Tuesday, September 30, 2025

Shopping Street| ಪ್ರಪಂಚದಲ್ಲೇ ಅತಿ ದುಬಾರಿ ಶಾಪಿಂಗ್ ಸ್ಟ್ರೀಟ್ ಯಾವುದು? ಎಲ್ಲಿದೆ ಗೊತ್ತಾ?

ಶಾಪಿಂಗ್ ಅಂದ್ರೆ ಕೇವಲ ಖರೀದಿ ಮಾಡೋದು ಮಾತ್ರವಲ್ಲ, ಅದು ಐಷಾರಾಮಿ ಜೀವನ ಶೈಲಿಯ ಸಂಕೇತ ಅಂತಾನೂ ಹೇಳ್ತಾರೆ. ಜಗತ್ತಿನ ಪ್ರತಿ ದೊಡ್ಡ ನಗರದಲ್ಲಿಯೇ ದುಬಾರಿ ಶಾಪಿಂಗ್ ಬೀದಿಗಳು ಗ್ರಾಹಕರನ್ನು ಆಕರ್ಷಿಸುತ್ತವೆ. ಆದರೆ ವಿಶ್ವದ ಅತಿ ದುಬಾರಿ ಶಾಪಿಂಗ್ ಬೀದಿ ಲಂಡನ್, ನ್ಯೂಯಾರ್ಕ್ ಅಥವಾ ಪ್ಯಾರಿಸ್ ನಲ್ಲಿ ಇಲ್ಲ. ಮತ್ತೆಲ್ಲಿ ಅಂತೀರಾ? ಅದೇ ನೋಡಿ ಇಟಲಿಯ ಮಿಲಾನ್‌ನ ವಿಯಾ ಮೊಂಟೆ ನೆಪೋಲಿಯನ್ ಸ್ಟ್ರೀಟ್.

ಕೆಲವು ವರದಿಗಳ ಪ್ರಕಾರ ವಿಯಾ ಮೊಂಟೆ ನೆಪೋಲಿಯನ್ ನ್ಯೂಯಾರ್ಕ್‌ಅನ್ನು ಹಿಂದಿಕ್ಕಿ ಜಗತ್ತಿನ ಅತಿ ದುಬಾರಿ ಶಾಪಿಂಗ್ ಬೀದಿಯ ಸ್ಥಾನವನ್ನು ಪಡೆದಿದೆ. ಇಲ್ಲಿ ಗುಚ್ಚಿ, ಪ್ರಾಡಾ, ಲೂಯಿಸ್ ವಿಟ್ಟಾನ್, ಶನೆಲ್ ಹೀಗೆ ಹೈ-ಎಂಡ್ ಫ್ಯಾಷನ್ ಬ್ರ್ಯಾಂಡ್ಗಳು ಮಾರಾಟಗೊಳ್ಳುತ್ತವೆ. ಸ್ತ್ರೀ, ಪುರುಷ ಉಡುಪುಗಳಿಂದ ಹಿಡಿದು ಚಿನ್ನಾಭರಣಗಳ ಡಿಸೈನರ್ ಅಂಗಡಿಗಳೂ ಕೂಡ ಇಲ್ಲಿವೆ.

ವಿಯಾ ಮೊಂಟೆ ನೆಪೋಲಿಯನ್ ಬೀದಿ ಐತಿಹಾಸಿಕ ಪ್ರಾಮುಖ್ಯತೆಯನ್ನೂ ಹೊಂದಿದ್ದು, ಫ್ಯಾಷನ್ ಪ್ರಿಯರಿಗೆ ಇದು ಸ್ವರ್ಗದಂತೆ ತೋರುತ್ತದೆ. ಈ ಬೀದಿಯಲ್ಲಿ ಒಣದು ಸಣ್ಣ ವಸ್ತು ಖರೀದಿ ಮಾಡಲು ಕನಿಷ್ಠ 2 ಲಕ್ಷ ರೂಪಾಯಿ ನಿಮ್ಮ ಕೈಯಲ್ಲಿರಬೇಕು ಅದಕ್ಕಿಂತ ಕಡಿಮೆ ಹಣ ಇರುವವರು ಇಲ್ಲಿ ಕಾಲಿಡಲು ಕೂಡ ಯೋಗ್ಯರಲ್ಲ ಅನ್ನೋದು ಖಂಡಿತ.

ಇಲ್ಲಿ ಒಂದು ಕಮರ್ಷಿಯಲ್ ಅಂಗಡಿ ಓಪನ್ ಮಾಡಲು ಪ್ರತಿ ಸ್ಕ್ವೇರ್ ಮೀಟರ್ಗೆ 1.7 ಲಕ್ಷ ರೂಪಾಯಿ ಬಾಡಿಗೆ ನೀಡಬೇಕು. ಈ ಬೀದಿಯ ಬೇಡಿಕೆ ಹೆಚ್ಚಿರುವುದರಿಂದ, ಅಂಗಡಿಗಳ ವ್ಯಾಪಾರ ಕೋಟಿ ಮಟ್ಟದ ವ್ಯವಹಾರಗಳನ್ನು ಮಾಡುತ್ತಿದೆ.

ವಿಯಾ ಮೊಂಟೆ ನೆಪೋಲಿಯನ್ ಸ್ಟ್ರೀಟ್ ಕೇವಲ ಶಾಪಿಂಗ್ ಬೀದಿ ಮಾತ್ರವಲ್ಲ, ಐಷಾರಾಮಿ ಫ್ಯಾಷನ್ ಚಿಹ್ನೆಯೂ ಆಗಿದೆ. ಇದರ ದುಬಾರಿ ಬೆಲೆ ಮತ್ತು ಪ್ರಸಿದ್ಧ ಬ್ರ್ಯಾಂಡ್ಗಳ ಉಪಸ್ಥಿತಿಯಿಂದ ಇದು ಜಾಗತಿಕ ಮಟ್ಟದಲ್ಲಿ ಶಾಪಿಂಗ್ ಪ್ರೇಮಿಗಳಿಗೆ ಒಂದು ಸಲ ಭೇಟಿ ನೀಡುವ ಒಂದು ಪ್ರಮುಖ ಸ್ಥಳವಾಗಿರೋದಂತು ಸತ್ಯ.