ಬೇಕಾಗುವ ಪದಾರ್ಥಗಳು:
ಬೀಟ್ರೂಟ್
ಈರುಳ್ಳಿ
ಬೆಳ್ಳುಳ್ಳಿ
ಬೆಣ್ಣೆ
ಕಾಳುಮೆಣಸಿನ ಪುಡಿ
ಉಪ್ಪು
ನೀರು
ಮಾಡುವ ವಿಧಾನ
ಕುಕ್ಕರ್‌ನಲ್ಲಿ ಒಂದು ಚಮಚ ತುಪ್ಪ ಹಾಕಿ, ಹೆಚ್ಚಿದ ಈರುಳ್ಳಿ ಮತ್ತು ಬೆಳ್ಳುಳ್ಳಿ ಹಾಕಿ ಸ್ವಲ್ಪ ಬಾಡಿಸಿ. ನಂತರ ಬೀಟ್ರೂಟ್ ತುಂಡುಗಳನ್ನು ಸೇರಿಸಿ 2 ನಿಮಿಷ ಹುರಿಯಿರಿ. ಇದಕ್ಕೆ 2 ಗ್ಲಾಸ್ ನೀರು ಮತ್ತು ಸ್ವಲ್ಪ ಉಪ್ಪು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ, 4 ರಿಂದ 5 ಸೀಟಿ ಕೂಗಿಸಿ ಚೆನ್ನಾಗಿ ಬೇಯಿಸಿಕೊಳ್ಳಿ. ಬೆಂದ ಮಿಶ್ರಣ ಸಂಪೂರ್ಣವಾಗಿ ತಣ್ಣಗಾದ ಬಳಿಕ, ಮಿಕ್ಸಿ ಜಾರ್‌ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಒಂದು ಪಾತ್ರೆಗೆ ಸೋಸಿ ಸಣ್ಣ ಉರಿಯಲ್ಲಿ ಒಂದು ಕುದಿ ಬೇಯಿಸಿ. ಇದಕ್ಕೆ ಕಾಳುಮೆಣಸಿನ ಪುಡಿ ಮತ್ತು ಸ್ವಲ್ಪ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಬಿಸಿ ಬಿಸಿಯಾದ ಬೀಟ್ರೂಟ್ ಸೂಪ್ ರೆಡಿ!



