November 20, 2026
Friday, November 20, 2026
spot_img

ಪ್ರವಾಸಿಗರ ಹುಚ್ಚಾಟಕ್ಕೆ ಬ್ರೇಕ್ ಯಾವಾಗ? ವಿಭೂತಿ ಫಾಲ್ಸ್‌ನಲ್ಲಿ ಬಂಡೆ ಮೇಲಿಂದ ಜಾರಿ ಬಿದ್ದ ಯುವಕನ ರಕ್ಷಣೆ

ಹೊಸದಿಗಂತ ವರದಿ ಅಂಕೋಲಾ:

ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಬೇಜವಾಬ್ದಾರಿಯುತ ವರ್ತನೆ ಮುಂದುವರಿದಿದ್ದು, ತಾಲೂಕಿನ ಪ್ರಸಿದ್ಧ ವಿಭೂತಿ ಜಲಪಾತದಲ್ಲಿ ಅಪಾಯಕ್ಕೆ ಸಿಲುಕಿದ್ದ ಪ್ರವಾಸಿಗನನ್ನು ಜೀವ ರಕ್ಷಕ ಸಿಬ್ಬಂದಿ ರಕ್ಷಣೆ ಮಾಡಿ ಪುನರ್ಜನ್ಮ ನೀಡಿದ ಘಟನೆ ನಡೆದಿದೆ.

ಚೆನ್ನೈ ಮೂಲದ 9 ಮಂದಿ ಪ್ರವಾಸಿಗರ ತಂಡ ಶುಕ್ರವಾರ ಬೆಳಿಗ್ಗೆ ವಿಭೂತಿ ಜಲಪಾತ ವೀಕ್ಷಣೆಗೆಂದು ಆಗಮಿಸಿದ್ದು ಜಲಪಾತದ ಸಮೀಪ ಇರುವ ಬಂಡೆಯನ್ನೇರಿ ಮೋಜು ಮಸ್ತಿಯಲ್ಲಿ ತೊಡಗಿದ್ದ ಸಂದರ್ಭದಲ್ಲಿ ಗಜಪತಿ(25) ಎಂಬಾತ ಕಾಲು ಜಾರಿ ಸುಮಾರು 20 ಅಡಿ ಆಳದಲ್ಲಿ ನೀರಿನಲ್ಲಿ ಬಿದ್ದಿದ್ದು ಸ್ಥಳದಲ್ಲಿದ್ದ ಜೀವ ರಕ್ಷಕ ಸಿಬ್ಬಂದಿ ವಿಜಯ ನಾಯಕ ಅವರು ತಕ್ಷಣ ಕಾರ್ಯಾಚರಣೆ ನಡೆಸಿ ಜೀವರಕ್ಷಕ ಟ್ಯೂಬ್ ಸಹಾಯದಿಂದ ಅಪಾಯಕ್ಕೆ ಸಿಲುಕಿದ್ದ ಯುವಕನನ್ನು ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ:

ಜಿಲ್ಲೆಯ ಕಡಲ ತೀರಗಳಲ್ಲೂ ಸಮುದ್ರಕ್ಕಿಳಿದು ಪ್ರವಾಸಿಗರು ಅಪಾಯಕ್ಕೆ ಸಿಲುಕಿರುವ ಹಲವು ಘಟನೆಗಳು ಇತ್ತೀಚೇಗೆ ನಡೆದಿದೆ.

Must Read

Skip to toolbar