ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈವರೆಗೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ, ಪ್ರೀತಿಸಿದ ಹುಡುಗಿಯ ಬಗ್ಗೆ, ಮದುವೆ ಯಾಕೆ ಆಗಿಲ್ಲ ಎನ್ನುವ ಬಗ್ಗೆ ಮಾತನಾಡಿಯೇ ಇಲ್ಲ. ಇದೇ ಮೊದಲ ಬಾರಿಗೆ ತಮ್ಮ ವೈಯಕ್ತಿಕ ಜೀವನದ ನೆನಪೊಂದನ್ನು ಜನರ ಜೊತೆ ಹಂಚಿಕೊಂಡಿದ್ದಾರೆ.
ಸೋನಿಯಾ ಗಾಂಧಿ ಅವರ ಆತ್ಮಕಥೆ ಬಿಡುಗಡೆ ವೇಳೆ ರಾಹುಲ್ ಗಾಂಧಿ ತಮ್ಮ ಪರ್ಸನಲ್ ಲೈಫ್ನ ಸ್ಟೋರಿ ಒಂದನ್ನು ಹೇಳಿದ್ದಾರೆ. ನನ್ನ ತಂದೆ ತಾಯಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ರೆಸ್ಟೋರೆಂಟ್ನಲ್ಲಿ ಮೊದಲ ಬಾರಿ ಭೇಟಿಯಾಗಿದ್ದರು. ಆ ರೆಸ್ಟೋರೆಂಟ್ ಬಗ್ಗೆ ತುಂಬಾನೇ ಕಥೆಗಳನ್ನು ಹೇಳಿದ್ದರು.
ಹೀಗಾಗಿ ಅದು ಸ್ಪೆಷಲ್ ಜಾಗವಾಗಿತ್ತು. ನಾನು ಕೂಡ ನನ್ನ ಗರ್ಲ್ಫ್ರೆಂಡ್ ಜೊತೆ ಅದೇ ರೆಸ್ಟೋರೆಂಟ್ಗೆ ಹೋಗಿದ್ದೆ. ವೇಟರ್ ಬಳಿ ನನ್ನ ತಂದೆ ತಾಯಿ ಇಲ್ಲಿಯೇ ಮೊದಲು ಭೇಟಿಯಾಗಿದ್ದರು ಎಂದು ಹೇಳಿದೆ. ಅವರು ನಿಮ್ಮ ತಂದೆ ತಾಯಿ ಇಲ್ಲಿಗೆ ತುಂಬಾ ಸಲ ಬಂದಿದ್ದರು ಎಂದು ಹೇಳಿದ್ದಾರೆ ಎನ್ನುವ ನೆನಪನ್ನು ಮೆಲುಕು ಹಾಕಿದ್ದರು. ತದನಂತರ ನನ್ನ ಆಗಿನ ಗರ್ಲ್ಫ್ರೆಂಡ್ ಈಗ ನನ್ನ ಸ್ನೇಹಿತೆ ಅಷ್ಟೇ. ನಾವಿಬ್ಬರೂ ಈಗಲೂ ಒಂದೊಳ್ಳೆ ಸ್ನೇಹವನ್ನು ಶೇರ್ ಮಾಡುತ್ತೇವೆ ಎಂದು ಹೇಳಿದ್ದಾರೆ. ಮಗನ ಲವ್ ಸ್ಟೋರಿ ಸನ್ನಿವೇಶ ಕೇಳಿ ಸೋನಿಯಾ ಗಾಂಧಿಯವರು ಕೂಡ ನಕ್ಕಿದ್ದಾರೆ.
ರಾಜಕೀಯ, ಪಕ್ಷ ಸಂಘಟನೆಗಳ ನಡುವೆ ನನಗೆ ಬಿಡುವೇ ಇಲ್ಲ. ಸರಿಯಾದ ಹುಡುಗಿ ಸಿಕ್ಕಾಗ ಮದುವೆಯಾಗೋಣ. ಕೆಲಸಗಳ ಮಧ್ಯೆ ಮದುವೆ, ಪ್ರೀತಿ ಬಗ್ಗೆ ಮನಸು ಹಾಯಲಿಲ್ಲ ಎಂದು ಹೇಳಿದ್ದಾರೆ.



