November 17, 2026
Tuesday, November 17, 2026
spot_img

Top 10 | ಈ ವರ್ಷದಲ್ಲಿ ಜನರ ಪ್ಲೇಲಿಸ್ಟ್‌ ಸೇರಿದ ಹತ್ತು ಬ್ಯೂಟಿಫುಲ್‌ ಕನ್ನಡ ಹಾಡುಗಳಿವು..

ಕೆಲವರಿಗೆ ಹಾಡು ಕೇಳಿಕೊಂಡು ಕೆಲಸ ಮಾಡೋಕೆ ಆರಂಭಿಸಿದರೆ ದಿನ ಹೋಗೋದೇ ಗೊತ್ತಾಗೋದಿಲ್ಲ. ಇನ್ನೂ ಹಲವರಿಗೆ ಹಾಡು ಕೇಳ್ತಾ ಇದ್ದರೆ ಕೆಲಸಕ್ಕೆ ಹೋಗಬೇಕು ಅನ್ನೋದೇ ಅರಿವಾಗೋದಿಲ್ಲ. ಏನೇ ಇರಲಿ ಹಾಡುಗಳು, ಸಂಗೀತ ನಮ್ಮ ಜೀವನದ ಅವಿಭಾಜ್ಯ ಅಂಗ. ಬೆಳಗ್ಗೆ ಎದ್ದಾಗ ಪ್ಲೇ ಆಗುವ ಸುಪ್ರಭಾತದಿಂದ ರಾತ್ರಿ ಮಲಗುವಾಗ ಹಾಕಿಕೊಳ್ಳುವ ಮೆಲೋಡಿ ಹಾಡುಗಳು ದಿನವನ್ನು ಸಂಪೂರ್ಣ ಎನಿಸುವಂತೆ ಮಾಡುತ್ತದೆ. ಈ ವರ್ಷ ಕನ್ನಡ ಸಿನಿಮಾಗಳ ಮೂಲಕ ಅತ್ಯಂತ ಅದ್ಭುತವಾದ ಹಾಡುಗಳು ಸಿಕ್ಕಿವೆ. ಇದರಲ್ಲಿ ಜನ ಇಷ್ಟಪಟ್ಟು ಪದೇ ಪದೆ ಪ್ಲೇ ಮಾಡಿರುವ ಹಾಡುಗಳು ಯಾವುದು? ಇಲ್ಲಿದೆ ಲಿಸ್ಟ್‌..

ಹತ್ತನೇ ಸ್ಥಾನದಲ್ಲಿ ನಟ ಗಣೇಶ್‌ ಅಭಿನಯದ ಕೃಷ್ಣಂ ಪ್ರಣಯ ಸಖಿ ಸಿನಿಮಾದ ದ್ವಾಪರ ಹಾಡು ಸ್ಥಾನ ಪಡೆದುಕೊಂಡಿದೆ. ರೀಲ್ಸ್‌ಗಳಲ್ಲಿ ಈ ಹಾಡು ರಾರಾಜಿಸಿದ್ದು, ಜನರ ಪ್ಲೇಲಿಸ್ಟ್‌ನಲ್ಲಿ ರಿಪೀಟ್‌ ಮೋಡ್‌ನಲ್ಲಿದೆ.

ಒಂಬತ್ತನೇ ಸ್ಥಾನದಲ್ಲಿ ಎಕ್ಕ ಸಿನಿಮಾದ ಫೇಮಸ್‌ ಬ್ಯಾಂಗಲ್‌ ಬಂಗಾರಿ ಹಾಡು ಇದೆ. ಜನ ಶಾಲೆಗಳಲ್ಲಿ, ಕಾಲೇಜುಗಳಲ್ಲಿ, ಮದುವೆ ಸಮಾರಂಭಗಳಲ್ಲಿ ಈ ಹಾಡಿಗೆ ನೃತ್ಯ ಮಾಡಿ ಎಂಜಾಯ್‌ ಮಾಡಿದ್ದಾರೆ. ಇಡೀ ಹಾಡಿನ ಲಿರಿಕ್ಸ್‌ನ್ನು ಬಾಯಿಪಾಠ ಮಾಡಿದ್ದಾರೆ.

