ಸಾಮಾಗ್ರಿಗಳು
ಜೀರಿಗೆ
ಕಾಳುಮೆಣಸು
ಚಕ್ಕೆ
ಲವಂಗ
ಹಸಿಮೆಣಸು
ಕೊತ್ತಂಬರಿ
ಪುದೀನ
ಟೊಮ್ಯಾಟೊ
ಶುಂಠಿ
ಬೆಳ್ಳುಳ್ಳಿ
ಚಿಕನ್
ಉಪ್ಪು
ಅರಿಶಿಣ
ಈರುಳ್ಳಿ
ತುಪ್ಪ
ಮಾಡುವ ವಿಧಾನ
ಮೊದಲು ಮಿಕ್ಸಿ ಜಾರ್ಗೆ ಜೀರಿಗೆ, ಕಾಳುಮೆಣಸು, ಚಕ್ಕೆ,ಲವಂಗ, ಹಸಿಮೆಣಸು, ಕೊತ್ತಂಬರಿ , ಪುದೀನ, ಟೊಮ್ಯಾಟೊ, ಶುಂಠಿ, ಬೆಳ್ಳುಳ್ಳಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ
ಆನಂತರ ಪಾತ್ರೆಗೆ ಎಣ್ಣೆ ಹಾಕಿ, ಅದು ಕಾದ ನಂತರ ಚಿಕನ್ ಹಾಕಿ ಅರಿಶಿಣ ಉಪ್ಪು ಹಾಕಿ. ಚಿಕನ್ ಬೆಂದು ನೀರು ಬಿಟ್ಟು, ನಂತರ ಎಣ್ಣೆ ಬಿಡುವ ಸಂದರ್ಭದಲ್ಲಿ ಮಸಾಲೆ ಹಾಕಿ
ನಂತರ ಇನ್ನೊಂದು ಪಾತ್ರೆಗೆ ತುಪ್ಪ, ಹಸಿಮೆಣಸು, ಈರುಳ್ಳಿ ಹಾಕಿ ಬಾಡಿಸಿ
ಅದು ಮೆತ್ತಗಾದ ನಂತರ ಚಿಕನ್ ಗ್ರೇವಿಗೆ ಹಾಕಿ ಮಿಕ್ಸ್ ಮಾಡಿದ್ರೆ ಗ್ರೇವಿ ರೆಡಿ. ಇದನ್ನು ಪ್ಲೇನ್ ರೈಸ್, ಫ್ಲೇವರ್ ರೈಸ್, ರೊಟ್ಟಿ, ಚಪಾತಿ, ಪರೋಟ, ದೋಸೆ ಜೊತೆ ತಿನ್ನಬಹುದು



