November 14, 2026
Saturday, November 14, 2026
spot_img

Men’s Care | ಸಿಂಪಲ್ ಸ್ಟೆಪ್ಸ್, ಸ್ಟೈಲಿಶ್ ಲುಕ್: ಪ್ರತಿ ಪುರುಷರು ತಿಳಿದುಕೊಳ್ಳಲೇಬೇಕಾದ ಸ್ಕಿನ್ ಕೇರ್ ಟಿಪ್ಸ್

ಪುರುಷರ ತ್ವಚೆಯು ಹವಾಮಾನ, ಧೂಳು ಮತ್ತು ಬಿಸಿಲಿನ ಕಾರಣದಿಂದ ಬೇಗನೆ ನಿರ್ಜೀವವಾಗುತ್ತದೆ. ಕೇವಲ ಸೋಪ್ ಹಚ್ಚಿ ಮುಖ ತೊಳೆಯುವುದರಿಂದ ತ್ವಚೆಯ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ನೈಸರ್ಗಿಕವಾದ ಹೊಳಪು ಮತ್ತು ಆರೋಗ್ಯಕರ ತ್ವಚೆಗಾಗಿ ಈ ಸರಳ ಹಂತಗಳನ್ನು ಫಾಲೋ ಮಾಡಿ.

ಕ್ಲೆನ್ಸಿಂಗ್

ದಿನವಿಡೀ ಹೊಡಾಡುವಾಗ ಮುಖದ ಮೇಲೆ ಸಂಗ್ರಹವಾಗುವ ಕೊಳೆ ಮತ್ತು ಎಣ್ಣೆಯಂಶವನ್ನು ತೆಗೆಯಲು ದಿನಕ್ಕೆರಡು ಬಾರಿ ಒಳ್ಳೆಯ ಮೈಲ್ಡ್ ಫೇಸ್‌ವಾಶ್ ಬಳಸಿ. ಒರಟಾದ ಸೋಪುಗಳನ್ನು ಮುಖಕ್ಕೆ ಬಳಸುವುದನ್ನು ಬಿಟ್ಟು, ನಿಮ್ಮ ತ್ವಚೆಗೆ ತಕ್ಕ ಫೇಸ್‌ವಾಶ್ ಆಯ್ಕೆಮಾಡಿ.

ಸ್ಕಿನ್ ಹೈಡ್ರೇಶನ್

ಪುರುಷರ ತ್ವಚೆಗೂ ಮಾಯಿಶ್ಚರೈಸರ್ ಅತ್ಯಗತ್ಯ. ಶೇವಿಂಗ್ ಮಾಡಿದ ನಂತರ ಅಥವಾ ಮುಖ ತೊಳೆದ ತಕ್ಷಣ ಒಳ್ಳೆಯ ಮಾಯಿಶ್ಚರೈಸರ್ ಹಚ್ಚುವುದರಿಂದ ತ್ವಚೆ ಮೃದುವಾಗಿರುವುದಲ್ಲದೆ, ಕಾಂತಿಯುತವಾಗಿ ಕಾಣುತ್ತದೆ. ಜೊತೆಗೆ ದಿನಕ್ಕೆ ಕನಿಷ್ಠ 8 ರಿಂದ 10 ಗ್ಲಾಸ್ ನೀರು ಕುಡಿಯುವುದು ಒಳತು.

ಸನ್‌ಸ್ಕ್ರೀನ್

ಬಿಸಿಲು ಮತ್ತು ಯುವಿ ಕಿರಣಗಳು ತ್ವಚೆಯನ್ನು ಕಪ್ಪಾಗಿಸಿ ಹಾನಿ ಮಾಡುತ್ತವೆ. ನೀವು ಬಿಸಿಲಿಗೆ ಹೊರಡುವ ೨೦ ನಿಮಿಷ ಮುಂಚಿತವಾಗಿ ಕನಿಷ್ಠ ಎಸ್‌ಪಿಎಫ್ 30 ಇರುವ ಸನ್‌ಸ್ಕ್ರೀನ್ ಅನ್ನು ಮುಖ ಮತ್ತು ಕುತ್ತಿಗೆಗೆ ತಪ್ಪದೆ ಹಚ್ಚಿಕೊಳ್ಳಿ.

ವಾರಕ್ಕೊಮ್ಮೆ ಎಕ್ಸ್‌ಫೋಲಿಯೇಷನ್

ಮುಖದ ಮೇಲಿನ ಸತ್ತ ಚರ್ಮದ ಕೋಶಗಳನ್ನು ಮತ್ತು ಬ್ಲ್ಯಾಕ್‌ಹೆಡ್ಸ್‌ಗಳನ್ನು ತೊಡೆದುಹಾಕಲು ವಾರಕ್ಕೆ ಒಮ್ಮೆಯಾದರೂ ಮೈಲ್ಡ್ ಸ್ಕ್ರಬ್ ಬಳಸಿ ಮುಖವನ್ನು ಮಸಾಜ್ ಮಾಡಿ. ಇದು ತ್ವಚೆಗೆ ಹೊಸ ತಾಜಾತನವನ್ನು ನೀಡುತ್ತದೆ.

ಆರೋಗ್ಯಕರ ಜೀವನಶೈಲಿ

ಚರ್ಮದ ಹೊಳಪು ಕೇವಲ ಹೊರಗಿನ ಉತ್ಪನ್ನಗಳಿಂದ ಮಾತ್ರ ಬರುವುದಿಲ್ಲ. ರಾತ್ರಿ ಕನಿಷ್ಠ 7-8 ಗಂಟೆಗಳ ಗಾಢ ನಿದ್ರೆ, ಎಣ್ಣೆ ಹಾಗೂ ಜಂಕ್ ಫುಡ್ ಕಡಿಮೆ ಮಾಡಿ ತಾಜಾ ಹಣ್ಣು-ತರಕಾರಿಗಳನ್ನು ಸೇವಿಸುವುದು ನಿಮ್ಮ ಮುಖದ ಸ್ವಾಭಾವಿಕ ಕಾಂತಿಯನ್ನು ಇಮ್ಮಡಿಗೊಳಿಸುತ್ತದೆ.

ನಿಮ್ಮ ತ್ವಚೆಯನ್ನು ಪ್ರೀತಿಸಿ, ಪ್ರತಿದಿನ ಕೇವಲ 5 ನಿಮಿಷ ಮೀಸಲಿಟ್ಟರೆ ಸಾಕು ಎಲ್ಲರೂ ತಿರುಗಿ ನೋಡುವಂಥ ಆಕರ್ಷಕ ಗ್ಲೋ ನಿಮ್ಮದಾಗುತ್ತದೆ.

Must Read

Skip to toolbar