ಎಂಟನೇ ಸ್ಥಾನದಲ್ಲಿ ಡಾರ್ಲಿಂಗ್‌ ಕೃಷ್ಣ ಅಭಿನಯದ ಬ್ರಾಟ್‌ ಸಿನಿಮಾದ ನಾನೇ ನೀನಂತೆ ಹಾಡು ರಾರಾಜಿಸಿದೆ. ಪ್ರೀತಿಯಲ್ಲಿರುವ ಪ್ರತಿಯೊಬ್ಬರು ಈ ಹಾಡನ್ನು ತಮ್ಮ ಲೈಫ್‌ ಜೊತೆ ಹೋಲಿಸಿಕೊಂಡಿದ್ದಾರೆ. ಜಿಮ್‌, ಡ್ರೈವಿಂಗ್‌ ಮಾಡುವಾಗಲು ಈ ಹಾಡು ಇದ್ದೇ ಇದೆ.

ಏಳನೇ ಸ್ಥಾನಕ್ಕೆ ಸಂಜಿತ್‌ ಹೆಗಡೆ ಹಾಡಿರುವ ಹಾಯಾಗಿ ಅಪ್ಪುವ ತಂಗಾಳಿಯಂತೆ ( ಕರೆಯೋಲೆ) ಹಾಡು ಆಯ್ಕೆಯಾಗಿದೆ. ಗಾಯಕ ಸಂಜಿತ್‌ ಹೆಗಡೆ ಆಗಾಗ ಫ್ರೀ ಆಲ್ಬಂ ಸಾಂಗ್‌ಗಳನ್ನು ರಿಲೀಸ್‌ ಮಾಡಿ ಜನರ ಮನಸ್ಸನ್ನು ಗೆದ್ದುಬಿಡುತ್ತಾರೆ. ಇದೇ ರೀತಿ ಜೆನ್‌ಝೀಗಳಿಗೆ ಈ ಹಾಡು ತುಂಬಾನೇ ಇಷ್ಟವಾಗಿದೆ.

ಆರನೇ ಸ್ಥಾನದಲ್ಲಿ ಆಲ್ಮಂ ಹಾಡು ನಿನ್ನ ನೋಟವು ಅಲಂಕರಿಸಿದೆ. ಇಂಡಿಯನ್‌ ಫಿಲಂ ಪಾಪ್‌ ಜಾನರ್‌ನಲ್ಲಿ ಮೂಡಿಬಂದ ಹಾಡು ಇದಾಗಿದ್ದು, ತನ್ಮಯ್‌ ಗುರುರಾಜ್‌ ಅವರ ಆರ್ಟ್‌ ಇದಾಗಿದೆ. ಕನ್ನಡದ ಮೆಲೋಡಿ ಹಾಡುಗಳ ಲಿಸ್ಟ್‌ನಲ್ಲಿಯೂ ಈ ಸಾಂಗ್‌ಗೆ ತುಂಬಾನೇ ಡಿಮ್ಯಾಂಡ್‌ ಇದೆ.

ಐದನೇ ಸ್ಥಾನದಲ್ಲಿ ಏಳಮ್ಮ ತುಳಸಿ ಕೋಮಲವೇಣಿ ಹಾಡು ಜಾಗ ಗಿಟ್ಟಿಸಿಕೊಂಡಿದೆ. ಇದು ಪುರಂದರದಾಸರ ಪ್ರಸಿದ್ಧ ಕನ್ನಡ ಭಕ್ತಿಗೀತೆಯಾಗಿದೆ. ಆಲ್ಮಂ ರೂಪದಲ್ಲಿ ಹಾಡು ರಿಲೀಸ್‌ ಆದ ತಕ್ಷಣವೇ ಕೋಟ್ಯಂತರ ಮಂದಿ ಇದನ್ನು ಇಷ್ಟಪಟ್ಟಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ತಮ್ಮ ಮದುವೆಯ ವಿಡಿಯೋ ಪೋಸ್ಟ್‌ ಮಾಡುವ ವೇಳೆ ಬ್ಯಾಕ್‌ಗ್ರೌಂಡ್‌ಗಾಗಿ ಈ ಹಾಡನ್ನೇ ಬಳಕೆ ಮಾಡಿದ್ದಾರೆ.

