November 11, 2026
Wednesday, November 11, 2026
spot_img

ಕೇದಾರನಾಥ ಯಾತ್ರೆಗೆ ತೆರೆ: ಮಹಾದೇವನ ದರುಶನ ಪಡೆದ 19.20 ಲಕ್ಷ ಭಕ್ತರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಹಿಮಾಲಯದ ಮಡಿಲಲ್ಲಿರುವ ಪ್ರಸಿದ್ಧ ಕೇದಾರನಾಥ ಧಾಮದಲ್ಲಿ ಈ ವರ್ಷದ ಯಾತ್ರಾ ಋತುವಿಗೆ ತೆರೆ ಬಿದ್ದಿದೆ. ನವೆಂಬರ್ 11ರ ಬುಧವಾರ ಬೆಳಗ್ಗೆ 8.30ಕ್ಕೆ ಸಾಂಪ್ರದಾಯಿಕ ಧಾರ್ಮಿಕ ವಿಧಿವಿಧಾನಗಳೊಂದಿಗೆ ದೇವಾಲಯದ ಬಾಗಿಲುಗಳನ್ನು ಮುಚ್ಚಲಾಯಿತು. ಈ ವರ್ಷ ದೇಶ-ವಿದೇಶಗಳಿಂದ 19.20 ಲಕ್ಷಕ್ಕೂ ಅಧಿಕ ಭಕ್ತರು ಕೇದಾರನಾಥನ ದರುಶನ ಪಡೆದಿದ್ದಾರೆ ಎಂದು ಬಿಕೆಟಿಸಿ ಅಧ್ಯಕ್ಷರು ತಿಳಿಸಿದ್ದಾರೆ.

ಈ ಬಾರಿಯ ಯಾತ್ರೆಯಲ್ಲಿ ಸುಮಾರು 19.5 ಲಕ್ಷ ಭಕ್ತರು ಬಾಬಾ ಕೇದಾರನ ಆಶೀರ್ವಾದ ಪಡೆದಿದ್ದು, ಇದು ಹೊಸ ದಾಖಲೆಯಾಗಿದೆ. ಯಾತ್ರೆ ಸುಗಮವಾಗಿ ನಡೆಯಲು ಸಹಕರಿಸಿದ ಅರ್ಚಕರು, ಕೇದಾರ ಸಭಾ ಸದಸ್ಯರು, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಪೊಲೀಸ್ ಸಿಬ್ಬಂದಿ ಹಾಗೂ ಜಿಲ್ಲಾಡಳಿತಕ್ಕೆ ಬಿಕೆಟಿಸಿ ಅಧ್ಯಕ್ಷರು ಧನ್ಯವಾದ ಸಲ್ಲಿಸಿದ್ದಾರೆ.

ಇದನ್ನೂ ಓದಿ:

ಉಖಿಮಠದಲ್ಲಿ ಮುಂದುವರಿಯಲಿದೆ ಪೂಜೆ

ಕೇದಾರನಾಥ ದೇಗುಲದ ಬಾಗಿಲು ಮುಚ್ಚಿದ ಬಳಿಕ ಬಾಬಾ ಕೇದಾರನ ಉತ್ಸವ ಮೂರ್ತಿಯ ಪಲ್ಲಕ್ಕಿ (ಡೋಲಿ) ಉಖಿಮಠದ ಓಂಕಾರೇಶ್ವರ ದೇವಸ್ಥಾನಕ್ಕೆ ತೆರಳಲಿದೆ. ಚಳಿಗಾಲದ ಅವಧಿಯಲ್ಲಿ ಅಲ್ಲಿಯೇ ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ. ಕೇದಾರನಾಥಕ್ಕೆ ಭೇಟಿ ನೀಡಲು ಸಾಧ್ಯವಾಗದ ಭಕ್ತರು ಉಖಿಮಠದಲ್ಲಿ ದೇವರ ದರುಶನ ಪಡೆಯಬಹುದು.

ಏಪ್ರಿಲ್ 22ರಂದು ಆರಂಭವಾಗಿದ್ದ ಈ ವರ್ಷದ ಯಾತ್ರೆ ಇದೀಗ ಮುಕ್ತಾಯಗೊಂಡಿದೆ. ಮುಂದಿನ ವರ್ಷ ಅಕ್ಷಯ ತೃತೀಯದ ಆಸುಪಾಸಿನಲ್ಲಿ ದೇವಾಲಯದ ಬಾಗಿಲುಗಳು ಮತ್ತೆ ತೆರೆಯುವ ನಿರೀಕ್ಷೆಯಿದೆ.

Must Read