November 20, 2026
Friday, November 20, 2026
spot_img

ದೆಹಲಿ ಶೂಟೌಟ್‌ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌: ದಾವೂದ್‌ ಸಹಚರ ಎನ್‌ಕೌಂಟರ್‌ನಲ್ಲಿ ಹತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಗುರುವಾರ ತಡರಾತ್ರಿ ಉತ್ತರ ಪ್ರದೇಶದ ಬುಲಂದರ್‌ಶಹರ್‌ನಲ್ಲಿ ನಡೆದ ಜಂಟಿ ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಭೂಗತ ಪಾತಕಿ ದಾವೂದ್‌ ಇಬ್ರಾಹಿಂನ ಡಿ-ಕಂಪನಿಯ ಜೊತೆ ನಂಟು ಹೊಂದಿದ್ದ ಗ್ಯಾಂಗ್‌ಸ್ಟರ್‌ ನಸೀಮ್‌ ದುರಾನಿ ಅಲಿಯಾಸ್‌ ರಿಜ್ವಾನ್‌ ಹತನಾಗಿದ್ದಾನೆ.

ನವೆಂಬರ್ 16 ರಂದು ಈಶಾನ್ಯ ದೆಹಲಿಯ ಕಾನೂನು ಸಚಿವ ಕಪಿಲ್ ಮಿಶ್ರಾ ಅವರ ಕಚೇರಿಯ ಬಳಿ ನಡೆದ 26 ವರ್ಷದ ಸಮೀರ್ ಎಂಬ ಯುವಕನ ಭೀಕರ ಹತ್ಯೆ ಪ್ರಕರಣದಲ್ಲಿ ದುರಾನಿ ಪ್ರಮುಖ ಆರೋಪಿಯಾಗಿದ್ದ.ಘಟನೆಯ ದಿನ ದುರಾನಿ ಸುಮಾರು 20 ಸುತ್ತು ಗುಂಡು ಹಾರಿಸಿ ಸಮೀರ್‌ನನ್ನು ಹತ್ಯೆಗೈದು ಪರಾರಿಯಾಗಿದ್ದ. ಆರೋಪಿಯ ಪತ್ತೆಗಾಗಿ ದೆಹಲಿ ಪೊಲೀಸರು ₹50,000 ಬಹುಮಾನವನ್ನೂ ಘೋಷಿಸಿದ್ದರು.

ಆತ ಬುಲಂದರ್‌ಶಹರ್‌ನಲ್ಲಿರುವ ಖಚಿತ ಮಾಹಿತಿ ದೊರೆಯುತ್ತಿದ್ದಂತೆಯೇ ದೆಹಲಿ ಪೊಲೀಸರು ಹಾಗೂ ನೋಯ್ಡಾ ವಿಶೇಷ ಕಾರ್ಯಪಡೆ ಜಂಟಿ ಕಾರ್ಯಾಚರಣೆ ಆರಂಭಿಸಿ ಸ್ಥಳವನ್ನು ಸುತ್ತುವರಿದಿತ್ತು. ಈ ವೇಳೆ ನಸೀಮ್‌ಗೆ ಶರಣಾಗುವಂತೆ ಸೂಚನೆ ನೀಡಿತ್ತು. ಆಗ ಆತ ಪೊಲೀಸರ ಕಡೆ ಗುಂಡು ಹಾರಿಸಿದ್ದ. ತದನಂತರ ಪೊಲೀಸರು ಪ್ರತಿದಾಳಿ ಮಾಡಿದ ವೇಳೆ ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಲಾಗಿದೆ. ಆದರೆ ಮಾರ್ಗಮಧ್ಯದಲ್ಲಿಯೇ ಆತ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.

Must Read