November 11, 2026
Wednesday, November 11, 2026
spot_img

ಆಸ್ಕರ್‌ ಅಂಗಳಕ್ಕೆ ಕಾಲಿಟ್ಟ ರಾಮಾಯಣ : ಯಾವ ವಿಭಾಗದಲ್ಲಿ ಸ್ಪರ್ಧೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ರಾಮಾಯಣ ಸಿನಿಮಾ ಆಸ್ಕರ್‌ ಅಂಗಳಕ್ಕೆ ಎಂಟ್ರಿ ನೀಡುವ ಪ್ರಯತ್ನದಲ್ಲಿದೆ. ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮಾಡುತ್ತಿರುವ ಈ ಚಿತ್ರವನ್ನು 99ನೇ ಅಕಾಡೆಮಿ ಪ್ರಶಸ್ತಿಗಳ ಪರಿಗಣನೆಗಾಗಿ ಸಲ್ಲಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಆಸ್ಕರ್‌ಗೆ ಸಿನಿಮಾ ಸಲ್ಲಿಯಾಗಿದ್ದು, ನಾಮನಿರ್ದೇಶನದ ಪಟ್ಟಿಗೆ ಆಯ್ಕೆಯಾಗುತ್ತದೋ ಇಲ್ಲವೋ ಎಂದು ಕಾದುನೋಡಬೇಕಿದೆ. ಅಕಾಡೆಮಿಗಳ ನಿಯಮಗಳ ಪ್ರಕಾರ ಅರ್ಹತೆ ಪರಿಶೀಲನೆ ಮತ್ತು ಮುಂದಿನ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಈ ಬಾರಿ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಭಾರತದ ಅಧಿಕೃತ ಪ್ರವೇಶವಾಗಿ ಮರಾಠಿ ಸಿನಿಮಾ ಗೊಂಧಲ್ ಆಯ್ಕೆಯಾಗಿದೆ. ಹೀಗಾಗಿ ರಾಮಾಯಣ ಚಿತ್ರಕ್ಕೆ ಆಸ್ಕರ್ ಪರಿಗಣನೆಯ ಅವಕಾಶವಿಲ್ಲ ಎಂದು ಭಾವಿಸುವ ಅಗತ್ಯವಿಲ್ಲ. ಒಂದು ದೇಶದಿಂದ ಅಧಿಕೃತವಾಗಿ ಆಯ್ಕೆಯಾದ ಸಿನಿಮಾ ಮಾತ್ರವೇ ಆಸ್ಕರ್‌ಗೆ ಅರ್ಹವಾಗಿರುತ್ತದೆ ಎಂಬ ನಿಯಮವಿಲ್ಲ. ಅಕಾಡೆಮಿಯ ಅರ್ಹತಾ ಮಾನದಂಡಗಳನ್ನು ಪೂರೈಸುವ ಇತರ ಸಿನಿಮಾಗಳು ಕೂಡ ನಿರ್ದಿಷ್ಟ ವಿಭಾಗಗಳಲ್ಲಿ ಸ್ವತಂತ್ರವಾಗಿ ಸಲ್ಲಿಕೆಯಾಗಬಹುದು.

ಬಾಕ್ಸ್‌ ಆಫೀಸ್‌ನಲ್ಲೂ ಅಬ್ಬರ

ರಾಮಾಯಣ ಪಾರ್ಟ್‌ ಒನ್‌ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡುತ್ತಿದೆ. ದೀಪಾವಳಿ ರಜೆ ಹಿನ್ನೆಲೆಯಲ್ಲಿ ‘ರಾಮಾಯಣ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಐತಿಹಾಸಿಕ ಕಲೆಕ್ಷನ್ ಮಾಡುತ್ತಿದೆ. ಆರನೇ ದಿನ ಭಾರತದಲ್ಲಿ 94.10 ಕೋಟಿ ರೂಪಾಯಿ ನೆಟ್ ಗಳಿಸಿರುವ ಚಿತ್ರ, ವಿಶ್ವವ್ಯಾಪಿಯಾಗಿ ಒಟ್ಟು 823.50 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಹಬ್ಬದ ಸಂಭ್ರಮ ಮುಂದುವರಿದಿದ್ದು, ಶೀಘ್ರದಲ್ಲೇ 1000 ಕೋಟಿ ರೂಪಾಯಿ ಕ್ಲಬ್ ಸೇರುವ ನಿರೀಕ್ಷೆಯಿದೆ.

Must Read