ಹೊಸದಿಗಂತ ಡಿಜಿಟಲ್ ಡೆಸ್ಕ್:
ಓಲ, ಊಬರ್ ಕ್ಯಾಬ್ಗಳಲ್ಲಿ ಇನ್ಮುಂದೆ ಮೀಟರ್ ಅಳವಡಿಕೆ ಕಡ್ಡಾಯ ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲ ಓಲಾ ಊಬರ್ ಕ್ಯಾಬ್ಗಳಿಗೆ ಮೀಟರ್ ಬೋರ್ಡ್ ಕಡ್ಡಾಯವಾಗಿದೆ. ಮೀಟರ್ ಬೋರ್ಡ್ ಇಲ್ಲದ ವಾಹನಗಳನ್ನು ಸೀಝ್ ಮಾಡಲಾಗುತ್ತದೆ. ಆಟೋ ಮೀಟರ್ ಬೋರ್ಡ್ ಮಾದರಿಯಲ್ಲಿ ಕ್ಯಾಬ್ ಓಡಿಸಬೇಕು. ಸಾರಿಗೆ ಇಲಾಖೆಯ ರೂಲ್ಸ್ ಪಾಲನೆ ಮಾಡಲೇಬೇಕು. ಆ್ಯಪ್ ಮೂಲಕ ದುಡ್ಡು ಸಂಗ್ರಹ ಮಾಡುವಂತಿಲ್ಲ ಎಂದು ತಿಳಿಸಿದ್ದಾರೆ.
ಇದರ ಜೊತೆಗೆ ಫುಟ್ಪಾತ್ನಲ್ಲಿ ದ್ವಿಚಕ್ರ ವಾಹನ ಓಡಿಸಿದರೆ ದಂಡ ಮಾತ್ರವಲ್ಲ ಗಾಡಿಯೂ ಸೀಜ್ ಆಗಲಿದೆ. ಈಗಾಗಲೇ ಈ ವಿಚಾರದಲ್ಲಿ ಕಾಯ್ದೆ ಜಾರಿಗೆ ಕಾನೂನು ಅಂಶಗಳ ಪರಿಶೀಲನೆ ಬಹುತೇಕ ಅಂತ್ಯವಾಗಿದೆ. ಹಾಫ್ ಹೆಲ್ಮೆಟ್ ತಯಾರಿಕಾ ಕೇಂದ್ರಗಳನ್ನೂ ಬಂದ್ ಮಾಡಲಾಗುವುದು. ಹೊಸ ವರ್ಷಕ್ಕೆ ಕಾಯ್ದೆ ರೂಪದಲ್ಲಿ ಹೊಸ ನಿಯಮ ಜಾರಿಗೆ ಬರಲಿದೆ ಎಂದಿದ್ದಾರೆ
ಹಾಫ್ ಹೆಲ್ಮೆಟ್ ಬ್ಯಾನ್
ಹೊಸ ವರ್ಷದಿಂದ ಹಾಫ್ ಹೆಲ್ಮೆಟ್ ಕೂಡ ಬ್ಯಾನ್ ಮಾಡಲಾಗುತ್ತದೆ. ನಾನು ಹಾಫ್ ಹೆಲ್ಮೆಟ್ ವಿರೋಧಿ. ಅಪಘಾತ ಆದ ಸಂದರ್ಭಗಳಲ್ಲಿ ಹೆಚ್ಚಿನ ಸಂಖ್ಯೆಯ ಜನ ಈ ರೀತಿ ಹಾಫ್ ಹೆಲ್ಮೆಟ್ ಅಥವಾ ಹೆಲ್ಮೆಟ್ ಹಾಕದೇ ತಲೆಗೆ ಪೆಟ್ಟು ಮಾಡಿಕೊಳ್ಳುತ್ತಾರೆ. ಸುರಕ್ಷತೆಗಾಗಿ ವಿಮೆ ಮಾಡಿಸುವ ಜನರಿಗೆ ಒಂದೊಳ್ಳೆ ಹೆಲ್ಮೆಟ್ ಖರೀದಿ ಮಾಡುವುದು ಕಷ್ಟವಿಲ್ಲ. ಹೊಸ ವರ್ಷದಿಂದ ಹೊಸ ರೂಲ್ಸ್ ಜಾರಿ ಮಾಡುತ್ತೇವೆ ಎಂದಿದ್ದಾರೆ.



