ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ರಣ್‌ವೀರ್ ಸಿಂಗ್ ಹಾಗೂ ಡೈರೆಕ್ಟರ್ ಆದಿತ್ಯ ಧಾರ್ ಕಾಂಬಿನೇಷನ್‌ನಲ್ಲಿ ಮೂಡಿಬಂದ ಧುರಂದರ್ ಸಿನಿಮಾ ಸೂಪರ್ ಹಿಟ್ ಆಗಿದೆ. ಬಾಲಿವುಡ್‌ನ ಅತಿ ಪವರ್‌ಫುಲ್ ಸಿನಿಮಾಗಳ ಪೈಕಿ ಧುರಂದರ್, ಹಾಗೂ ಪಾರ್ಟ್ ಒನ್ ಎರಡೂ ಕೂಡ ಸೇರಿದೆ. ಇದೇ ಕಾಂಬಿನೇಷನ್‌ನಲ್ಲಿ ಇದೀಗ ಮತ್ತೊಂದು ಸಿನಿಮಾ ಮೂಡಿಬರುತ್ತಿದೆ.
ಹೌದು, ರಣ್‌ವೀರ್ ಸಿಂಗ್, ಆದಿತ್ಯ ಧಾರ್ ಕಾಂಬಿನೇಷನ್‌ನಲ್ಲಿ ಚಂದ್ರಗುಪ್ತ ಮೌರ್ಯ ಸಿನಿಮಾ ಮೂಡಿಬರುತ್ತಿದೆ ಎನ್ನಲಾಗಿದೆ. ಈ ಸಿನಿಮಾ ಬಗ್ಗೆ ರಣ್‌ವೀರ್ ಹಾಗೂ ಆದಿತ್ಯ ಹಿಂಟ್‌ಗಳನ್ನು ನೀಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇದರ ಕ್ರೇಝ್ ಹೆಚ್ಚಾಗಿದೆ. ಈ ಸಿನಿಮಾ ಕಾಸ್ಟಿಂಗ್ ಬಗ್ಗೆ ಮಾತು ಆರಂಭವಾಗಿದೆ.
ಚಂದ್ರಗುಪ್ತ ಮೌರ್ಯನ ಪಾತ್ರದಲ್ಲಿ ನಟ ಯಶ್ ಕಾಣಿಸಿಕೊಳ್ಳಲಿದ್ದಾರೆ. ಚಾಣಕ್ಯ ಪಾತ್ರಕ್ಕೆ ರಣ್‌ವೀರ್ ಸಿಂಗ್ ಫೈನಲ್ ಆಗಿದ್ದಾರೆ. ಇನ್ನು ಉಳಿದ ಮುಖ್ಯ ಕ್ಯಾರೆಕ್ಟರ್‌ಗಳಿಗೆ ದೊಡ್ಡ ದೊಡ್ಡ ಹೆಸರುಗಳು ಕೇಳಿಬರುತ್ತಿವೆ. ನಟ ಫಹಾದ್ ಫಾಸಿಲ್, ಪೃತ್ವಿರಾಜ್, ವಿಜಯ್ ಸೇತುಪತಿ ಕೂಡ ಸಿನಿಮಾದಲ್ಲಿ ಅಭಿನಯ ಮಾಡಲಿದ್ದಾರೆ.
ಈ ಬಗ್ಗೆ ರಣ್‌ವೀರ್ ಪೋಸ್ಟ್ ಒಂದನ್ನು ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಲ್‌ಚಲ್ ಎಬ್ಬಿಸಿದೆ. ರಣ್‌ವೀರ್ ತಮ್ಮ ಶರ್ಟ್‌ಲೆಸ್ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಖ್ಯಾತ ಇನ್ಫ್ಲೂಯೆನ್ಸರ್‌ಗಳಿಗೆ ರೆಡ್ ಎನ್‌ವಲೊಪ್ ಒಂದನ್ನು ನೀಡಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಇಲ್ಲಿ ಬಿಗ್ ಅನೌನ್ಸ್‌ಮೆಂಟ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.



