Friday, September 26, 2025

ಭಾರತದ ಅತಿದೊಡ್ಡ ಬಯೋಎನರ್ಜಿ ಸಂಸ್ಥೆ ಟ್ರೂಅಲ್ಟ್‌ ಐಪಿಒ ಸೆ. 25ರಿಂದ ಆರಂಭ

ಹೊಸದಿಗಂತ ಬೆಂಗಳೂರು :

ಭಾರತದ ಅತಿದೊಡ್ಡ ಬಯೊ ಎನರ್ಜಿ ಉತ್ಪಾದಕ ಸಂಸ್ಥೆಯಾಗಿರುವ ಟ್ರೂ ಅಲ್ಟ್‌ ಐಪಿಒ ಗುರುವಾರ ಸೆ. 25ರಂದು ಚಂದಾದಾರಿಕೆ ಆರಂಭವಾಗಿದ್ದು ಸೆ. 29 ರವರೆಗೆ ಬಿಡ್‌ ಮಾಡಬಹುದಾಗಿದೆ. ಕಂಪನಿಯು ತನ್ನ ಷೇರುಗಳನ್ನು ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಲಿಸ್ಟಿಂಗ್ ಮಾಡಲಿದ್ದು ಸಂಭಾವ್ಯ ಲಿಸ್ಟಿಂಗ್‌ ದಿನಾಂಕ ಅಕ್ಟೋಬರ್ 3 ಎಂದು ನಿಗದಿಪಡಿಸಲಾಗಿದೆ.

ಸಂಸ್ಥೆಯು ಪ್ರತಿ ಷೇರಿನ ಬೆಲೆಯನ್ನು 472- 496 ರೂ ವರೆಗೆ ನಿಗದಿ ಪಡಿಸಿದ್ದು , ಹೂಡಿಕೆದಾರರು ಕನಿಷ್ಟ 30 ಇಕ್ವಿಟಿ ಷೇರುಗಳಿಗೆ ಬಿಡ್‌ ಮಾಡಬಹುದಾಗಿದೆ. ಆರಂಭಿಕ ಸಾರ್ವಜನಿಕ ಹಂಚಿಕೆಯ ಮೂಲಕ(ಐಪಿಒ) ಸಂಸ್ಥೆಯು 839 ಕೋಟಿ ರೂ ಸಂಗ್ರಹಿಸಲು ಮುಂದಾಗಿದೆ. ಹಂಚಿಕೆ ಒಟ್ಟೂ 750 ಕೋಟಿ ಹೊಸ ವಿತರಣೆಯಾಗಿದ್ದು, 18 ಲಕ್ಷ ಇಕ್ವಿಟಿ ಷೇರುಗಳು ಆಫರ್‍‌ ಫಾರ್‍‌ ಸೇಲ್‌ ಮೂಲಕ ಮಾರಾಟ ಮಾಡಲಿದೆ.

ಹೊಸ ಹಂಚಿಕೆ ಮೂಲಕ ಸಂಗ್ರಹಿಸಲಾದ ಹಣದಲ್ಲಿ 150.68 ಕೋಟಿ ರೂ ಹಣವನ್ನು ಎಥನಾಲ್‌ ಉತ್ಪಾದನೆಯಲ್ಲಿ ಧಾನ್ಯಗಳನ್ನು(ಗ್ರೈನ್ಸ್‌) ಹೆಚ್ಚುವರಿ ಕಚ್ಚಾ ವಸ್ತುವಾಗಿ ಬಳಸಿಕೊಳ್ಳಲು ಮಲ್ಟಿ ಫೀಡ್‌ ಸ್ಟಾಕ್‌ ಆಪರೇಶನ್‌ ಸ್ಥಾಪಿಸಲುವಲ್ಲಿ ಹೂಡಿಕೆ ಮಾಡಲಾಗುವುದು . ಹಾಗೇ ವರ್ಕಿಂಗ್‌ ಕ್ಯಾಪಿಟಲ್‌ ಅವಶ್ಯಕತೆಗಳಿಗೆ 425 ಕೋಟಿ ರೂ ಮೀಸಲಿಡಲಾಗುವುದು ಎಂದು ಸಂಸ್ಥೆ ಹೇಳಿದೆ. ಕಂಪನಿಯು ಪ್ರಸ್ತುತ ಮೊಲಾಸಸ್ ಮತ್ತು ಸಿರಪ್ ಆಧಾರಿತ ಫೀಡ್‌ಸ್ಟಾಕ್‌ನಲ್ಲಿ ನಾಲ್ಕು ಎಥೆನಾಲ್ ಉತ್ಪಾದನಾ ಡಿಸ್ಟಿಲರಿಗಳನ್ನು ನಿರ್ವಹಿಸುತ್ತಿದ್ದು, ಮಾರ್ಚ್ 31, 2025 ರ ಹೊತ್ತಿಗೆ 1,800 ಕೆಎಲ್‌ಪಿಡಿ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ.

ಈ ಆರಂಭಿಕ ಸಾರ್ವಜನಿಕ ಹಂಚಿಕೆಗೆ ಡ್ಯಾಮ್‌ ಕ್ಯಾಪಿಟಲ್‌ ಅಡ್ವೈಸರ್ಸ್ ಮತ್ತು ಎಸ್‌ಬಿಐ ಕ್ಯಾಪಿಟಲ್‌ ಮಾರ್ಕೆಟ್ ಬುಕ್‌ ರನ್ನಿಂಗ್‌ ಲೀಡ್‌ ಮ್ಯಾನೇಜರ್‍‌ಗಳಾಗಿದ್ದು , ಬಿಗ್‌ಶೇರ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಈ ಹಂಚಿಕೆಯ ರಿಜಿಸ್ಟ್ರಾರ್ ಆಗಿದೆ.

ಇದನ್ನೂ ಓದಿ