Saturday, November 8, 2025

ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ

ಹೊಸದಿಗಂತ ಚಿತ್ರದುರ್ಗ


ಮೊಳಕಾಲ್ಮುರು ವಿಧಾನಸಭಾ ಸಭಾ ಕ್ಷೇತ್ರ ಎಸ್.ಟಿ. ಮೋರ್ಚಾ ನಾಯಕನಹಟ್ಟಿ ಮಂಡಲ ಹಿರೇಹಳ್ಳಿ ಗ್ರಾಮ ಪಂಚಾಯತ್ ರುದ್ರಮ್ಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 75ನೇ ಹುಟ್ಟುಹಬ್ಬದ ಪ್ರಯುಕ್ತ ಸೇವಾ ಪಾಕ್ಷಿಕ ಅಭಿಯಾನದಡಿಯಲ್ಲಿ ಶಾಲಾ ಮಕ್ಕಳಿಗೆ ಪುಸ್ತಕ, ಪೆನ್ ವಿತರಿಸಲಾಯಿತು.


ಈ ಸಂದರ್ಭದಲ್ಲಿ, ನಾಯಕನಹಟ್ಟಿಮಂಡಲ ಎಸ್‌ಟಿ ಮೋರ್ಚಾ ಅಧ್ಯಕ್ಷರು, ಹಿರೇಹಳ್ಳಿ ನಾಗರಾಜ್ ಮಂಡಲ ಅಧ್ಯಕ್ಷರಾದ ಮಲ್ಲೇಶಣ್ಣ, ಬಿಜೆಪಿ ಮುಖಂಡರಾದ ಪಾಪೇಶನಾಯಕ, ನಿಕಟಪೂರ್ವ ಅಧ್ಯಕ್ಷ ರಾಮರೆಡ್ಡಿ, ಮುಖಂಡರಾದ ಮನ್ನೆಕೋಟೆ ರವಿ, ಪ್ರಕಾಶರೆಡ್ಡಿ, ಬುತ ಅಧ್ಯಕ್ಷರು ಆದ ಪೂಜಾರಿ ಓಬಣ್ಣ, ಗ್ರಾಮದ ಮುಖಂಡರಾದ ಬೋರಯ್ಯ, ಮಂಜುನಾಥ್, ಶಿವು, ಓಬಣ್ಣ ಹಾಜರಿದ್ದರು.

error: Content is protected !!