November 10, 2026
Tuesday, November 10, 2026
spot_img

ಹಬ್ಬದ ಖುಷಿಗೆ ಗರಿ ಗರಿಯಾದ ಸಿಹಿ ತಿಂಡಿ ಶಂಕರಪೊಳಿ ಮಾಡಿನೋಡಿ, ರೆಸಿಪಿ ಇಲ್ಲಿದೆ

ಸಾಮಾಗ್ರಿಗಳು

ಮೈದಾ
ಸಕ್ಕರೆ
ತುಪ್ಪ
ಹಾಲು
ಏಲಕ್ಕಿ ಪುಡಿ
ಉಪ್ಪು
ಎಣ್ಣೆ

ಮಾಡುವ ವಿಧಾನ

ಒಂದು ಪಾತ್ರೆಯಲ್ಲಿ ಮೈದಾ, ತುಪ್ಪ, ಏಲಕ್ಕಿ ಪುಡಿ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ಸಕ್ಕರೆಯನ್ನು ಹಾಲಿನಲ್ಲಿ ಕರಗಿಸಿ. ಈ ಹಾಲನ್ನು ಸ್ವಲ್ಪ ಸ್ವಲ್ಪವಾಗಿ ಮೈದಾಗೆ ಸೇರಿಸಿ ಗಟ್ಟಿಯಾದ ಹಿಟ್ಟನ್ನು ತಯಾರಿಸಿ.
ಹಿಟ್ಟನ್ನು ಮುಚ್ಚಿ 15–20 ನಿಮಿಷ ನೆನೆಯಲು ಬಿಡಿ. ಹಿಟ್ಟು ತುಂಬಾ ಗಟ್ಟಿ ಇರಬಾರದು ಹಾಗೆ ತುಂಬಾ ಮೆತ್ತಗೂ ಇರಬಾರದು
ನಂತರ ಈ ಹಿಟ್ಟನ್ನು ಚಪಾತಿಯಂತೆ ಲಟ್ಟಿಸಿಕೊಳ್ಳಿ
ಆನಂತರ ಚಾಕುವಿನಲ್ಲಿ ವಜ್ರದ ಆಕಾರದಲ್ಲಿ ಶಂಕರಪೊಳಿಗಳನ್ನು ಕತ್ತರಿಸಿ
ನಂತರ ಕಾದ ಎಣ್ಣೆಗೆ ಹಾಕಿ, ಎರಡೂ ಕಡೆ ಕಂದು ಬಣ್ಣ ಬರುವವರೆಗೂ ಕರಿದರೆ ಶಂಕರಪೊಳಿ ರೆಡಿ

Must Read