May 13, 2026
Wednesday, May 13, 2026
spot_img

ತಮಿಳುನಾಡಿನಲ್ಲಿ ರಾಜಕೀಯ ಹೈಡ್ರಾಮಾ: ವಿಜಯ್ ಗೆ ಬೆಂಬಲಿಸಿದ 25 ಶಾಸಕರನ್ನು ವಜಾಗೊಳಿಸಿದ ಎಐಎಡಿಎಂಕೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡು ರಾಜಕೀಯದಲ್ಲಿ ಹೈಡ್ರಾಮವೇ ನಡೆಯುತ್ತಿದ್ದು, ಸಿಎಂ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಸರ್ಕಾರಕ್ಕೆ ವಿಧಾನಸಭೆಯಲ್ಲಿ ವಿಶ್ವಾಸಮತದ ವೇಳೆ ಬೆಂಬಲ ನೀಡಿದ್ದ ಎಐಎಡಿಎಂಕೆಯ 25 ಬಂಡಾಯ ಶಾಸಕರನ್ನು ಪಕ್ಷದಿಂದ ವಜಾಗೊಳಿಸಿ ಎಡಪ್ಪಾಡಿ ಪಳನಿಸ್ವಾಮಿ ಆದೇಶ ಹೊರಡಿಸಿದ್ದಾರೆ.

ಹಿರಿಯ ನಾಯಕರಾದ ಸಿವಿ ಶಣ್ಮುಗಂ ಸೇರಿದಂತೆ 25 ಶಾಸಕರು ವಿಜಯ್ ನೇತೃತ್ವದ ಸರ್ಕಾರದ ಪರವಾಗಿ ಮತ ಚಲಾಯಿಸುವ ಮೂಲಕ ಪಕ್ಷದ ವಿಪ್ ಉಲ್ಲಂಘಿಸಿದ್ದಾರೆ. ಹೀಗಾಗಿ ಅವರನ್ನು ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ವಜಾಗೊಳಿಸಲಾಗಿದೆ ಎಂದು ತಿಳಿಸಿದರು.

ತಮಿಳುನಾಡು ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ ವಿಜಯ್ ಸರ್ಕಾರ ಉಳಿಸಿಕೊಳ್ಳಲು 117 ಮತಗಳ ಅಗತ್ಯವಿತ್ತು. ಆದರೆ, ವಿಜಯ್ ಪರವಾಗಿ ಒಟ್ಟು 144 ಮತಗಳು ಚಲಾವಣೆಯಾದವು. ತಿವಿಕೆ ಸ್ವಂತ 107 ಶಾಸಕರ ಬಲದ ಜೊತೆಗೆ, ಕಾಂಗ್ರೆಸ್‌ನ 5, ಎಐಎಡಿಎಂಕೆಯ 25 ಬಂಡಾಯಗಾರರು ಹಾಗೂ ಸಿಪಿಐ, ಸಿಪಿಎಂ, ವಿಸಿಕೆ ಮತ್ತು ಎಎಂಎಂಕೆ ಪಕ್ಷಗಳ ಬೆಂಬಲದೊಂದಿಗೆ ಸರಕಾರ ಭದ್ರಗೊಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !