November 20, 2026
Friday, November 20, 2026
spot_img

ನೃತ್ಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ಜೀ ತೆಲುಗು ಸಜ್ಜು; ನವೆಂಬರ್ 22ರಂದು ಬೆಂಗಳೂರಿನಲ್ಲಿ ಆಡಿಷನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತೆಲುಗು ಕಿರುತೆರೆಯಲ್ಲಿ ಹಲವು ಪ್ರತಿಭಾವಂತ ಡ್ಯಾನ್ಸರ್‌ಗಳನ್ನು ಪರಿಚಯಿಸಿದ ಜೀ ತೆಲುಗಿನ ಜನಪ್ರಿಯ ಡ್ಯಾನ್ಸ್ ರಿಯಾಲಿಟಿ ಶೋ ‘ಆಟ’ ಹೊಸ ಸೀಸನ್‌ನೊಂದಿಗೆ ಮತ್ತೆ ಬರಲು ಸಜ್ಜಾಗಿದೆ.

ನೃತ್ಯ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸುತ್ತಾ ಬಂದಿರುವ ಈ ಶೋ, ಹೊಸ ಸೀಸನ್ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರಲಿದೆ. ಇದರ ಭಾಗವಾಗಿ ಜೀ ತೆಲುಗು ಬೆಂಗಳೂರಿನಲ್ಲಿ ಆಡಿಷನ್ ನಡೆಸುತ್ತಿದೆ. ನೃತ್ಯದಲ್ಲಿ ಆಸಕ್ತಿ ಇರುವವರಿಗೆ ತಮ್ಮ ಪ್ರತಿಭೆ ತೋರಿಸಲು ಇದೊಂದು ಉತ್ತಮ ಅವಕಾಶವಾಗಿದೆ.

18ರಿಂದ 30 ವರ್ಷದೊಳಗಿನವರು ಈ ಆಡಿಷನ್‌ನಲ್ಲಿ ಭಾಗವಹಿಸಬಹುದು. ನವೆಂಬರ್ 22, ಭಾನುವಾರದಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಬೆಂಗಳೂರಿನ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಆಡಿಷನ್ ನಡೆಯಲಿದೆ.

ಆಡಿಷನ್ ಸ್ಥಳ:

ಅಬ್ಬಯ್ಯ ನಾಯ್ಡು ಸ್ಟುಡಿಯೋ,
ಲೇಔಟ್ 134, 7ನೇ ಕ್ರಾಸ್ ರಸ್ತೆ,
ನಾಯ್ಡು ಲೇಔಟ್, ಚಿಕ್ಕಲಸಂದ್ರ, ಬೆಂಗಳೂರು.
ನೃತ್ಯದಲ್ಲಿ ಆಸಕ್ತಿ ಹೊಂದಿರುವವರು ನಿಗದಿತ ಸಮಯದಲ್ಲಿ ನೇರವಾಗಿ ಆಡಿಷನ್ ಸ್ಥಳಕ್ಕೆ ಭೇಟಿ ನೀಡಿ ಭಾಗವಹಿಸಬಹುದು. ನಿಮ್ಮ ನೃತ್ಯ ಪ್ರತಿಭೆಯನ್ನು ಪ್ರದರ್ಶಿಸಿ, ಜೀ ತೆಲುಗಿನ ‘ಆಟ’ ಶೋನಲ್ಲಿ ಸ್ಪರ್ಧಿಸುವ ಅವಕಾಶವನ್ನು ಪಡೆದುಕೊಳ್ಳಿ.

ನಿಮ್ಮ ನೃತ್ಯ ಪ್ರತಿಭೆ ತೋರಿಸಲು ಸಿದ್ಧರಿದ್ದೀರಾ? ಈ ಭಾನುವಾರ ಬೆಂಗಳೂರಿನಲ್ಲಿ ನಡೆಯುವ ಜೀ ತೆಲುಗಿನ ‘ಆಟ’ ಆಡಿಷನ್‌ನಲ್ಲಿ ಭಾಗವಹಿಸಿ!

Must Read