ನಾಲ್ಕನೇ ಸ್ಥಾನವನ್ನು ಕಾಂತಾರ ಚಾಪ್ಟರ್‌ ಒನ್‌ ಸಿನಿಮಾದ ಬ್ರಹ್ಮಕಲಶ ಹಾಗೂ ಮದನ ಮನಮೋಹಿನಿ ಅಲಂಕರಿಸಿದೆ. ಕಾಂತಾರ ಸಿನಿಮಾ ನೋಡಿದವರು, ನೋಡದವರು ಕೂಡ ಈ ಹಾಡುಗಳನ್ನು ಇಷ್ಟಪಟ್ಟಿದ್ದಾರೆ. ಕನ್ನಡ ಭಾಷಿಕರು ಅಷ್ಟೇ ಅಲ್ಲದೆ, ಬೇರೆ ಬೇರೆ ಭಾಷೆಯ ಜನರಿಗೂ ಈ ಹಾಡುಗಳು ಆಸಕ್ತಿದಾಯಕ ಎನಿಸಿವೆ.

ಮೂರನೇ ಸ್ಥಾನದಲ್ಲಿ ಕನ್ನಡದ ಸೂಪರ್‌ಹಿಟ್‌ ಪ್ರೇಮದ ಊರಲಿ ಸಿನಿಮಾದ ಅಲೆ ಅಲೆ ಹಾಗೂ ಏರು ಪೇರು ಹೃದಯ ಹಾಡುಗಳ ಜಾಗ ಮಾಡಿಕೊಂಡಿವೆ. ಸಿನಿಮಾ ರಿಲೀಸ್‌ ಆಗಿ ತಿಂಗಳುಗಳೇ ಕಳೆದರೂ ಇನ್ನೂ ಫಿಲಂ ಥಿಯೇಟರ್‌ನಲ್ಲಿದೆ. ಹಾಡುಗಳ ಜನರ ಪ್ಲೇಲಿಸ್ಟ್‌ ಸೇರಿದೆ. ಮಕ್ಕಳಿಂದ ಹಿಡಿದು ವಯಸ್ಸಾದವರಿಗೂ ಕೂಡ ಈ ಹಾಡುಗಳು ಇಷ್ಟವಾಗಿವೆ.

ಎರಡನೇ ಸ್ಥಾನದಲ್ಲಿ ಸುದೀಪ್‌ ಅಭಿನಯದ ಮಾರ್ಕ್‌ ಸಿನಿಮಾದ ಮಸ್ತ್‌ ಮಲೈಕಾ ಹಾಗೂ ಡಾಲಿ ಧನಂಜಯ್‌ ನಟನೆಯ ಅಣ್ಣ ಫ್ರಮ್‌ ಮೆಕ್ಸಿಕೋ ಸಿನಿಮಾದ ಪುಟ್ಟಮಲ್ಲಿ ಕೂಡ ಸ್ಥಾನ ಪಡೆದುಕೊಂಡಿದೆ. ಕನ್ನಡದ ಆಲ್‌ ಟೈಮ್‌ ಫೇವರೆಟ್‌ ಡ್ಯಾನ್ಸ್‌ ನಂಬರ್ಸ್‌ ಸಾಲಿನಲ್ಲಿ ಈ ಹಾಡುಗಳು ಇರಲಿವೆ.

ಮೊದಲನೇ ಸ್ಥಾನದಲ್ಲಿ ಯಶ್‌ ನಟನೆಯ ಬಹುನಿರೀಕ್ಷಿತ ಟಾಕ್ಸಿಕ್‌ ಸಿನಿಮಾದ ತಬಾಹಿ ಹಾಡು ಇದೆ. ಸಿನಿಮಾ ಅಂದುಕೊಂಡಷ್ಟು ಹಿಟ್‌ ಆಗದಿದ್ದರೂ ಫಿಲಂನ ಹಾಡುಗಳು ಜನರಿಗೆ ಇಷ್ಟವಾಗಿದೆ. ಅದರಲ್ಲಿಯೂ ತಬಾಹಿ ಹಾಡನ್ನು ಎಲ್ಲ ಭಾಷೆಯಲ್ಲಿಯೂ ಜನ ಮೆಚ್ಚಿಕೊಂಡಿದ್ದಾರೆ.

Must Read