ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ವಾರಾಣಸಿಯಲ್ಲಿ ಕಾರ್ತಿಕ ಪೂರ್ಣಿಮೆಯ ಅಂಗವಾಗಿ ದೇವ ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
ನಗರದ ಗಂಗಾ ನದಿಯ 84 ಘಾಟ್‌ಗಳನ್ನು ಸುಮಾರು 11 ಲಕ್ಷ ಮಣ್ಣಿನ ದೀಪಗಳಿಂದ ಅಲಂಕರಿಸಲಾಗಿದ್ದು, ಇಡೀ ನಗರ ದೀಪಗಳ ಬೆಳಕಿನಲ್ಲಿ ಕಂಗೊಳಿಸುತ್ತಿದೆ. ದೇವ ದೀಪಾವಳಿಯ ನಂತರವೂ ಕೆಲ ದಿನಗಳ ಕಾಲ ದೀಪಗಳ ಅಲಂಕಾರ ಹಾಗೂ ಇನ್ನಿತರ ಕಾರ್ಯಕ್ರಮಗಳು ನಡೆಯಲಿವೆ.
https://www.instagram.com/reel/DQoQ2nHDFVm/?lqvp=cTltYTE4bmpubHpt
ಹಬ್ಬದ ಅಂಗವಾಗಿ ಗಂಗಾ ಆರತಿ, 3ಡಿ ಲೇಸರ್ ಶೋ, ಡ್ರೋನ್ ಪ್ರದರ್ಶನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಾವಿರಾರು ದೀಪಗಳ ಬೆಳಕಿನೊಂದಿಗೆ ಗಂಗಾ ನದಿಯ ಘಾಟ್‌ಗಳು ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಗಲಿವೆ. ದೇವತೆಗಳು ಸ್ವರ್ಗದಿಂದ ಭೂಮಿಗೆ ಇಳಿದು ದೀಪಾವಳಿ ಆಚರಿಸುತ್ತಾರೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ವಾರಾಣಸಿಯಲ್ಲಿ ದೇವ್ ದೀಪಾವಳಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ.
ದೇವ ದೀಪಾವಳಿಯನ್ನು ಪ್ರತಿ ವರ್ಷ ಕಾರ್ತಿಕ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಈ ದೇವ ದೀಪಾವಳಿ ಹಬ್ಬವನ್ನು ದೀಪಾವಳಿಯಾಗಿ ನಿಖರವಾಗಿ 15 ದಿನಗಳ ನಂತರ ಮುಖ್ಯವಾಗಿ ಗಂಗಾ ನದಿಯ ತಟದ ಕಾಶಿಯಲ್ಲಿ ಆಚರಿಸಲಾಗುತ್ತದೆ. ಈ ದಿನದಂದು ದೇವತೆಗಳು ಪವಿತ್ರ ಭೂಮಿ ಕಾಶಿಗೆ ಇಳಿದು ದೀಪಾವಳಿ ಆಚರಿಸುತ್ತಾರೆ ಎಂಬ ನಂಬಿಕೆ ಇದೆ.
https://www.instagram.com/reel/DPX7n1biMKd/?knvt=MTFkdHE4anh1OHNucg%3D%3D



