November 23, 2026
Monday, November 23, 2026
spot_img

ಕಾರವಾರ: ಪಾಳು ಬಾವಿಗೆ ಬಿದ್ದು ಎರಡು ವನ್ಯಜೀವಿ ಕಡವೆಗಳ ದಾರುಣ ಸಾ*ವು

ಹೊಸದಿಗಂತ ವರದಿ ಕಾರವಾರ:

ಬಂದರು ಇಲಾಖೆಗೆ ಸೇರಿರುವ ಜಮೀನಿನಲ್ಲಿರುವ ತೆರೆದ ಬಾವಿಗೆ ಬಿದ್ದು ವನ್ಯಜೀವಿ ಕಡವೆಗಳೆರಡು ಮೃತಪಟ್ಟಿರುವ ಘಟನೆ ನಗರದ ಅಲಿಗದ್ದಾದಲ್ಲಿ ಸಂಭವಿಸಿದೆ.

ಬಂದರು ಇಲಾಖೆಯ ನೌಕರರ ವಸತಿಗೃಹ ಇದೀಗ ಯಾರ ವಸತಿ ಇಲ್ಲದೇ ಪಾಳು ಬಿದ್ದ ಸ್ಥಿತಿಯಲ್ಲಿದ್ದು ಅಲ್ಲಿ ನೆಲಮಟ್ಟದಲ್ಲಿ ಇರುವ ಪಾಳು ಬಾವಿಯಲ್ಲಿ ಎರಡು ಕಡವೆಗಳ ಕಳೆಬರ ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದೆ.

ಸುಮಾರು 8 ವರ್ಷ ವಯಸ್ಸಿನ ಕಡವೆಗಳು ನಾಯಿ ಅಥವಾ ಬೇರೆ ಯಾವದೋ ಪ್ರಾಣಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಓಡಿ ಬಾವಿಗೆ ಬಿದ್ದಿರುವ ಸಾಧ್ಯತೆ ಇದ್ಧು ಮೃತಪಟ್ಟು ಸುಮಾರು ಮೂರು ದಿನಗಳು ಆಗಿರಬಹುದು ಎಂದು ಅಂದಾಜಿಸಲಾಗಿದೆ.

ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಮೃತ ಕಡವೆಗಳ ಸಂಸ್ಕಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.

Must Read

Skip to toolbar