ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಡುಪಿಯ ಶ್ರೀಕೃಷ್ಣ ಮಠಕ್ಕೆ ಕರ್ನಾಟಕ ವಿಧಾನ ಪರಿಷತ್ ಸದಸ್ಯೆ, ನಟಿ ಉಮಾಶ್ರೀ ಭೇಟಿ ನೀಡಿದ್ದಾರೆ.
ಪರ್ಯಾಯ ಶ್ರೀ ಶಿರೂರು ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪರ್ಯಾಯ ಸಂದರ್ಭದಲ್ಲಿ ಮಠಕ್ಕೆ ಆಗಮಿಸಿದ ಅವರು ಶ್ರೀಕೃಷ್ಣನ ದರುಶನ ಪಡೆದು ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಮಠದ ದಿವಾನರಾದ ಉದಯಕುಮಾರ್ ಸರಳತ್ತಾಯ ಅವರು ಉಮಾಶ್ರೀ ಅವರಿಗೆ ಕೃಷ್ಣಮಂತ್ರ ಲೇಖನ ಯಜ್ಞದ ಪುಸ್ತಕವನ್ನು ನೀಡಿ, ಯಜ್ಞದ ಮಹತ್ವ ಹಾಗೂ ಅದರ ಧಾರ್ಮಿಕ ಹಿನ್ನೆಲೆಯನ್ನು ವಿವರಿಸಿದರು.



