November 11, 2026
Wednesday, November 11, 2026
spot_img

ಗಲ್ವಾನ್‌ ಸಂಘರ್ಷದ ಕಥೆ ʼಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್ʼ ಟ್ರೇಲರ್‌ ರಿಲೀಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚೀನಾ ಮತ್ತು ಭಾರತದ ಯೋಧರ ನಡುವೆ ಗಲ್ವಾನ್‌ನಲ್ಲಿ ನಡೆದ ಸಂಘರ್ಷದ ಕಥೆಯನ್ನೊಳಗೊಂಡ ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್ ಸಿನಿಮಾದ ಟ್ರೈಲರ್‌ ರಿಲೀಸ್ ಆಗಿದೆ.

ನಟ ಸಲ್ಮಾನ್‌ ಖಾನ್‌ ಭಾರತೀಯ ಸೇನಾ ತುಕಡಿಯೊಂದರ ಬೆಟಾಲಿಯನ್ ನಾಯಕನಾಗಿ ಕಾಣಸಿಕೊಂಡಿದ್ದಾರೆ. ಚೀನಾ ಹಾಗೂ ಭಾರತದ ಗಡಿ ಕಾಯುವುದು ಸಲ್ಮಾನ್‌ ಹಾಗೂ ಟೀಂನ ಕೆಲಸವಾಗಿದೆ. ಚೀನಾ ಸೈನಿಕರ ಉದ್ಧಟತನ, ಆದರೆ ಶಾಂತಿ ಕಾಪಾಡುವ ಜವಾಬ್ದಾರಿ ಎರಡನ್ನೂ ನಿಭಾಯಿಸುವ ಸೈನಿಕರ ಧೈರ್ಯ, ಸಂಯಮ, ದೇಶ ಪ್ರೇಮದ ಕತೆಯನ್ನು ಸಿನಿಮಾ ಒಳಗೊಂಡಿದೆ.

ನಾಲ್ಕು ನಿಮಿಷದ ಟ್ರೈಲರ್‌ ಇದಾಗಿದ್ದು, ಸಲ್ಮಾನ್ ಅವರು 16 ಬಿಹಾರ್ ರೆಜಿಮೆಂಟ್‌ನ ಕಮಾಂಡಿಂಗ್ ಆಫೀಸರ್ ಕರ್ನಲ್ ಬಿಕ್ಕುಮಲ್ಲ ಸಂತೋಷ್ ಬಾಬು ಅವರಿಂದ ಪ್ರೇರಿತವಾದ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಸಂತೋಷ್ ಬಾಬು ಅವರಿಗೆ ಮರಣೋತ್ತರವಾಗಿ ಮಹಾವೀರ ಚಕ್ರ ನೀಡಲಾಗಿತ್ತು. ಗಲ್ವಾನ್​​ನಲ್ಲಿ ಚೀನಾ ಮತ್ತು ಭಾರತದ ಯೋಧರ ನಡುವೆ ಬಂದೂಕು ಯುದ್ಧದ ಬದಲಿಗೆ ಕೈ-ಕೈ ಮಿಲಾಯಿಸಿ ಘರ್ಷಣೆ ನಡೆದಿತ್ತು. ಅತ್ಯಂತ ಭೀಕರವಾಗಿ ನಡೆದಿದ್ದ ಈ ಜಗಳದಲ್ಲಿ ಎರಡೂ ಕಡೆಯವರಿಗೆ ಸಾಕಷ್ಟು ಹಾನಿ ಆಗಿತ್ತು.

ಸಿನಿಮಾ ಟ್ರೈಲರ್‌ ರಿಲೀಸ್‌ ಆಗುತ್ತಿದ್ದಂತೆಯೇ ಅಭಿಮಾನಿಗಳು ಥ್ರಿಲ್‌ ಆಗಿದ್ದು, ಬಹಳ ಸಮಯದ ನಂತರ ದೇಶಪ್ರೇಮದ ಸಿನಿಮಾ ನೋಡೋದಕ್ಕೆ ಕಾತರವಾಗಿದ್ದೇವೆ ಎಂದು ಹೇಳಿದ್ದಾರೆ. ಇದು ಯಾರದ್ದೇ ಬಯೋಪಿಕ್‌ ಅಲ್ಲ, ಸಿನಿಮಾಗೆ ಸರ್ಕಾರದ ಹಸ್ತಕ್ಷೇಪವೂ ಇಲ್ಲ ಎಂದು ಟೀಂ ವಿವರಣೆ ನೀಡಿದೆ. ಕೆಲ ಕಾರಣಗಳಿಂದ ಸಿನಿಮಾ ರಿಲೀಸ್‌ ನಿಧಾನವಾಗುತ್ತಿದ್ದು, ಡಿಸೆಂಬರ್ 4 ಕ್ಕೆ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಹೇಳಿದೆ.

Must Read