November 11, 2026
Wednesday, November 11, 2026
spot_img

350ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಸಾಮರ್ಥ್ಯ; ಯಲಹಂಕದಲ್ಲಿ ಅರೆನಾ ಕೇಂದ್ರ ಆರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತದ ಪ್ರಮುಖ ಆನಿಮೇಷನ್ ತರಬೇತಿ ಸಂಸ್ಥೆಗಳಲ್ಲಿ ಒಂದಾದ ಅರೆನಾ ಆನಿಮೇಷನ್, ಬೆಂಗಳೂರಿನ ಯಲಹಂಕ ನ್ಯೂ ಟೌನ್‌ನಲ್ಲಿ ತನ್ನ ನೂತನ ತರಬೇತಿ ಕೇಂದ್ರವನ್ನು ಉದ್ಘಾಟಿಸಿದೆ. ಅರೆನಾ ಆನಿಮೇಷನ್‌ನ ಹಿರಿಯ ಉಪಾಧ್ಯಕ್ಷ ಹಾಗೂ ರಾಷ್ಟ್ರೀಯ ಮಾರಾಟ ವಿಭಾಗದ ಮುಖ್ಯಸ್ಥ ಶಾಜನ್ ಸ್ಯಾಮ್ಯುಯೆಲ್ ಅವರು ಕೇಂದ್ರವನ್ನು ಉದ್ಘಾಟಿಸಿದರು.

ಆನಿಮೇಷನ್, ಗೇಮಿಂಗ್, ಗ್ರಾಫಿಕ್ ಡಿಸೈನ್, ಡಿಜಿಟಲ್ ಕಂಟೆಂಟ್ ಕ್ರಿಯೇಷನ್ ಮತ್ತು ಮಲ್ಟಿಮೀಡಿಯಾ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುವ ಯುವಕರಿಗೆ ಗುಣಮಟ್ಟದ ತರಬೇತಿ ನೀಡುವುದು ಈ ಕೇಂದ್ರದ ಉದ್ದೇಶವಾಗಿದೆ.

ಸುಮಾರು 1,800 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿರುವ ಈ ಕೇಂದ್ರವು 350ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಸಾಮರ್ಥ್ಯ ಹೊಂದಿದೆ. ಅತ್ಯಾಧುನಿಕ ಮೂಲಸೌಕರ್ಯ, ನವೀನ ಸಾಫ್ಟ್‌ವೇರ್ ಮತ್ತು ತಂತ್ರಜ್ಞಾನಗಳ ಜೊತೆಗೆ ವಿಶೇಷ ಕ್ರೋಮ್ ಸ್ಟುಡಿಯೋ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಇಲ್ಲಿ ಕಲ್ಪಿಸಲಾಗಿದೆ.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶಾಜನ್ ಸ್ಯಾಮ್ಯುಯೆಲ್, “ಯಲಹಂಕದಲ್ಲಿ ನೂತನ ಕೇಂದ್ರದ ಆರಂಭವು AVGC (ಆನಿಮೇಷನ್, VFX, ಗೇಮಿಂಗ್ ಮತ್ತು ಕಾಮಿಕ್ಸ್) ಉದ್ಯಮದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಯುವಕರಿಗೆ ಹೊಸ ಅವಕಾಶಗಳನ್ನು ಒದಗಿಸಲಿದೆ. ಸೃಜನಶೀಲ ಪ್ರತಿಭೆಗಳನ್ನು ಗುರುತಿಸಿ, ಉದ್ಯಮಕ್ಕೆ ಅಗತ್ಯವಿರುವ ಕೌಶಲ್ಯಗಳೊಂದಿಗೆ ಅವರನ್ನು ಸಜ್ಜುಗೊಳಿಸುವುದು ನಮ್ಮ ಉದ್ದೇಶವಾಗಿದೆ,” ಎಂದರು.

ಅರೆನಾ ಆನಿಮೇಷನ್ ಯಲಹಂಕ ಕೇಂದ್ರದ ನಿರ್ದೇಶಕ ಹಾಗೂ ಉದ್ಯಮ ಪಾಲುದಾರ ಇಮ್ಯಾನುಯೆಲ್ ಬ್ರಾಂಡನ್ ಮಾತನಾಡಿ, “ಭಾರತದ AVGC ಉದ್ಯಮವು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಚಲನಚಿತ್ರಗಳು, OTT ಮತ್ತು ಜಾಹೀರಾತು ಕ್ಷೇತ್ರಗಳಲ್ಲಿ ಭಾರತೀಯ ಕಲಾವಿದರು ತಮ್ಮ ಸೃಜನಶೀಲತೆ ಹಾಗೂ ತಾಂತ್ರಿಕ ಕೌಶಲ್ಯದಿಂದ ಗಮನ ಸೆಳೆಯುತ್ತಿದ್ದಾರೆ. ಈ ಬೆಳವಣಿಗೆಯಲ್ಲಿ ಅರೆನಾ ಆನಿಮೇಷನ್‌ನಂತಹ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ,” ಎಂದರು. ಈ ಹೊಸ ಕೇಂದ್ರದ ಆರಂಭದೊಂದಿಗೆ ಬೆಂಗಳೂರಿನಲ್ಲಿ ಅರೆನಾ ಆನಿಮೇಷನ್‌ನ ಕೇಂದ್ರಗಳ ಸಂಖ್ಯೆ 12ಕ್ಕೂ ಹೆಚ್ಚಾಗಿದೆ.

ವಿಳಾಸ: ನಂ. 723, 3ನೇ ಮಹಡಿ, 16 A ಮುಖ್ಯ ರಸ್ತೆ, ಯಲಹಂಕ ನ್ಯೂ ಟೌನ್, ಬೆಂಗಳೂರು – 560064.
ಸಂಪರ್ಕ: 7338044777

Must Read