November 11, 2026
Wednesday, November 11, 2026
spot_img

ಈ ವರ್ಷ ಜನರನ್ನು ರಂಜಿಸಿ ಸೂಪರ್‌ ಹಿಟ್‌ ಆದ ಟಾಪ್‌ 10 ಒಟಿಟಿ ಸರಣಿಗಳಿವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈ ವರ್ಷ ಇನ್ನೇನು ಕೊನೆಯ ಹಂತಕ್ಕೆ ಬಂದು ತಲುಪಿದೆ. ಈ ವರ್ಷದಲ್ಲಿ ಜನರು ಹೆಚ್ಚಾಗಿ ಸಿನಿಮಾ, ಒಟಿಟಿಯಲ್ಲಿ ಬರುವ ಸೀರೀಸ್‌ಗಳನ್ನು ನೋಡಿ ಎಂಜಾಯ್‌ ಮಾಡಿದ್ದಾರೆ. 2026ನೇ ಸಾಲಿನಲ್ಲಿ ಭಾರತದ ವಿವಿಧ ಒಟಿಟಿ ವೇದಿಕೆಗಳಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದು ಸೂಪರ್ ಹಿಟ್ ಆದ ಟಾಪ್‌ 10 ಸಿನಿಮಾ ಹಾಗೂ ಸೀರೀಸ್‌ಗಳ ಲಿಸ್ಟ್‌ ಇಲ್ಲಿದೆ..

ಟಾಪ್‌ 10ನಲ್ಲಿ ಪಂಜಾಬಿ ಕ್ರೈಮ್‌ ಥ್ರಿಲ್ಲರ್‌ ಸೀರೀಸ್‌ನ ಎರಡನೇ ಭಾಗ ಕೊಹ್ರಾ ರಿಲೀಸ್‌ ಆಗಿದ್ದು, ನೆಟ್‌ಫ್ಲಿಕ್ಸ್‌ನಲ್ಲಿ ತೆರೆಕಂಡಿದೆ. ಬರೋಬ್ಬರಿ 70 ಲಕ್ಷಕ್ಕೂ ಅಧಿಕ ಮಂದಿ ಇದನ್ನು ವೀಕ್ಷಣೆ ಮಾಡಿದ್ದಾರೆ.

ಟಾಪ್‌ 9 ರಲ್ಲಿ ನಟಿ ಸಮಂತಾ ರುತ್‌ ಪ್ರಭು ಅಭಿನಯದ ಮಾ ಇಂಟಿ ಬಂಗಾರಂ ಸಿನಿಮಾ ಸ್ಥಾನ ಗಿಟ್ಟಿಸಿಕೊಂಡಿದೆ. ಫ್ಯಾಮಿಲಿ ಹಾಗೂ ಆಕ್ಷನ್‌ ಡ್ರಾಮಾ ಇದಾಗಿದ್ದು, ಅಮೇಜಾನ್‌ ಪ್ರೈಮ್‌ ಹಾಗೂ ಜಿಯೋ ಹಾಟ್‌ಸ್ಟಾರ್‌ನಲ್ಲಿ ಸಿನಿಮಾ ವೀಕ್ಷಿಸಬಹುದಾಗಿದೆ.

ಟಾಪ್‌ 8 ರಲ್ಲಿ ಅಲಿ ಫಜಲ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕ್ರೈಮ್‌ ಥ್ರಿಲ್ಲರ್‌ ಸರಣಿ ರಾಖ್‌ ಇದೆ. 90 ಲಕ್ಷಕ್ಕೂ ಅಧಿಕ ಮಂದಿ ಈ ಸೀರಿಸ್‌ ನೋಡಿದ್ದು, ಅಮೇಜಾನ್‌ ಪ್ರೈಮ್‌ನಲ್ಲಿ ಸರಣಿ ಲಭ್ಯವಿದೆ.

