ನವರಾತ್ರಿ ಹಿನ್ನೆಲೆಯಲ್ಲಿ ದುರ್ಗಾ ದೇವಿಯನ್ನು ಶ್ರದ್ಧಾ, ಭಕ್ತಿಯಿಂದ ಪೂಜಿಸಲಾಗುತ್ತಿದೆ. ಈ ಒಂಬತ್ತು ದಿನಗಳಲ್ಲಿ ಕೆಲವರು ಕೆಲವು ವಿಶೇಷ ವಸ್ತುಗಳನ್ನು ತಮ್ಮ ಮನೆಗೆ ತರುತ್ತಾರೆ. ಈ ವಸ್ತುಗಳನ್ನು ಸಾಧ್ಯವಾದರೆ ಮನೆಗೆ ತನ್ನಿ. ಇದು ನಿಮ್ಮ ಏಳಿಗೆಗೆ ಕೆಲಸ ಮಾಡುತ್ತದೆ.
ನವರಾತ್ರಿಯ ಸಮಯದಲ್ಲಿ ಬೆಳ್ಳಿ ನಾಣ್ಯವನ್ನು ಮನೆಗೆ ತರುವುದು ಶುಭ ಸಂಕೇತ. ಬೆಳ್ಳಿಯನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ನವರಾತ್ರಿಯ ಒಂಬತ್ತು ದಿನಗಳವರೆಗೆ ಈ ನಾಣ್ಯವನ್ನು ಪೂಜಿಸುವುದರಿಂದ ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿಗೆ ಕೊರತೆ ಇರಲ್ಲ. ಬೆಳ್ಳಿ ನಾಣ್ಯ ತಂದು ಅದಕ್ಕೆ ಅರಿಶಿನ ಮತ್ತು ಕುಂಕುಮದಿಂದ ಪೂಜಿಸಿ, ಮನೆಯಲ್ಲಿ ಇಡುವುದರಿಂದ ಶುಭ ಫಲಿತಾಂಶಗಳು ದೊರೆಯುತ್ತವೆ.
ನಿಮ್ಮ ಮನೆಯಲ್ಲಿ ತುಳಸಿ ಗಿಡವಿಲ್ಲದಿದ್ದರೆ, ನವರಾತ್ರಿಯ ಸಮಯದಲ್ಲಿ ಒಂದನ್ನು ತರುವುದು ತುಂಬಾ ಶುಭಕರ. ತುಳಸಿಯನ್ನು ಲಕ್ಷ್ಮಿ ದೇವಿಯ ಮತ್ತೊಂದು ರೂಪವೆಂದು ಪರಿಗಣಿಸಲಾಗುತ್ತದೆ. ನವರಾತ್ರಿಯ ಸಮಯದಲ್ಲಿ ತುಳಸಿ ಗಿಡವನ್ನು ಪೂಜಿಸುವುದರಿಂದ ದೇವಿಯ ಆಶೀರ್ವಾದ ಸಿಗುತ್ತದೆ. ಈ ಒಂಬತ್ತು ದಿನಗಳ ಕಾಲ ತುಳಸಿ ಗಿಡವನ್ನು ಮನೆಗೆ ತಂದು ಪೂಜಿಸುವುದರಿಂದ ಮನೆಯಲ್ಲಿ ಸಂತೋಷ ಹಾಗೂ ಸಮೃದ್ಧಿ ಹೆಚ್ಚಾಗುತ್ತದೆ. ತುಳಸಿ ಗಿಡಕ್ಕೆ ಪ್ರತಿದಿನ ನೀರು ಹಾಕುವುದು, ದೀಪ ಹಚ್ಚುವುದರಿಂದ ಮನೆಗೆ ಸಕಾರಾತ್ಮಕ ಶಕ್ತಿ ಪ್ರವೇಶಿಸುತ್ತದೆ ಎಂದು ನಂಬಲಾಗುತ್ತದೆ.
ನವರಾತ್ರಿ ಪೂಜೆಯ ಸಮಯದಲ್ಲಿ ದುರ್ಗಾ ದೇವಿಗೆ ಪರಿಮಳಯುಕ್ತ ಹೂವುಗಳನ್ನು ಅರ್ಪಿಸುವುದು ಬಹಳ ಮುಖ್ಯ. ಸಂಪಿಗೆ, ಗುಲಾಬಿ, ಮಲ್ಲಿಗೆ ಮತ್ತು ಇತರ ಪರಿಮಳಯುಕ್ತ ಹೂವುಗಳನ್ನು ಮನೆಗೆ ತಂದು ದೇವಿಗೆ ಅರ್ಪಿಸುವುದು ಅದೃಷ್ಟವನ್ನು ತರುತ್ತದೆ. ಹೂವುಗಳ ಸುವಾಸನೆ ಮನೆಯಲ್ಲಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ.
ನವರಾತ್ರಿಯ ಸಮಯದಲ್ಲಿ ಮನೆಯನ್ನು ಸ್ವಚ್ಛಗೊಳಿಸಲು ಗಂಗಾ ಜಲ ಪೂಜೆಗೆ ಮೊದಲು ಇಡೀ ಮನೆಯನ್ನು ಗಂಗಾ ಜಲದಿಂದ ಶುದ್ಧೀಕರಿಸುವುದರಿಂದ ಅದರ ಶುದ್ಧತೆ ಹೆಚ್ಚಾಗುತ್ತದೆ. ಗಂಗಾ ಜಲ ಶುದ್ಧತೆ ಮತ್ತು ಸ್ವಚ್ಛತೆಯ ಸಂಕೇತವಾಗಿದೆ. ಮನೆಯಲ್ಲಿ ಇಡುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಎಂದು ನಂಬಲಾಗಿದೆ.
ನವರಾತ್ರಿ ಪೂಜೆಯ ಸಮಯದಲ್ಲಿ ತಾಮ್ರದ ಪಾತ್ರೆಗಳನ್ನು ಬಳಸುವುದು ಸಹ ಶುಭ. ತಾಮ್ರವನ್ನು ಅತ್ಯಂತ ಪವಿತ್ರ ಲೋಹವೆಂದು ಪರಿಗಣಿಸಲಾಗುತ್ತದೆ. ಕಲಶ ಸ್ಥಾಪನೆಗೆ ತಾಮ್ರದ ಪಾತ್ರೆಯನ್ನು ಬಳಸುವುದು ದೇವಿಯನ್ನು ಸಂತೋಷಪಡಿಸುತ್ತದೆ. ಈ ಪಾತ್ರೆಯಲ್ಲಿ ಅರಿಶಿನ, ಕುಂಕುಮ, ಅಕ್ಕಿ ಹಾಗೂ ನಾಣ್ಯವನ್ನು ಇಡುವ ಮೂಲಕ ಪೂಜೆ ಮಾಡುವುದು ಶುಭ ಫಲಿತಾಂಶಗಳನ್ನು ನೀಡುತ್ತದೆ.