November 13, 2026
Friday, November 13, 2026
spot_img

ಹಾರಂಗಿ ಹಿನ್ನೀರಿನಲ್ಲಿ ಬೋಟ್ ಮಗುಚಿ ದಂಪತಿ ಸಾ*ವು: ಮಕ್ಕಳಿಬ್ಬರ ರಕ್ಷಣೆ

ಹೊಸದಿಗಂತ ವರದಿ ಕುಶಾಲನಗರ:

ಹಾರಂಗಿ ಹಿನ್ನೀರಿನಲ್ಲಿ ವಾಟರ್ ಸ್ಪೋರ್ಟ್ಸ್ ಬೋಟ್ ಮಗುಚಿ ದಂಪತಿ ಸಾವಿಗೀಡಾಗಿರುವ ದಾರುಣ ಘಟನೆ ಶುಕ್ರವಾರ ನಡೆದಿದೆ.

ಮೃತರನ್ನು ಗುಜರಾತ್’ನ ಸೂರತ್ ಮೂಲದ ಧರ್ಮೇಶ್((50) ಹಾಗೂ ನಿಮ್ಮಿ (48) ಎಂದು ಗುರುತಿಸಲಾಗಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. 21 ಹಾಗೂ 24 ವರ್ಷದ ಇಬ್ಬರು ಮಕ್ಕಳನ್ನು ರಕ್ಷಿಸಲಾಗಿದೆ.

ಹಾರಂಗಿ ಅಣೆಕಟ್ಟೆ ಸಮೀಪದ ಆನೆ ಶಿಬಿರದ ಬಳಿಯ ಖಾಸಗಿ ಅಡ್ವೆಂಚರ್ ವಾಟರ್ ಸ್ಪೋರ್ಟ್ಸ್‌ನ ‘ಸ್ಪೋರ್ಟ್ಸ್ ಬೋಟ್’ನಲ್ಲಿ ಇಬ್ಬರು ಮಕ್ಕಳೊಂದಿಗೆ ದಂಪತಿ ಬೋಟಿಂಗ್‌ಗೆ ತೆರಳಿದ್ದರೆನ್ನಲಾಗಿದ್ದು, ಬೋಟ್ ತಿರುವು ಪಡೆಯುವ ಸಂದರ್ಭದಲ್ಲಿ ಪಲ್ಟಿಯಾದ ಪರಿಣಾಮ ದಂಪತಿ ಬೋಟ್ ಅಡಿಯಲ್ಲಿ ಸಿಲುಕಿ ಸಾವಿಗೀಡಾಗಿರುವುದಾಗಿ ಪ್ರಾಥಮಿಕ ವರದಿ ತಿಳಿಸಿದೆ.

ಇದನ್ನೂ ಓದಿ:

ನಾಲ್ವರು ಕೂಡಾ ಲೈಫ್ ಜಾಕೆಟ್ ಧರಿಸಿದ್ದರೂ, ಬೋಟ್ ಮಗುಚಿಗೊಂಡ ಪರಿಣಾಮ ದಂಪತಿ ಅದರ ಅಡಿಯಲ್ಲಿ ಸಿಲುಕಿದ್ದಾರೆ. ನೀರಿನಲ್ಲಿ ತೇಲುತ್ತಿದ್ದ ಇಬ್ಬರು‌ ಮಕ್ಕಳನ್ನು ರಕ್ಷಿಸಲಾಗಿದೆ. ಘಟನೆ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಕುಶಾಲನಗರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಮೃತದೇಹಗಳನ್ನು ಹೊರತೆಗೆದು ಕುಶಾಲನಗರ ಆಸ್ಪತ್ರೆಗೆ ಸಾಗಿಸಿದ್ದಾರೆ.

Must Read

Skip to toolbar