November 14, 2026
Saturday, November 14, 2026
spot_img

ಬೆಂಗಳೂರಿನಲ್ಲಿ ಶಾಕಿಂಗ್‌ ಘಟನೆ: ಕೆಮಿಕಲ್‌ ತುಂಬಿದ್ದ ಬಕೆಟ್‌ಗೆ ಬಿದ್ದು ಮಗು ದುರ್ಮರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಕ್ಕಳ ದಿನಾಚರಣೆಯಂದೇ ಕೆಮಿಕಲ್‌ ತುಂಬಿದ್ದ ಬಕೆಟ್‌ಗೆ ಬಿದ್ದು ಮಗು ಮೃತಪಟ್ಟಿರುವ ಘಟನೆ ಬೆಂಗಳೂರಿನ ಶ್ರೀರಾಮಪುರದಲ್ಲಿ ನಡೆದಿದೆ.

ಒಂಬತ್ತು ವರ್ಷದ ಸುಬ್ರಮಣಿ ಮೃತಪಟ್ಟ ಮಗು. ಮಗು ವಾಸವಿದ್ದ ಮನೆಯ ಪಕ್ಕದಲ್ಲಿ ಕೆಮಿಕಲ್‌ ಫ್ಯಾಕ್ಟರಿ ಇತ್ತು. ಮಗು ಆಟವಾಡುತ್ತಾ ಕೆಮಿಕಲ್‌ ಫ್ಯಾಕ್ಟರಿಗೆ ಬಂದಿದೆ. ಬಕೆಟ್‌ ತುಂಬಾ ಇದ್ದ ಕೆಮಿಕಲ್‌ನ್ನು ನೋಡದೇ ಬಿದ್ದಿದೆ. ತಕ್ಷಣವೇ ಜನರು ಮಗುವನ್ನು ಸ್ಥಳೀಯರು ಎತ್ತಿಕೊಂಡಿದ್ದಾರೆ.

ತದನಂತರ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಇಂದು ಮೃತಪಟ್ಟಿದೆ. ಯಾವ ರೀತಿಯ ಕೆಮಿಕಲ್‌ ಇತ್ತು ಎನ್ನುವ ಬಗ್ಗೆ ಮಾಹಿತಿ ದೊರೆತಿಲ್ಲ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

Must Read