂತೆ ಬ್ರೆಡ್ ಅನ್ನು ತವಾ ಮೇಲೆ ಹಾಕಿ. ಸಣ್ಣ ಉರಿಯಲ್ಲಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಬೇಯಿಸಿ, ನಂತರ ಮತ್ತೊಂದು ಬದಿಯನ್ನೂ ರೋಸ್ಟ್ ಮಾಡಿ. ಈಗ ಬಿಸಿಬಿಸಿಯಾದ ಕ್ರಿಸ್ಪಿ ರವಾ ಬ್ರೆಡ್ ಟೋಸ್ಟ್ ಸವಿಯಲು ಸಿದ್ಧ!
ಇದನ್ನ ತಿಂದ್ರೆ ಏನ್ ಲಾಭ?
ರವೆಯಲ್ಲಿ ಕಾರ್ಬೋಹೈಡ್ರೇಟ್ಸ್ ಸಮೃದ್ಧವಾಗಿದ್ದು, ಇದು ದೇಹಕ್ಕೆ ದಿನವಿಡೀ ಅಗತ್ಯವಿರುವ ಚೈತನ್ಯವನ್ನು ನೀಡುತ್ತದೆ.
ಇದರಲ್ಲಿ ನಾರಿನಾಂಶ ಇರುವುದರಿಂದ ಜೀರ್ಣಕ್ರಿಯೆ ಸರಾಗವಾಗಿರಲು ಸಹಾಯ ಮಾಡುತ್ತದೆ.
ಮೊಸರು ಮತ್ತು ಈರುಳ್ಳಿ ದೇಹಕ್ಕೆ ಅಗತ್ಯವಿರುವ ಪ್ರೋಟೀನ್, ವಿಟಮಿನ್ ಮತ್ತು ಮಿನರಲ್ಸ್ಗಳನ್ನು ಒದಗಿಸುತ್ತದೆ.



