ಸಾಮಾಗ್ರಿಗಳು
ಅಕ್ಕಿ ಹಿಟ್ಟು
ಬೆಲ್ಲ
ತುರಿದ ತೆಂಗಿನಕಾಯಿ
ಎಳ್ಳು
ಏಲಕ್ಕಿ ಪುಡಿ
ತುಪ್ಪ
ನೀರು
ಮಾಡುವ ವಿಧಾನ
ಮೊದಲು ಬಾಣಲೆಯಲ್ಲಿ ಅಕ್ಕಿ ಹಿಟ್ಟನ್ನು ಹಾಕಿ ಕಡಿಮೆ ಉರಿಯಲ್ಲಿ ಹಸಿ ವಾಸನೆ ಹೋಗುವವರೆಗೆ ಹುರಿದುಕೊಳ್ಳಿ. ಸಣ್ಣ ಉರಿಯಲ್ಲಿ ಹುರಿದರೆ ಹಿಟ್ಟು ಕಪ್ಪಾಗುವುದಿಲ್ಲ.
ಮತ್ತೊಂದು ಪಾತ್ರೆಯಲ್ಲಿ ಬೆಲ್ಲಕ್ಕೆ ಸ್ವಲ್ಪ ನೀರು ಸೇರಿಸಿ ಕರಗಿಸಿ. ನಂತರ ಅದನ್ನು ಸೋಸಿ ಮತ್ತೆ ಒಲೆಯ ಮೇಲಿಡಿ. ಬೆಲ್ಲದ ಪಾಕ ಸ್ವಲ್ಪ ಗಟ್ಟಿಯಾಗುವ ಹಂತಕ್ಕೆ ಬಂದಾಗ ಅದಕ್ಕೆ ತುರಿದ ತೆಂಗಿನಕಾಯಿ, ಹುರಿದ ಎಳ್ಳು ಮತ್ತು ಏಲಕ್ಕಿ ಪುಡಿ ಸೇರಿಸಿ.
ಈಗ ಹುರಿದ ಅಕ್ಕಿ ಹಿಟ್ಟನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸುತ್ತಾ ಚೆನ್ನಾಗಿ ಮಿಶ್ರಣ ಮಾಡಿ.
ಕೊನೆಯಲ್ಲಿ ತುಪ್ಪ ಸೇರಿಸಿ ಮಿಶ್ರಣವನ್ನು ಚೆನ್ನಾಗಿ ಕಲಸಿ. ಮಿಶ್ರಣ ಸ್ವಲ್ಪ ತಣ್ಣಗಾದ ಬಳಿಕ ಕೈಗೆ ತುಪ್ಪ ಸವರಿಕೊಂಡು ಸಣ್ಣ ಸಣ್ಣ ಉಂಡೆಗಳನ್ನಾಗಿ ಕಟ್ಟಿಕೊಂಡರೆ ಮಲೆನಾಡ ಸ್ಪೆಷಲ್ ಅಕ್ಕಿ ತಂಬಿಟ್ಟು ರೆಡಿ



