ಏನೇನ್ ಬೇಕು?
ಪಾಲಕ್ ಸೊಪ್ಪು
ಗೋಧಿ ಹಿಟ್ಟು
ಹಸಿಮೆಣಸಿನಕಾಯಿ
ಬೆಳ್ಳುಳ್ಳಿ ಎಸಳು
ಜೀರಿಗೆ
ಉಪ್ಪು
ಎಣ್ಣೆ
ಮಾಡುವ ವಿಧಾನ
ತೊಳೆದ ಪಾಲಕ್ ಸೊಪ್ಪನ್ನು ಸ್ವಲ್ಪ ಬಿಸಿ ನೀರಿನಲ್ಲಿ 1–2 ನಿಮಿಷ ನೆನೆಸಿ, ನೀರು ಬಸಿದು ತಣ್ಣಗಾದ ಮೇಲೆ ರುಬ್ಬಿಕೊಳ್ಳಿ ಅಥವಾ ನುಣ್ಣಗೆ ಹೆಚ್ಚಿಕೊಳ್ಳಿ. ಅಗಲವಾದ ಪಾತ್ರೆಯಲ್ಲಿ ಗೋಧಿ ಹಿಟ್ಟು, ಪಾಲಕ್ ಮಿಶ್ರಣ, ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಜೀರಿಗೆ, ಉಪ್ಪು ಮತ್ತು 1 ಚಮಚ ಎಣ್ಣೆ ಹಾಕಿ ಚೆನ್ನಾಗಿ ಬೆರೆಸಿ. ಅಗತ್ಯವಿದ್ದಷ್ಟು ಮಾತ್ರ ನೀರು ಹಾಕಿ ಮೃದುವಾದ ಹಿಟ್ಟು ನಾದಿ, 15 ನಿಮಿಷ ಮುಚ್ಚಿಡಿ. ಹಿಟ್ಟಿನಿಂದ ಉಂಡೆಗಳನ್ನು ಮಾಡಿ, ಒಣ ಗೋಧಿ ಹಿಟ್ಟು ಹಚ್ಚಿ ದುಂಡಗೆ ಅಥವಾ ತ್ರಿಕೋನಾಕಾರದಲ್ಲಿ ಲಟ್ಟಿಸಿ. ಬಿಸಿ ತವಾದ ಮೇಲೆ ಪರೋಟ ಹಾಕಿ, ಎರಡೂ ಕಡೆ ಸ್ವಲ್ಪ ಎಣ್ಣೆ ಸವರಿ ಹೊಂಬಣ್ಣ ಬರುವವರೆಗೆ ಬೇಯಿಸಿ. ಬಿಸಿಬಿಸಿ ಪಾಲಕ್ ಪರೋಟವನ್ನು ತಾಜಾ ಮೊಸರು, ಬೆಣ್ಣೆ ಅಥವಾ ಉಪ್ಪಿನಕಾಯಿ ಜೊತೆ ಸವಿದರೆ ರುಚಿ ದುಪ್ಪಟ್ಟಾಗುತ್ತದೆ. ಮಕ್ಕಳ ಟಿಫಿನ್ ಬಾಕ್ಸ್ಗೂ ಇದು ಅತ್ಯುತ್ತಮ ಆಯ್ಕೆ.