ಇನ್ನು 7ನೇ ಸ್ಥಾನದಲ್ಲಿ ಮಲಯಾಳಂ ಫ್ಯಾಮಿಲಿ ಎಂಟರ್‌ಟೈನರ್‌ ಸಿನಿಮಾ ಬೆತ್ಲಹೆಮ್‌ ಕುಟುಂಬ ಯುನಿಟ್‌ ಸ್ಥಾನ ಪಡೆದುಕೊಂಡಿದೆ. ಜಿಯೋ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿರುವ ಈ ಕ್ಯೂಟ್‌ ಸಿನಿಮಾ ಎಲ್ಲ ವಯಸ್ಸಿನವರಿಗೂ ಇಷ್ಟವಾಗುವಂಥದ್ದಾಗಿದೆ. ನಿವಿನ್‌ ಪೌಲಿ ಹಾಗೂ ಮಮಿತಾ ಬೈಜು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

6ನೇ ಸ್ಥಾನದಲ್ಲಿ ಅರ್ಷದ್‌ ವಾರ್ಸಿ ಹಾಗೂ ಪ್ರಸನ್ನ ಅಭಿನಯದ ಪ್ರೀತಮ್‌ & ಪೆಡ್ರೋ ಸ್ಥಾನ ಪಡೆದಿದೆ. ಹಾಸ್ಯಮಯ ಕ್ರೈಮ್‌ ಥ್ರಿಲ್ಲರ್‌ ಇದಾಗಿದ್ದು, ಜನರ ಮಾತಿನಿಂದ ಸೀರೀಸ್‌ ಹೆಚ್ಚು ಜನರನ್ನು ತಲುಪಿದೆ. ಸರಣಿ ಸುಮಾರು 1.47 ಕೋಟಿ ವೀಕ್ಷಣೆಗಳೊಂದಿಗೆ ವರ್ಷದ ಅತ್ಯಂತ ಜನಪ್ರಿಯ ಒರಿಜಿನಲ್ ಸರಣಿಗಳಲ್ಲಿ ಒಂದಾಗಿದೆ. ಜಿಯೋ ಹಾಟ್‌ಸ್ಟಾರ್‌ನಲ್ಲಿ ಸೀರೀಸ್‌ ಲಭ್ಯವಿದೆ.

ಐದನೇ ಸ್ಥಾನದಲ್ಲಿ ದಿವ್ಯಾ ದತ್ತ ಅಭಿನಯದ ಚಿರಯ್ಯಾ ಸ್ಥಾನ ಪಡೆದಿದೆ. ಸುಮಾರು 1.63 ಕೋಟಿ ವೀಕ್ಷಣೆ ಪಡೆದು ವೀಕ್ಷಕರ ಮೆಚ್ಚುಗೆ ಗಳಿಸಿದೆ. ಇದು ಜಿಯೋಹಾಟ್‌ಸ್ಟಾರ್ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ನಾಲ್ಕನೇ ಸ್ಥಾನದಲ್ಲಿ ನಟ ಪ್ರಭಾಸ್‌ ಅಭಿನಯದ ದಿ ರಾಜಾ ಸಾಬ್‌ ಇದೆ. ಹಾರರ್‌ ಕಾಮಿಡಿ ಸಿನಿಮಾ ಇದಾಗಿದ್ದು, ಸೌತ್‌ ಇಂಡಸ್ಟ್ರಿಯ ಹಿಟ್‌ ಎನಿಸಿಕೊಂಡಿದೆ. ಜಿಯೋಹಾಟ್‌ಸ್ಟಾರ್‌ನಲ್ಲಿ ಸಿನಿಮಾ ಲಭ್ಯವಿದೆ.

ಮೂರನೇ ಸ್ಥಾನದಲ್ಲಿ ಮೇಡ್‌ ಇನ್‌ ಇಂಡಿಯಾ: ಎ ಟೈಟಾನ್‌ ಸ್ಟೋರಿ ಸೀರೀಸ್‌ ಇದೆ. ಭಾರತದ ಖ್ಯಾತ ವಾಚ್‌ ಬ್ರಾಂಡ್‌ ಆಗಿರುವ ಟೈಟನ್‌ ಹುಟ್ಟಿದ್ದು ಹೇಗೆ? ಏನೆಲ್ಲಾ ಕಷ್ಟಗಳನ್ನು ಅನುಭವಿಸಿದೆ ಎನ್ನುವ ಕಥೆ ಇದಾಗಿದೆ. ಈ ವೆಬ್ ಸರಣಿ 1.78 ಕೋಟಿ ವೀಕ್ಷಣೆ ಪಡೆದಿದೆ. ಇದನ್ನು ಅಮೆಜಾನ್ ಎಂಎಕ್ಸ್ ಪ್ಲೇಯರ್ ಹಾಗೂ ಪ್ರೈಮ್‌ ವಿಡಿಯೋದಲ್ಲಿ ನೋಡಬಹುದಾಗಿದೆ.

ಎರಡನೇ ಸ್ಥಾನದಲ್ಲಿ ಧುರಂದರ್‌ ಸಿನಿಮಾ ಇದೆ. ರಣ್‌ವೀರ್‌ ಸಿಂಗ್‌, ಅಕ್ಷಯ್‌ ಖನ್ನಾ, ಸಂಜಯ್‌ ದತ್‌ ಇನ್ನಿತರ ದಿಗ್ಗಜರು ನಟಿಸಿರುವ ಈ ಸಿನಿಮಾ ನೋಡದವರಿಲ್ಲ. ಆಕ್ಷನ್‌ ಥ್ರಿಲ್ಲರ್‌ ಹಾಗೂ ದೇಶಪ್ರೇಮ ಸಾರುವ ಸಿನಿಮಾ ಇದಾಗಿದ್ದು, ಒಟಿಟಿ ಹಾಗೂ ಥಿಯೇಟರ್‌ ಎರಡಲ್ಲೂ ಸಿನಿಮಾ ಹಿಟ್‌ ಆಗಿದೆ. 3.52 ಕೋಟಿ ವೀಕ್ಷಕರನ್ನು ತಲುಪುವ ಮೂಲಕ ಈ ವರ್ಷ ಒಟಿಟಿಯಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಹಿಂದಿ ಸಿನಿಮಾವಾಗಿದೆ. ನೆಟ್‌ಫ್ಲಿಕ್ಸ್‌ ಹಾಗೂ ಜಿಯೋ ಹಾಟ್‌ಸ್ಟಾರ್‌ನಲ್ಲಿ ಸಿನಿಮಾ ಲಭ್ಯವಿದೆ.

3.85 ಕೋಟಿಗೂ ಅಧಿಕ ವೀಕ್ಷಣೆಯಿಂದಾಗಿ ಕಮಿಡಿಯನ್‌ ಸಮಯ್‌ ರೈನಾ ಅವರ ಇಂಡಿಯಾಸ್‌ ಗಾಟ್‌ ಲೇಟೆಂಟ್‌ ಶೋ ನಂಬರ್‌ ಒನ್‌ ಸ್ಥಾನ ಪಡೆದಿದೆ. ರಿಯಾಲಿಟಿ ಶೋ ಕಮ್‌ ಕಾಮಿಡಿ ಶೋ ಇದಾಗಿದ್ದು, ಈ ವರ್ಷದ ನಂಬರ್‌ ಒನ್‌ ಎಂಟರ್‌ಟೈನ್ಮೆಂಟ್‌ ಶೋ ಆಗಿದೆ ಹೊರಹೊಮ್ಮಿದೆ. ಯುಟ್ಯೂಬ್‌ ಹಾಗೂ ನೆಟ್‌ಫ್ಲಿಕ್ಸ್‌ನಲ್ಲಿ ಲೇಟೆಂಟ್‌ ಶೋ ಲಭ್ಯವಿದೆ.

Must Read